Category: Davanagere

15 ವಿಕಲಚೇತನರಿಗೆ ಯಂತ್ರಚಾಲಿತ ವಾಹನ ವಿತರಿಸಿದ ಶಾಸಕ ಎಸ್‌ಎಆರ್

15 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಶಾಸಕ ಎಸ್.ಎ. ರವೀಂದ್ರ ನಾಥ್ ಅವರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆವರಣದಲ್ಲಿ ಆಯ್ದ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಖಾಸಗೀಕರಣ ಖಂಡಿಸಿ ಎಲ್‌ಐಸಿ ನೌಕರರ ಸಂಘದ ಪ್ರತಿಭಟನೆ

ಕೇಂದ್ರ ಸರ್ಕಾರವು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ನಿಂತಿದ್ದು, ದೇಶ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಕ್ರಮಕ್ಕೆ ಎಲ್‌ಐಸಿ ನೌಕರರ ಸಂಘ ಮತ್ತು ಎಲ್‌ಐಸಿ ಏಜೆಂಟ್ಸ್ ಯೂನಿಯನ್ ಸದಸ್ಯರು ವಿರೋಧ ವ್ಯಕ್ತಪಡಿಸಿ, ಎಲ್‌ಐಸಿ ಕಚೇರಿ ಮುಂದೆ ನಿನ್ನೆ ಪ್ರತಿಭಟನೆ ನಡೆಸಿದರು.

ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ

ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ, ಅಂತಹವರಿಗೆ ದಿನಸಿ ಕಿಟ್ ವಿತರಿಸುತ್ತಿರುವ ಶಿಂಷಾ ಫೌಂಡೇಷನ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಸಿಎಂ ಬೊಮ್ಮಾಯಿ ಅವರಿಗೆ ಜಿಲ್ಲಾ ಕಸಾಪ ಅಭಿನಂದನೆ

ರಾಜ್ಯದ ನೂತನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಸಚಿವ ರಾಗಿದ್ದ ಸಂದರ್ಭ ದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಾಗಿದ್ದ ಸಮಾರಂಭವೊಂದರಲ್ಲಿ ಶಾಲು ಹೊದಿಸಿ ಸನ್ಮಾನಿಸಿದ್ದರು.

ಎಸ್‌ವಿಆರ್‌ಗೆ ಸಚಿವ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದ ಮುಖಂಡರ ಒತ್ತಾಯ

ಜಗಳೂರು ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರಿಗೆ ವಾಲ್ಮೀಕಿ ಸಮುದಾಯದ ಕೋಟಾದಡಿ ಸಚಿವ ಸ್ಥಾನ ನೀಡಲೇಬೇಕು ಎಂದು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಒತ್ತಾಯಿಸಿದ್ದಾರೆ.

ಅಪ್ರಾಪ್ತೆಯ ಅತ್ಯಾಚಾರ, ಕೊಲೆ : ಮರಣ ದಂಡನೆಗೆ ಡಿಎಸ್‍ಎಸ್ ಆಗ್ರಹ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯು ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಿನ್ನೆ ಪ್ರತಿಭಟನೆ ನಡೆಸಿತು.

ಬೊಮ್ಮಾಯಿ ಆಯ್ಕೆ ರಾಜಕೀಯ ಅಸ್ಥಿರತೆ ಹೋಗಲಾಡಿಸಿದೆ

ಚಿತ್ರದುರ್ಗ : ರಾಜಕಾರಣ ಸಾರ್ವಜನಿಕರ ಮತ್ತು ರಾಜಕಾರಣಿಗಳ ನಿದ್ದೆಯನ್ನು ಕೆಡಿಸುತ್ತದೆ. ಕಾರಣ ರಾಜಕೀಯ ಅಸ್ಥಿರತೆ. ಇದು ರಾಜಕಾರಣವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇಲ್ಲಿ ಸ್ಥಿರತೆ ಬೇಕಿದೆ. ಅದು ಈಗ ಆಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.

ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬಿದ ಹರಿಹರದ ನ್ಯಾಯಾಧೀಶರು

ಹರಿಹರ : ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಯೋಗಕ್ಷೇಮದಿಂದ ಇರುವಂತೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಯಶವಂತ್ ಅವರು ಗಂಗಾನಗರದ ನಿವಾಸಿಗಳಿಗೆ ಹೇಳಿದರು.

ಸಾಧನಾ ವೃದ್ಧಾಶ್ರಮಕ್ಕೆ ಭೋಜನ ಜತೆ ಆಹಾರ ದಿನಸಿ ವಿತರಣೆ

ತುರ್ಚಘಟ್ಟದ ಸಾಧನಾ ವೃದ್ಧಾಶ್ರಮ ಮತ್ತು‌ ಅನಾಥಾಶ್ರಮದಲ್ಲಿ ನಗರದ ಆರ್ಯ ವೈಶ್ಯ ಮುಖಂಡರು, ಎಸ್.ಕೆ.ಪಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಪಿ.ನಾಗಭೂಷಣ್ ಅವರ 75ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ರೆಡ್‌ಕ್ರಾಸ್‌ನಿಂದ ಗರ್ಭಿಣಿಯರಿಗೆ ಆಹಾರದ ಕಿಟ್

ಎಲೆಬೇತೂರು ಗ್ರಾಮದಲ್ಲಿ ಅಜೀಮ್ ಪ್ರೇಮ್‌ಜೀ ಫೌಂಡೇಷನ್ ಸಹಾಯದಿಂದ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಕೊರೊನಾ ಸಂಕಷ್ಟದಲ್ಲಿ `ಗರ್ಭಿಣಿಯರಿಗೆ ಪ್ರೋಟೀನ್‌ಯುಕ್ತ ಆಹಾರದ ಕಿಟ್’ಗಳನ್ನು ವಿತರಿಸುವ ಕಾರ್ಯಕ್ರಮವು ಗ್ರಾಮದ ದುರ್ಗಾಂಬಿಕಾ ಸಮುದಾಯ ಭವನದಲ್ಲಿ ಇಂದು ನಡೆಯಿತು.

ತೆಪ್ಪದಲ್ಲಿ ಸಾಗಿ ನೆರೆ ಸಂತ್ರಸ್ತರಿಗೆ ವಚನಾನಂದ ಶ್ರೀಗಳ ಸಾಂತ್ವನ

ವರದಾ ಮತ್ತು ಧರ್ಮ ಈ ಎರಡೂ ನದಿಗಳ ಸಂಗಮ ಸ್ಥಳವಾದ ಹಾನಗಲ್‌ ತಾಲ್ಲೂಕಿನ ಕೂಡಲ ಗ್ರಾಮವು ಜಲ ಪ್ರವಾಹದಿಂದ ತೊಂದರೆಗೆ ಸಿಲುಕಿಕೊಂಡು ಗ್ರಾಮ ದ್ವೀಪದಂತಾಗಿದೆ.

ಜೋಗಕ್ಕೆ ವಿಶೇಷ ಸಾರಿಗೆ ಬಸ್

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರ ದಿಂದ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆರಂಭಿಸಲಾಗಿದೆ. ಭಾನುವಾರದಂದು ಮಾತ್ರ ಈ ಸೇವೆ ಪ್ರಾರಂಭಿಸಲಾಗಿತ್ತು. 

error: Content is protected !!