Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ನಾಳೆ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಎಜುಕೇಶನಲ್ ಟ್ರಸ್ಟ್ ಇವರ ವತಿಯಿಂದ  ನಾಡಿದ್ದು ದಿನಾಂಕ 14 ರಂದು ಬೆಳಿಗ್ಗೆ 10.30 ಕ್ಕೆ ಡಾ. ಮಹಾಂತಸ್ವಾಮಿ ಪದವಿ ಪೂರ್ವ ಕಾಲೇಜಿನ ಉದ್ಘಾಟನೆ, ಪಂಚಮಸಾಲಿ ಸಮಾ ಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ

ಹುಬ್ಬಳ್ಳಿಯಲ್ಲಿ ನಾಳೆ ಉಪ್ಪಾರ ವಧು-ವರರ ಸಮಾವೇಶ

ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಮತ್ತು ವಿಶ್ವ ಭಗೀರಥ ಟ್ರಸ್ಟ್ ಪರಿವಾರದಿಂದ ನಾಡಿದ್ದು ದಿನಾಂಕ 14 ರ ಭಾನುವಾರ   ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ರಾಷ್ಟ್ರಮಟ್ಟದ ಉಪ್ಪಾರ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ.

ನಟಿ, ನಿರೂಪಕಿ ಅಪರ್ಣಾ ನಿಧನ

ಕನ್ನಡ ಚಿತ್ರ ರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ನಿಧನರಾಗಿದ್ದಾರೆ. ದೀರ್ಘಕಾಲದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ, ಬನಶಂಕರಿಯ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.

ಕುರಿ, ಮೇಕೆ ಸಾಕಾಣಿಕೆ ತರಬೇತಿ

ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು  ಮೇಕೆ ಸಾಕಾಣಿಕೆ ತರಬೇತಿಯನ್ನು ಇದೇ ದಿನಾಂಕ 15 ಮತ್ತು 16 ರಂದು ಆಯೋಜಿಸ ಲಾಗಿದೆ ಎಂದು  ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೌಭಾಗ್ಯ ಬೀಳಗಿಮಠ್ ಅವರಿಗೆ ಅಯೋಧ್ಯೆಯಲ್ಲಿ ನಾಳೆ ಸನ್ಮಾನ

ನಗರದ ಸೌಭಾಗ್ಯ ಬೀಳಗಿಮಠ್ ಅವರು ಈ ಸಾಲಿನ ಯುಪಿಎಸ್ಇ ಪರೀಕ್ಷೆಯಲ್ಲಿ ಭಾರತಕ್ಕೆ 101ನೇ ರಾಂಕ್ ಗಳಿಸಿದ್ದು, ಅವರಿಗೆ ನಾಡಿದ್ದು ದಿನಾಂಕ 13ರ ಶನಿವಾರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನವದೆಹಲಿ `ಸಂಕಲ್ಪ’ ಸಂಸ್ಥೆಯವರು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನಗರದಲ್ಲಿ ಇಂದು ಸಿದ್ದೇಶ್ವರರಿಂದ ಸಾರ್ವಜನಿಕರ ಭೇಟಿ

ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇಂದು ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.

ಪವನ್‌ಗೆ ಬಂಗಾರದ ಪದಕ ಅಂತರರಾಷ್ಟೀಯ ಸ್ಪರ್ಧೆಗೆ ಆಯ್ಕೆ

ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ನಗರದ ಚಾಣಕ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ತೃತೀಯ ಬಿ.ಎ ವಿದ್ಯಾರ್ಥಿ ಪಿ.ಎಚ್‌. ಪವನ್ ಅಂತರರಾಷ್ಟೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ನಿಟುವಳ್ಳಿಯಲ್ಲಿ ಇಂದು ಶಿವರಾಜ್ ಕುಮಾರ್ ಹುಟ್ಟು ಹಬ್ಬ

ಅಖಿಲ ಕರ್ನಾಟಕ ಯುವರಾಜ್‌ಕಮಾರ್ ಅಭಿಮಾನಿಗಳ ಸಂಘ  ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 12 ರ ಶುಕ್ರವಾರ ಸಂಜೆ 6.30 ಕ್ಕೆ ನಿಟುವಳ್ಳಿ ಮಣಿಕಂಠ ವೃತ್ತದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಜನ್ಮ ದಿನ ಆಚರಿಸಲಾಗುವುದು

ಜನಸಂಖ್ಯೆ ತಡೆದಿದ್ದಕ್ಕೆ ದುಪ್ಪಟ್ಟು ಹೊಡೆತ!

ಜನಸಂಖ್ಯಾ ಸ್ಫೋಟ ದೇಶದ ಬೆಳವಣಿಗೆಗೆ ಮಾರಕವಾಗಿದೆ. ಜನಸಂ ಖ್ಯಾ ಸ್ಫೋಟ ತಡೆಯಲು ಅಪಾರವಾಗಿ ಶ್ರಮಿಸಿದ ರಾಜ್ಯಗಳಿಗೆ ಪ್ರೋತ್ಸಾಹ ಸಿಗುವ ಬದಲು ಎರಡು ರೀತಿಯ ಹೊಡೆತಗಳು ಎದುರಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಷಾದಿಸಿದರು.

ಇಇ ಉಮೇಶ್,‌ ಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಕೆಪಿಟಿಸಿಇಎಲ್ ಇಇ ಡಿ.ಎಚ್‌. ಉಮೇಶ್,‌ ಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ದೂರುದಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಒಟ್ಟು ಎಂಟು ಕಡೆ ದಾವಣಗೆರೆ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ.

ನಗರದಲ್ಲಿ ನಾಳೆ ಸ್ಪೈರೋಮೀಟರ್ ತಪಾಸಣೆ

ನಗರದ ಮೋತಿ ವೀರಪ್ಪ ಕಾಲೇಜು ಹಿಂಭಾಗದ ಜೈನ್ ಲ್ಯಾಬ್ ಕೆಳಗಿರುವ ಡಾ. ಎನ್.ಹೆಚ್. ಕೃಷ್ಣ ಅವರ ಕ್ಲಿನಿಕ್‌ನಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ನಾಡಿದ್ದು ದಿನಾಂಕ 13ರ ಶನಿವಾರ ಉಚಿತ ಶ್ವಾಸಕೋಶ ತಪಾಸಣೆ (ಸ್ಪೈರೋಮೀಟರ್) ಹಾಗೂ ಉಚಿತ ವೈದ್ಯರ ಸಲಹೆ ನೀಡಲಾಗುವುದು.

ನಗರದಲ್ಲಿ ಮೊಹರಂ ಉಪನ್ಯಾಸ

ಚಂದ್ರದರ್ಶನದಿಂದ ಪ್ರಾರಂಭವಾಗಿರುವ ಮುಸ್ಲಿಂ ಬಾಂಧವರ ಹೊಸ ವರ್ಷದ ಸಂಕೇತವಾಗಿರುವ ಮೊಹರಂ ಹಬ್ಬದ `ಯಾದೇ ಹುಸೇನ್’ ಅಂಗವಾಗಿ ಕೆ.ಆರ್.ರಸ್ತೆಯಲ್ಲಿರುವ ನೂರಾನಿ ಆಟೋ ಚಾಲಕರ ಸಂಘದ ಆಶ್ರಯದಲ್ಲಿ 10 ದಿನಗಳವರೆಗೆ ಮೊಹರಂ ತಖರೀರ್ (ಉಪನ್ಯಾಸ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

error: Content is protected !!