ರಾಣೇಬೆನ್ನೂರಿನಲ್ಲಿ ಇಂದು ಉಪನ್ಯಾಸ
ಕರ್ನಾಟಕ ಸಂಘದ ವತಿಯಿಂದ ನಾಡಹಬ್ಬದ ಪ್ರಯುಕ್ತ ಇಂದು ಸಂಜೆ 6.30 ಕ್ಕೆ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ `ಮಂಕುತಿಮ್ಮನ ಕಗ್ಗ’ ಕುರಿತು ಹರಿಹರದ ಎನ್.ಆರ್.ಕನವಳ್ಳಿ ಇವರಿಂದ ಉಪನ್ಯಾಸ ನಡೆಯಲಿದೆ.
ಕರ್ನಾಟಕ ಸಂಘದ ವತಿಯಿಂದ ನಾಡಹಬ್ಬದ ಪ್ರಯುಕ್ತ ಇಂದು ಸಂಜೆ 6.30 ಕ್ಕೆ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ `ಮಂಕುತಿಮ್ಮನ ಕಗ್ಗ’ ಕುರಿತು ಹರಿಹರದ ಎನ್.ಆರ್.ಕನವಳ್ಳಿ ಇವರಿಂದ ಉಪನ್ಯಾಸ ನಡೆಯಲಿದೆ.
ದಾವಣಗೆರೆ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಜಿ. ಕುಬೇಂದ್ರಪ್ಪ, (ಕಬ್ಬೂರು ಕ್ಷೇತ್ರ) ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸಿ.ಯು. ಜ್ಯೋತಿ (ಬಾಡಾ ಕ್ಷೇತ್ರ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಂಘ (ರಾಣೇಬೆ ನ್ನೂರು) ಇವರ ವತಿಯಿಂದ ನಾಡ ಹಬ್ಬದ ಅಂಗವಾಗಿ ಇಂದು ಸಂಜೆ 6.30 ಕ್ಕೆ ಆಲೂರು ವೆಂಕಟರಾವ್ ರಂಗಮಂದಿರದ ಕಾಳಿದಾಸ ನಾಯ್ಕ ವೇದಿಕೆಯಲ್ಲಿ ಸ್ನೇಹದೀಪ ಮಕ್ಕಳಿಂದ ಸಮ್ಮಿಶ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಶರನ್ನವರಾತ್ರಿ ಪ್ರಯುಕ್ತ ಇಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ವಾರಾಹೀ ದೇವಿ ಅಲಂಕಾರ ಮಾಡಲಾಗುವುದು. ಸಂಜೆ 5 ರಿಂದ 6 ವರೆೆಗೆ ವಾಸವಿ ಭಜನಾ ಮಂಡಳಿಯವರಿಂದ ಲಲಿತ ಸಹಸ್ರ ನಾಮಾರ್ಚನೆ ನಡೆಯಲಿದೆ.
ಡಾ.ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭವು ಇಂದು ಬೆಳಿಗ್ಗೆ 10ಕ್ಕೆ ನಡೆಯಲಿದ್ದು, ಸಭಾ ಕಾರ್ಯಕ್ರಮವು ಮಧ್ಯಾಹ್ನ 12-30 ಕ್ಕೆ ನಡೆಯಲಿದೆ.
ಶಾಮನೂರು ಜನತಾ ಕಾಲೋನಿಯ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನ ಸಮಿತಿ ವತಿಯಿಂದ ದೀಪಾರಾಧನೆ ಪ್ರಯುಕ್ತ ಇಂದು ರಾತ್ರಿ 8.30 ಕ್ಕೆ ದುರ್ಗಾಂಬಿಕ ಸಂಘ ಶಾಮನೂರು ಇವರಿಂದ ಭಜನಾ ಕಾರ್ಯಕ್ರಮವಿದೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ಬಂಗಾರದ ಆಭರಣ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದ್ದು, ಆರೋಪಿತ ಮಹಿಳೆಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ವಿಶ್ವ ವಿಕಲ ಚೇತನರ ದಿನಾಚರಣೆ ಅಂಗವಾಗಿ ಪ್ರಸಕ್ತ ಸಾಲಿನಲ್ಲಿ ವಿಕಲ ಚೇತನರ ಕ್ಷೇತ್ರದಲ್ಲಿ ಸಾಧನೆ ಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಲಾಗಿದೆ.
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ ಬಳಿ ಇರುವ ಶ್ರೀ ಗಣಪತಿ, ಶ್ರೀ ಶಾರದಂಬಾ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯರ ದೇವಸ್ಥಾನದಲ್ಲಿ ಇಂದು ಶಾರದಾದೇವಿಗೆ ಗರುಡ ವಾಹನಾಲಂಕಾರ (ವೈಷ್ಣವಿ) ಮಾಡಲಾಗುವುದು.
ಮಾಸಬ ಕಾಲೇಜು ಸಮಾಜಶಾಸ್ತ್ರ ವಿಭಾಗ ಮತ್ತು ಆಂತರಿಕ ಕೋಶ ಹಾಗೂ ದಾವಣಗೆರೆ ವಿವಿ ಪದವಿ ಸಮಾಜಶಾಸ್ತ್ರ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ 1 ಮತ್ತು 2ನೇ ಸೆಮಿಸ್ಟರ್ ನ ರಾಜ್ಯ ಶಿಕ್ಷಣ ನೀತಿಯ ಸಮಾಜಶಾಸ್ತ್ರ ಪಠ್ಯಕ್ರಮದ ಕಾರ್ಯಾಗಾರವನ್ನು ಬೆಳಿಗ್ಗೆ 10.30ಕ್ಕೆ ಕಾಲೇಜಿನ ಪಾರ್ವತಮ್ಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆಯ ನಾಗರಿಕ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಇಂದು ಸಂಜೆ 6.30 ಕ್ಕೆ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆ ವೃತ್ತದಲ್ಲಿ ಬನ್ನಿ ಮಹಾಂಕಾಳಿ ದೇವಿಯ 3 ನೇ ವರ್ಷದ ಶರನ್ನವರಾತ್ರಿ ಕಾರ್ಯಕ್ರಮ, ಪುಟ್ಟರಾಜ ಗವಾಯಿ ಅಂಧಾಶ್ರಮದ ಮಕ್ಕಳಿಗೆ ಸಾಮಗ್ರಿಗಳ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ.
ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.