ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ನಿಂದ ವಿಶ್ವ ಮಧುಮೇಹ ಮೇಳ
ದಿ.ಆಲೂರು ಚಂದ್ರಶೇಖರಪ್ಪನವರ ಜ್ಞಾಪಕಾರ್ಥ ಹಾಗೂ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ 36ನೇ ವಿಶ್ವ ಮಧುಮೇಹ ಮೇಳ ಕಾರ್ಯಕ್ರಮ ಶನಿವಾರ ನಡೆಯಿತು.
ದಿ.ಆಲೂರು ಚಂದ್ರಶೇಖರಪ್ಪನವರ ಜ್ಞಾಪಕಾರ್ಥ ಹಾಗೂ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ 36ನೇ ವಿಶ್ವ ಮಧುಮೇಹ ಮೇಳ ಕಾರ್ಯಕ್ರಮ ಶನಿವಾರ ನಡೆಯಿತು.
ನಗರದ ಹೊರ ವಲಯದ ರಿಂಗ್ ರಸ್ತೆಗೆ ಯೋಜಿಸಲಾಗಿದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಸಭಾಭವನದ ಕಟ್ಟಡವನ್ನು ಶನಿವಾರ ದೂಡಾ ವತಿಯಿಂದ ತೆರವುಗೊಳಿಸಲಾಗಿದೆ.
ಹಸಿರು ಪಟಾಕಿ ಜೊತೆಗೆ ನಿಷೇಧಿತ ಪಟಾಕಿಯನ್ನೂ ಸಹ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ ಲ್ಲಿ ಇಂದು ದಾಳಿ ಕಾರ್ಯಾಚರಣೆ ನಡೆಸಲಾಯಿತು.
ಅಶ್ವಯುಜ ಕೃಷ್ಣ ತ್ರಯೋದಶಿ ಅಂದರೆ ಧನ ತ್ರಯೋದಶಿ, ಧನ್ವಂತರಿ ಜಯಂತಿಯನ್ನು ಭಾರತೀಯರು ಅನಾದಿ ಕಾಲದಿಂದಲೂ ಆಚರಿಸುತ್ತಾ ಬಂದಿರುತ್ತಾರೆ. ಆರೋಗ್ಯದಾತನಾದ ಧನ್ವಂತರಿ ದೇವರನ್ನು ಸ್ಮರಿಸಿ ಶ್ರದ್ಧಾಭಕ್ತಿಯಿಂದ ಪೂಜಿಸುವುದೇ ಧನ್ವಂತರಿ ಜಯಂತಿಯ ವಿಶೇಷತೆ ಆಗಿದೆ
ಹೊನ್ನಾಳಿ ಹಿರೇಕಲ್ಮಠದಲ್ಲಿ ಈಚೆಗೆ ನಡೆದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಸಮಾರಂಭದಲ್ಲಿ ದಾವಣಗೆರೆೆಯ ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಸುಕನ್ಯಾ ತ್ಯಾವಣಗಿ ಅವರು ಸಂಪಾದಿಸಿದ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ನಗರದ ಬೈಪಾಸ್ ರಸ್ತೆ ಪಕ್ಕದ ಬನಶಂಕರಿ ಬಡಾವಣೆಯನ್ನು ವಿಶೇಷ ಅನುದಾನದಡಿ ಅಭಿವೃದ್ದಿಪಡಿಸ ಲಾಗುವುದು. ಇಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಭರವಸೆ ನೀಡಿದ್ದಾರೆ.
ಸರ್ಕಾರಿ ಸ್ವಾಮ್ಯ, ಖಾಸಗಿ ಸೇರಿದಂತೆ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಮಾರಾಟವಾಗುತ್ತಿರುವ ಬಿಎಸ್-6 ಇಂಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ನಗರದಲ್ಲಿರುವ ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ಅವರನ್ನು ಭೇಟಿ ಮಾಡಿ, ಸನ್ಮಾನಿಸಿದರು.
ಕದಳಿ ಮಹಿಳಾ ವೇದಿಕೆಯ ನಗರ ಘಟಕದಿಂದ 118ನೇ ಕದಳಿ ಕಮ್ಮಟದಲ್ಲಿ 151ನೇ ಗಾಂಧಿ ಜಯಂತಿ ಹಾಗೂ ಲಿಂ. ಷಡಾಕ್ಷರಪ್ಪ ಮತ್ತು ಅಂಜಿನಮ್ಮ ಬಿ.ಕಲ್ಪನಹಳ್ಳಿ ಅವರ ದತ್ತಿ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ನಡೆಸಲಾಯಿತು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಗೈರು ಹಾಜರಿಗೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವಿನೋಬನಗರದ 2ನೇ ಮುಖ್ಯರಸ್ತೆ ಅಮಿತ್ ಚಿತ್ರಮಂದಿರದ ಮುಂಭಾಗ ಇರುವ ಖಾಲಿ ಜಾಗದಲ್ಲಿ ಕಸದ ರಾಶಿಯು ಗಬ್ಬು ವಾಸನೆಯಿಂದ ತುಂಬಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದಾಗಿ ಕನ್ನಡ ಕನಿಷ್ಠ ಎಂಬ ಭಾವನೆ ಬೆಳೆಯುತ್ತಿದೆ, ಕನ್ನಡದ ಮಕ್ಕಳು ತಮ್ಮನ್ನು ತಾವು ತಿರಸ್ಕಾರದಿಂದ ನೋಡುತ್ತಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ವಿಷಾದಿಸಿದ್ದಾರೆ.