Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ವರದಕ್ಷಿಣೆ ಸಾವು: ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ವರದಕ್ಷಿಣಿ ಕಿರುಕುಳ ನೀಡಿದ ಆರೋಪಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದೆ.

ದಾವಲ್‌ಪೇಟೆ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ

 ದಾವಣಗೆರೆಯ ದಾವಲ್‌ಪೇಟೆ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ದಸರಾ ಮಹೋತ್ಸವದ ವಿಶೇಷ ಅಲಂಕಾರಗಳು  ಇಂದಿನಿಂದ ಇದೇ ದಿನಾಂಕ 12ರವರೆಗೆ ನಡೆಯಲಿವೆ.

ಲೋಕಿಕೆರೆ : ವಿಜಯ ದುರ್ಗಾ ಪರಮೇಶ್ವರಿಗೆ ವಿಭೂತಿ ಅಲಂಕಾರ

ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಗ್ರಾಮದ ಕೋಡಿಹಳ್ಳಿ ರಸ್ತೆಯಲ್ಲಿನ ಶ್ರೀ ತ್ರಿಕುಟಾಚಲ ದೇವಸ್ಥಾನದಲ್ಲಿ ಶ್ರೀ ವಿಜಯದುರ್ಗಾ ಪರಮೇಶ್ವರಿ ಅಮ್ಮನವರ ನವರಾತ್ರಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇಂದು ಅಮ್ಮನವರಿಗೆ ವಿಭೂತಿ ಅಲಂಕಾರ ಮಾಡಲಾಗುವುದು.

ಹೋರಾಟಕ್ಕೆ ಸಂದ ಜಯ : ಎಐಡಿಎಸ್‌ಒ

ರಾಜ್ಯದ ಸರ್ಕಾರಿ ಪದವಿ ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದೆ.

ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ಮಾಹೇಶ್ವರಿ ದೇವಿ ಅಲಂಕಾರ

ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಶರನ್ನವರಾತ್ರಿ ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಅಮ್ಮನವರಿಗೆ ಮಾಹೇಶ್ವರಿ ದೇವಿ ಅಲಂಕಾರ ಮಾಡಲಾಗುವುದು. 

ನಗರದಲ್ಲಿ ಇಂದು-ನಾಳೆ ದೃಶ್ಯಕಲಾ ಮಹಾವಿದ್ಯಾಲಯದ `ಕಲಾ ಪಯಣ ಅನ್ವೇಷಣೆ ಪಥದಲ್ಲಿ’ ಕಾರ್ಯಕ್ರಮ

ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದ 60 ವರ್ಷಗಳ ಕಲಾ ಪಯಣ (1964-2024) ಅನ್ವೇಷಣೆಯ ಪಥದಲ್ಲಿ ಕಾರ್ಯಕ್ರಮ ನಾಳೆ ದಿನಾಂಕ 4 ರಿಂದ 6 ರವರೆಗೆ  ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ

ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಇಂದು

ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಹೆಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ-ಗರ್ಭಕೋಶದ ಕ್ಯಾನ್ಸರ್ ನಿವಾರಣೆಯಲ್ಲಿ ದಶಕದ ಆವಿಷ್ಕಾರ’ ವಿಷಯ ಕುರಿತು ಡಾ.ಪ್ರೇಮಾ ಪ್ರಭುದೇವ್ ಮಾತನಾಡುವರು.

ಶಂಕರ ಮಠದಲ್ಲಿ ಇಂದು ಹೋಮ

ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದ ಬಳಿ ಇರುವ ಶ್ರೀ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ವಿಶೇಷ ಅಲಂಕಾರ, ಪೂಜಾ ಕಾರ್ಯಗಳು ಜರುಗಲಿವೆ.

ಯಲವಟ್ಟಿ ಮಠದಲ್ಲಿ ಪುರಾಣ

ಮಲೇಬೆನ್ನೂರಿನ ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ವಿಜಯ ದಶಮಿಯ ನವರಾತ್ರಿ ಅಂಗವಾಗಿ ಇಂದಿ ನಿಂದ 9 ದಿನಗಳ ಕಾಲ ಪ್ರತಿ ನಿತ್ಯ ಬೆಳಗ್ಗೆ 8 ಕ್ಕೆ ಆದಿಶಕ್ತಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಶ್ರೀ ಯೋಗಾ ನಂದ ಸ್ವಾಮೀಜಿಯವರು ದೇವಿ ಪುರಾಣ ಹೇಳಲಿದ್ದಾರೆ.

ನಗರದಲ್ಲಿ ಇಂದು ಯುವ ಸಂಸತ್ ಸ್ಪರ್ಧೆ

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಯುವ ಸಂಸತ್ ಸ್ಪರ್ಧೆಯನ್ನು  ಇಂದು ಬೆಳಿಗ್ಗೆ 10 ಗಂಟೆಗೆ ನಗರದ ನಿಟುವಳ್ಳಿಯಲ್ಲಿನ ಆರ್.ಎಂ.ಎಸ್.ಎ. ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಪಾಕ್ ಪ್ರಜೆ !

ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಿದ್ದ ದಾವಣಗೆರೆ ಯುವಕ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ನಗರದಲ್ಲಿ ನಾಳೆ ಜೆಡಿಎಸ್ ಪ್ರತಿಭಟನೆ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಸಿದ ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಅವರ ವಿರುದ್ಧ ಜೆಡಿಎಸ್ ವತಿಯಿಂದ ನಾಡಿದ್ದು ದಿನಾಂಕ 3 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಗುವುದು

error: Content is protected !!