Category: Davanagere

ಹಡಗಲಿ : ಮೈಲಾರದಲ್ಲಿ ಮಹಿಳಾ ಸ್ನೇಹಿ ಗ್ರಾಮಸಭೆ

ಹೂವಿನಹಡಗಲಿ : ತಾಲ್ಲೂಕಿನ ಮೈಲಾರ ಗ್ರಾಮದ ಸಮುದಾಯ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯ್ತಿ ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ  ಮಹಿಳಾ ಸ್ನೇಹಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.

ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಗ್ರಮಾನ್ಯ

ಹೂವಿನಹಡಗಲಿ : ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಶಿಷ್ಟಾಚಾರ, ಶಿಸ್ತು, ಸಮಯಪ್ರಜ್ಞೆ ಮುಂತಾದ ಸುಸಂಸ್ಕೃತಿಯ ಜೀವನ ರೂಪಿಸುವಲ್ಲಿ ಪೋಷಕರು ಮೊದಲು ಅನುಸರಿಸಿ ಪಾಲಿಸಿದಾಗ ಅದಕ್ಕೆ ನೈತಿಕತೆ ಇರುತ್ತದೆ.

ಆಶ್ರಯ ಮನೆಗಳ ತೆರವಿನ ಕಿರುಕುಳ: ಸೂರು ಉಳಿಸಲು ಮನವಿ

ಸರ್ಕಾರದಿಂದ ನೀಡಲಾದ ಆಶ್ರಯ ಮನೆಗಳನ್ನು ತೆರವುಗೊಳಿಸುವುದಾಗಿ ಭೂಮಿ ನೀಡಿದ್ದ ಖಾಸಗಿ ವ್ಯಕ್ತಿಯು ಕಿರುಕುಳ ನೀಡುತ್ತಿದ್ದು, ನಮಗೆ ಆಶ್ರಯ ಮನೆ ಉಳಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿಂದು ಹರಿಹರ ತಾಲ್ಲೂಕಿನ ಮಳಲಹಳ್ಳಿ ಗ್ರಾಮದ ಫಲಾನುಭವಿಗಳು ಉಪವಿಭಾಗಾಧಿಕಾರಿ ಮೊರೆ ಹೋದರು.

ವಿಜಾನದ ಸತ್ಯಾನ್ವೇಷಣೆ ಮರೆ

ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೇಯೇ ವಿನಃ ವಿಜ್ಞಾನದ ಮಹತ್ವದ ನಿಜವಾದ ಸತ್ಯಾನ್ವೇಷಣೆ ಆಗುತ್ತಿಲ್ಲ.

ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ ಸ್ಪೋಟಕ ವಸ್ತುಗಳ ಜಪ್ತು

ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ  ನಡೆಸಿರುವ ಮಾಯಕೊಂಡ ಪೊಲೀಸರು ಓರ್ವನ ಬಂಧಿಸಿ, ಸ್ಫೋಟಕ ವಸ್ತುಗಳು ಸೇರಿದಂತೆ 1 ಲಕ್ಷದ 15 ಸಾವಿರದ 934 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗುರುಗಳೇ ವಿದ್ಯಾರ್ಥಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣ

ಶಿಕ್ಷಣ ನೀಡುವ ಗುರುಗಳೇ ವಿದ್ಯಾರ್ಥಿಗಳಿಗೆ ಸರ್ಕಾರದ ಶಿಕ್ಷಣ ಸುಧಾರಣಾ ನೀತಿಯಿಂದಾಗಿ ಹೆದರಿ ಪಾಠ ಹೇಳಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಯಾಮರಣ ಕಾನೂನು ಜಾರಿಗೆ ಶ್ರಮಿಸಿದ ಹೋರಾಟಗಾರ್ತಿ ಮತ್ತು ಹೊಂಡದ ರಸ್ತೆ ಶಾಲೆಯ ವಿಶ್ರಾಂತ ಶಿಕ್ಷಕಿ ಹೆಚ್.ಬಿ. ಕರಿಬಸಮ್ಮ ಖೇದ ವ್ಯಕ್ತಪಡಿಸಿದರು.

ವಂಚನೆ ಪ್ರಕರಣ: ಕೋಳಿ ಸಾಕಾಣಿಕೆದಾರರ ಮನವಿ

ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಗೆ ಜಗಳೂರು ತಾಲ್ಲೂಕಿನ ಗೋಗುದ್ದು ಗ್ರಾಮದವರಾದ ನಿಜಾಮುದ್ದೀನ್ ಮತ್ತವರ ಸಹೋದರ ತಾಜುದ್ದೀನ್ ಎಂಬುವವರು ನಿಯಮಾವಳಿ ಪ್ರಕಾರ ಕೋಳಿಗಳನ್ನು ನೀಡದೆ ಬೇರೆಯವರಿಗೆ ಮಾರಾಟ ಮಾಡಿ ಕಂಪನಿಗೆ ದ್ರೋಹ ಬಗೆದಿದೆ.

ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿಗಾಗಿ ಹಕ್ಕೊತ್ತಾಯ ಚಳುವಳಿ

ವೀರಶೈವ ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಸಮಿತಿ ಜಿ‌ಲ್ಲಾ ಘಟಕದಿಂದ ಹಕ್ಕೊತ್ತಾಯ ಚಳುವಳಿ ನಿನ್ನೆ  ನಗರದಲ್ಲಿ ನಡೆಯಿತು.

ನೀರಿನ ಕಂದಾಯ ವಸೂಲಿಗಿಳಿದ ಪಾಲಿಕೆ

ಕಂದಾಯ ವಸೂಲಿ ಕಾರ್ಯಾಚರಣೆ ನಡೆಸಿದ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ನೇತೃತ್ವದ ತಂಡವು ನೀರಿನ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಹೋಟೆಲ್, ಲಾಡ್ಜ್‍ಗಳಿಂದ ನೀರಿನ ಕಂದಾಯ ವಸೂಲಿ ಮಾಡಿತು.

error: Content is protected !!