Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ನೃತ್ಯ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಹಾಗೂ ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ವತಿಯಿಂದ ಇಂದು ಸಂಜೆ 6 ರಿಂದ 8 ರವರೆಗೆ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಬಜ್ಜಿ ಡ್ಯಾನ್ಸ್ ಸ್ಟುಡಿಯೋ ಹೊಂಡದ ಸರ್ಕಲ್‌ನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ನಗರದಲ್ಲಿ ಇಂದು `ಆಕಾಶದ ಕೌತುಕ-2024′ ಉಪನ್ಯಾಸ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಜಿಲ್ಲಾ ಬಾಲ ಭವನ ಸಮಿತಿ, ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ನಗರದ ಎ.ವಿ.ಕೆ. ಕಾಲೇಜಿನ ಸಭಾಂಗಣದಲ್ಲಿ `ಆಕಾಶದ ಕೌತುಕ-2024′ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಇಂದು ನೃತ್ಯ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಹಾಗೂ ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ವತಿಯಿಂದ ಇಂದು ಸಂಜೆ 6 ರಿಂದ 8 ರವರೆಗೆ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಬಜ್ಜಿ ಡ್ಯಾನ್ಸ್ ಸ್ಟುಡಿಯೋ ಹೊಂಡದ ಸರ್ಕಲ್‌ನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಹರಿಯಾಣ ಚುನಾವಣೆ ; ಮೋದಿಗೆ ಮುಖಭಂಗ ಗ್ಯಾರಂಟಿ : ಡಿ.ಬಿ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮುಡಾ ಹಗರಣದ ಪ್ರಮುಖ ವಿಚಾರವ ನ್ನಾಗಿ ವೈಭವೀಕರಿಸಿ ಮತ ಪಡೆಯಲು ಸರ್ಕಸ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಯವರ ನಡೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ. 

ಯುಬಿಡಿಟಿ ಕಾಲೇಜನ್ನು ಬಡ ವಿದ್ಯಾರ್ಥಿಗಳಿಗೆ ಉಳಿಸಿ 16 ರಂದು ದಾವಣಗೆರೆ ಬಂದ್‌ಗೆ ಕರೆ

ನಗರದ ಯುಬಿಡಿಟಿ ಕಾಲೇಜನ್ನು ಬಡ ವಿದ್ಯಾರ್ಥಿಗಳಿಗೆ ಉಳಿಸಿ ಎಂದು ಇದೇ ದಿನಾಂಕ 16 ರಂದು ಎಐಡಿಎಸ್‌ಓ ಸಂಘಟನೆಯ ವತಿಯಿಂದ ದಾವಣಗೆರೆ ಬಂದ್ ಗೆ ಕರೆ ನೀಡಲಾಗಿದೆ ಎಂದು ಸಂಘಟನಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೇಳೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ

ಗ್ರಾಮಾಂತರ ಕೈಗಾರಿಕಾ ವಿಭಾಗದಿಂದ ಹೊಲಿಗೆಯಂತ್ರ ವಿತರಣೆ, ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲದ ಮೇಲೆ ವಿಧಿಸುವ ಬಡ್ಡಿ ಮೊತ್ತದ ಮೇಲೆ ಬಡ್ಡಿ ಸಹಾಯಧನ ಹಾಗೂ ಟೈಲರಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಎಫ್.ಟಿ.ಸಿ.ಪಿ. ತರಬೇತಿ ನೀಡಿ ಉಚಿತವಾಗಿ 5 ಸಾವಿರ ರೂ. ಮೌಲ್ಯದ ಉಪಕರಣಗಳ ಕಿಟ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.  

ಚೌಡೇಶ್ವರಿ ದೇವಿಗೆ ಗೌರಿ ಅಲಂಕಾರ

ದಾವಣಗೆರೆ ದಾವಲ್‌ಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಇಂದು ಮಹಾಗೌರಿ ಅಲಂಕಾರ ಮಾಡಲಾಗುವುದು.

ನಗರದ ಶಾರದಾಂಬ ದೇವಿಗೆ ಮೋಹಿನಿ ಅಲಂಕಾರ

ದಾವಣಗೆರೆ ಎಸ್. ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿರುವ ಶ್ರೀ ಗಣಪತಿ, ಶ್ರೀ ಶಾರದಾಂಬ, ಶ್ರೀ ಚಂದ್ರಮೌಳೀಶ್ವರ, ಶ್ರೀ ಶಂಕರಾಚಾರ್ಯ ದೇವಸ್ಥಾನದಲ್ಲಿ ಇಂದು ದೇವಿಗೆ ಮೋಹಿನಿ ಅಲಂಕಾರ ಮಾಡಲಾಗುವುದು.

ಶಾಮನೂರಿನಲ್ಲಿ ಇಂದು ಸುಗಮ ಸಂಗೀತ

ದಾವಣಗೆರೆ – ಶಾಮನೂರು ಜನತಾ ಕಾಲೋನಿಯ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನ ಸಮಿತಿ ವತಿಯಿಂದ ಶರನ್ನವರಾತ್ರಿ ಪ್ರಯುಕ್ರ ಇಂದು ರಾತ್ರಿ 8.30 ಕ್ಕೆ ಸಿ. ಅಮರೇಶ್, ಮಾರಣ್ಣ, ಹೆಚ್.ಎಂ. ಶಿವಕುಮಾರ್, ಸುಮಾ ಮತ್ತು ಸಂಗಡಿಗರಿಂದ ಭಕ್ತಿಗೀತೆ, ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಿದ್ದಾರೆ.

ರಾಣೇಬೆನ್ನೂರಿನಲ್ಲಿ ಇಂದು ಗಾಂಧಿ ಸ್ಮೃತಿ ಜನಜಾಗೃತಿ ಜಾಥಾ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ  ಗಾಂಧಿಸ್ಮೃತಿ ಜನಜಾಗೃತಿ ಜಾಥಾ ಮತ್ತು ಸಮಾವೇಶವು ಶ್ರೀ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ವಿವೇಕಾನಂದಾಶ್ರಮದ ಶ್ರೀ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ಇಂದು ನಡೆಯಲಿದೆ.

ಬನ್ನಿಮಹಾಂಕಾಳಿಗೆ ಸರಸ್ವತಿ ಅಲಂಕಾರ

ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಶ್ರೀ ಬನ್ನಿಮಹಾಂಕಾಳಿ ದೇವಿಯ 11 ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ಇಂದು ಶ್ರೀ ಸರಸ್ವತಿ ದೇವಿ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ

ನಗರದಲ್ಲಿ ಇಂದು ಭಜನೆ

ಶಿವಕುಮಾರಸ್ವಾಮಿ ಬಡಾವಣೆ ಸಮೀಪದ ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆಯಲ್ಲಿ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ನಾಗರೀಕ ಕ್ಷೇಮಾಭಿ ವೃದ್ಧಿ, ಅಪ್ಪು ಅಭಿಮಾನಿ ಬಳಗ, ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ ಸಮಿತಿ ವತಿಯಿಂದ ಇಂದು ಸಂಜೆ 7 ರಿಂದ ಶಾಂತವೀರಸ್ವಾಮಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಇದೆ.

error: Content is protected !!