Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

`ದಾವಣಗೆರೆ ಬಂದ್‌’ಗೆ ರೈತ ಸಂಘದ ಬೆಂಬಲ

ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಘೋಷಿಸಿದ ಅ.16ರ `ದಾವಣಗೆರೆ ಬಂದ್‌ ಹೋರಾಟ’ಕ್ಕೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಬೆಂಬಲ ನೀಡಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್‌ ತಿಳಿಸಿದರು.

ಗಾಂಜಾ ಮಾರಾಟಗಾರರ ಬಂಧನ

ಬಾಡಾ ಕ್ರಾಸ್‌ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಕಳೆದ ವಾರ ವಶಕ್ಕೆ ಪಡೆದಿದ್ದಾರೆ.

10ನೇ ತರಗತಿ ವಿಜ್ಞಾನ ಪ್ರಶ್ನೆ ಪತ್ರಿಕೆ ಸಮಸ್ಯೆ

ಪ್ರಸ್ತುತ ಪ್ರೌಢಶಾಲೆಯಲ್ಲಿ ಬೋಧಿಸುತ್ತಿರುವ ವಿಜ್ಞಾನ ವಿಷಯದ ಹತ್ತನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳ ಕಠಿಣತೆ ಮತ್ತು ಪ್ರಶ್ನೆ ಪತ್ರಿಕೆಯ ಸ್ವರೂಪದ ಸರಳೀಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಿಂಚನ ಪ್ರೌಢಶಾಲೆಯಲ್ಲಿ ಚರ್ಚಿಸಲಾಯಿತು.

ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ

ಕೊಟ್ಟೂರು : ಶ್ರದ್ಧಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯದಶಮಿ ಹಬ್ಬದಂದು ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿಯ ಪಲ್ಲಕ್ಕಿ ಮಹೋತ್ಸವ ವೈಭವದಿಂದ ಶನಿವಾರ ಸಂಜೆ ಅಂತಿಮ ತೆರೆಕಂಡಿತು.

ಡಾ. ಎಂ. ಬಸವಂತಪ್ಪ ನಿಧನಕ್ಕೆ ಜಿಲ್ಲಾ ಕಸಾಪ ಕಂಬನಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಸಂತೆಬೆನ್ನೂರಿನ ಡಾ. ಎಂ. ಬಸವಂತಪ್ಪ ಅವರ ನಿಧನಕ್ಕೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.  

ನವಿಲೆಯಲ್ಲಿ 18ರಿಂದ ಕೃಷಿ ಮತ್ತು ತೋಟಗಾರಿಕೆ ಮೇಳ

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಇದೇ ದಿನಾಂಕ 18 ರಿಂದ 21 ರವರೆಗೆ ನವಿಲೆಯಲ್ಲಿನ ವಿವಿ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ ಆಯೋಜಿಸಲಾಗಿದೆ.

ಹೊಲಿಗೆ, ವಿಡಿಯೋಗ್ರಫಿ ತರಬೇತಿಗೆ ಅರ್ಜಿ

ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಹೊಲಿಗೆ ಹಾಗೂ ವಿಡಿಯೋಗ್ರಫಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ತುಂತುರು ನೀರಾವರಿ ಘಟಕಕ್ಕೆ ರೈತರಿಂದ ಅರ್ಜಿ ಆಹ್ವಾನ

ಹರಿಹರ : ಲಘು ನೀರಾವರಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ರೈತರು ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸುವಂತೆ  ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ನಗರದಲ್ಲಿ ಇಂದು ವೀಣಾ ಶಾರದಾಲಂಕಾರ

ಎಸ್.ನಿಜಲಿಂಗಪ್ಪ ಬಡಾವಣೆ ರಿಂಗ್‌ ರಸ್ತೆಯ ಶಾರದಾಂಬಾ ಸರ್ಕಲ್ ಬಳಿ ಇರುವ ಶ್ರೀ ಗಣಪತಿ, ಶ್ರೀ ಶಾರದಾಂಬಾ, ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಶಂಕರಾಚಾರ್ಯರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಇಂದು ವೀಣಾ ಶಾರದಾಲಂಕಾರ ಮಾಡಲಾಗುವುದು

ನಗರದ ಇಂದು ಶಂಕರ ಮಠದಲ್ಲಿ ಹೋಮ

ಜಯದೇವ ವೃತ್ತದ ಬಳಿ ಇರುವ ಶಂಕರಮಠದಲ್ಲಿ ರಸ್ವತಿ ಪೂಜಾ ಸುಮಂಗಲಿ ಕನ್ನಿಕಾ ಪೂಜೆ, 12.30 ಕ್ಕೆ ಪೂರ್ಣಹುತಿ, ಪ್ರಸಾದ ವಿನಿಯೋಗ, ಸಂಜೆ 6 ರಿಂದ 8 ರವರೆಗೆ ದುರ್ಗಾ ದೀಪ ನಮಸ್ಕಾರ, ಅಷ್ಟಾವಧಾನ ಸೇವೆ, ಸಪ್ತಶತಿ ಪಾರಾಯಣ, ದೀಪಾರಾಧನೆ, 8.30 ಕ್ಕೆ ಪ್ರಸಾದ ವಿನಿಯೋಗವಿರುತ್ತದೆ. 

ನಗರದಲ್ಲಿಂದು ಕನ್ಯಾಪೂಜೆ

ವಿಶ್ವ ಹಿಂದು ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ಶ್ರೀ ಬೀರಲಿಂಗೇಶ್ವರ ಮೈದಾನದಲ್ಲಿ ಇಂದು 6 ರಿಂದ 7 ರವರೆಗೆ ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ `ಕನ್ಯಾಪೂಜಾ’ ಕಾರ್ಯಕ್ರಮ ಹಾಗೂ ಅದಮ್ಯ ಆರ್ಟ್ಸ್ ಫೌಂಡೇಶನ್ ಕನ್ನಡ ಜಾನಪದ ಪರಿಷತ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

error: Content is protected !!