ನಗರದಲ್ಲಿ ಇಂದು ಚಾಮುಂಡದೇವಿ ಅಲಂಕಾರ
ಶ್ರೀ ಕನ್ಯಕಾಪಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಚಾಮುಂಡದೇವಿ ಅಲಂಕಾರ ಮಾಡಲಾಗುವುದು.
ಶ್ರೀ ಕನ್ಯಕಾಪಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಚಾಮುಂಡದೇವಿ ಅಲಂಕಾರ ಮಾಡಲಾಗುವುದು.
ಹರಿಹರ : ನಗರದಲ್ಲಿ ತಡ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು ಹಲವಾರು ಮನೆಗಳಿಗೆ ನೀರು ನುಗ್ಗಿದ ಘಟನೆ ನಡೆಯಿತು.
ಹರಿಹರ : ನಗರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಇಲ್ಲಿ ಅಧ್ಯಕ್ಷರು ಮತ್ತು ಪೌರಾಯುಕ್ತರಲ್ಲಿ ಯಾರು ಸುಪ್ರೀಂ ಎಂಬುದು ಅರಿಯದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯ ಆರ್.ಸಿ ಜಾವೇದ್ ದೂರಿದರು.
ದಾವಣಗೆರೆಯ ಆಂಜನೇಯ ಬಡಾವಣೆ ಬಿಐಇಟಿ ಕಾಲೇಜು ವಿದ್ಯಾರ್ಥಿ ನಿಲಯದ ಕಾಂಪೌಂಡ್ ಬಳಿ ಇರುವ ಶ್ರೀ ಬನ್ನಿಮಹಾಂಕಾಳಿ ದೇವಿಯ 11 ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ಇಂದು ಶ್ರೀ ಬಾದಾಮಿ ಬನಶಂಕರಿ ದೇವಿ ಅಲಂಕಾರ ಮಾಡಲಾಗುವುದು.
ತನ್ನ ಮನೆಯಲ್ಲೇ ಕಳ್ಳತನ ಮಾಡಿ ಯಾರೋ ಅಪರಿಚಿತರು ಪ್ರಜ್ಞೆ ತಪ್ಪಿಸಿ ನಗದು, ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಕಳ್ಳತನದ ಕಥೆ ಸೃಷ್ಟಿಸಿ ದೂರು ನೀಡಿದ್ದ ಯುವತಿ ಹಾಗೂ ಕಳ್ಳತನಕ್ಕೆ ಸಹಕರಿಸಿದ್ದವನನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು 1.27 ಲಕ್ಷ ರೂ. ನಗದು, 9.5 ಲಕ್ಷ ರೂ. ಬೆಲೆಯ 155 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮ್ಮಣಿ ದೇವರಾಜ ಅರಸು ಬಡಾವಣೆಯ ಶ್ರೀ ನಾಗರಿಕ ಕ್ಷೇಮಾಭಿವೃದ್ಧಿ ಸಮಿತಿ, ಅಪ್ಪು ಅಭಿಮಾನಿ ಬಳಗ ಹಾಗೂ ಶ್ರೀ ಬನ್ನಿಮಹಾಂಕಾಳಿ ದೇವಿ ದೇವಸ್ಥಾನ ಸಮಿತಿ ವತಿಯಿಂದ 3 ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸಂಜೆ 4 ಗಂಟೆಗೆ ಮಹಾಸಂಕಲ್ಪ, ಮಹಾಪೂಜೆ, ಪುಣ್ಯಾಹ ನವಗ್ರಹ ಆರಾಧನೆ, ಗಣಹೋಮ, ದುರ್ಗಾಹೋಮ, ಸಂಜೆ 6 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೇ ಕಟ್ಟಡ ನಿರ್ಮಾಣವಾಗುತ್ತಿರುವುದು ಕಂಡು ಬಂದಿದ್ದು ಅನಧಿಕೃತ, ಅಕ್ರಮ ಕಟ್ಟಡ ನಿರ್ಮಾಣ ಕಾಮಗಾರಿ ಕಂಡುಬಂದಲ್ಲಿ, ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಕೆ.ಎಂ.ಸಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ
ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಶ್ರೀ ಮಾತಾ ಪಂಚವಟಿ ನಾಗಕಾಳಿಕಾ ದೇವಿಯ 31 ನೇ ವರ್ಷದ ಶರನ್ನವರಾತ್ರಿಯ ಮಹಾ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಶಾಮನೂರಿನ ಜನತಾ ಕಾಲೋನಿಯಲ್ಲಿನ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನ ಸಮಿತಿ ವತಿಯಿಂದ ಶರನ್ನವರಾತ್ರಿ ಅಂಗವಾಗಿ ಇಂದು ರಾತ್ರಿ 8.30 ಕ್ಕೆ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಜರುಗಲಿದೆ.
ದಾವಲ್‌ಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ತೊಗಟವೀರ ಸಮಾಜದ ವತಿಯಿಂದ ಶರನ್ನವರಾತ್ರಿ ಅಂಗವಾಗಿ ಇಂದು ಸರಸ್ವತಿ ಅಲಂಕಾರ ಮಾಡಲಾಗುವುದು.
ಕಾನೂನು ಬಾಹಿರ ವಾಗಿ ನಿಷೇಧಿತ ಇ-ಸಿಗರೇಟ್ ಮತ್ತು ಹುಕ್ಕಾ ಮಾರಾಟ ಮಾಡುತ್ತಿದ್ದ ಪಾನ್ ಶಾಪ್ ಮೇಲೆ ಪೊಲೀಸರು ದಾಳಿ ನಡೆಸಿ ರುದ್ರೇಶ್ ಎಂಬಾತ ನನ್ನು ಬಂಧಿಸಿದ್ದಾರೆ.
ಹೈಸ್ಕೂಲ್ ಮೈದಾನವನ್ನು ಸಾರ್ವಜನಿಕರ ಸಂಚಾರ ಹಾಗೂ ಕ್ರೀಡೆಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ಮಳೆಗಾಲದಲ್ಲಿ ಮಳೆ ನೀರು ನಿಲ್ಲದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪಾಲಿಕೆ ಮೇಯರ್ ಚಮನ್ ಸಾಬ್ ತಿಳಿಸಿದ್ದಾರೆ.