ಹರಿಹರ : ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ
ಹರಿಹರ : ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಹರಿಹರ ತಾಲ್ಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹರಿಹರ : ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಹರಿಹರ ತಾಲ್ಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂತರಂಗ ಮತ್ತು ಬಹಿರಂಗ ಧ್ಯಾನ ಸಾಧನೆಗಾಗಿ ಓಶೋರವರು ನಿರೂಪಿಸಿರುವ ಚಿಕಿತ್ಸಕ ಓಶೋ ಧ್ಯಾನ ಶಿಬಿರವನ್ನು ಇದೇ ದಿನಾಂಕ 21 ರಿಂದ 27 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7.30 ರವರೆಗೆ ನಗರದ ಆಲೂರು ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ
ಮಲೇಬೆನ್ನೂರು : ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ದಲ್ಲಿ ವಿಜಯದಶಮಿ ಮತ್ತು ಮರಿಬನ್ನಿ ಕಾರ್ಯಕ್ರಮದ ಅಂಗವಾಗಿ ಇದೇ ದಿನಾಂಕ 18 ರ ಶುಕ್ರವಾರ ಸಾಮೂಹಿಕ ವಿವಾಹ ಮತ್ತು ದೊಡ್ಡ ಎಡೆ ಜಾತ್ರೆ ಹಮ್ಮಿಕೊಳ್ಳಲಾಗಿದೆ.
ಜಿಗಳಿ ಗ್ರಾ.ಪಂ. ಕಛೇರಿಯಲ್ಲಿ ಇಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ ಜಿಗಳಿ ಗ್ರಾ.ಪಂ. ಮತ್ತು ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಜಿಲ್ಲೆಯಲ್ಲಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಜಿಲ್ಲಾಧಿಕಾರಿಗಳಿಗೆ ಈಚೆಗೆ ಮನವಿ ಸಲ್ಲಿಸಿತು.
ಚನ್ನಗಿರಿ : ತಾಲ್ಲೂಕಿನ ದೇವರಹಳ್ಳಿ ನಾಡಕಚೇರಿಯ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೀಡಿರುವ ಇಂದಿನ ದಾವಣಗೆರೆ ಬಂದ್ ಕರೆಗೆ ಬೆಂಬಲ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ತಿಳಿಸಿದ್ದಾರೆ.
ಯುಬಿಡಿಟಿ ಕಾಲೇಜು ಉಳಿಸಿ, ಶೇ. 50 ಪೇಮೆಂಟ್ ಸೀಟ್ ರದ್ದುಗೊಳಿಸವಂತೆ ಒತ್ತಾಯಿಸಿ ಎಐಡಿಎಸ್‌ಓ ಕರೆ ಕೊಟ್ಟಿರುವ ದಾವಣಗೆರೆ ಬಂದ್‌ಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದಲ್ಲಿ ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ಶೀಗಿ ಹುಣ್ಣಿಮೆ ಅಂಗವಾಗಿ ನಾಡಿದ್ದು ದಿನಾಂಕ 17 ರ ಗುರುವಾರ ಬೆಳಿಗ್ಗೆ 7 ಕ್ಕೆ ನಡೆಯಲಿದೆ.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ನಾಡಿದ್ದು ದಿನಾಂಕ 17 ರಂದು ಗುರುವಾರ ನಗರದ ತಾಲ್ಲೂಕು ಸಭಾ ಭವನದಲ್ಲಿ `ವಾಲ್ಮೀಕಿ ಜಯಂತಿ’ ಆಚರಿಸಲಾಗುವುದು.
ಯುಬಿಡಿಟಿ ಕಾಲೇಜು ಉಳಿಸಲು, ಶೇ. 50 ಪೇಮೆಂಟ್ ಸೀಟ್ ರದ್ದುಪಡಿಸಬೇಕೆಂಬಿತರೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ ದಿನಾಂಕ 16 ರಂದು ಕರೆ ಕೊಟ್ಟಿರುವ ಬಂದ್ ಸಮಯದಲ್ಲಿ ಬಲವಂತವಾಗಿ ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಖಾಸಗಿ, ಸರ್ಕಾರಿ ಸಂಸ್ಥೆಗಳನ್ನು ಮುಚ್ಚಿಸುವಂತಿಲ್ಲ.
ನಗರದ ಬೇತೂರು ರಸ್ತೆಯಲ್ಲಿರುವ ಅರಳಿಮರ ವೃತ್ತ ಮತ್ತು ವೆಂಕಟೇಶ್ವರ ವೃತ್ತದ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದವರ ಪೈಕಿ 31 ಜನರನ್ನು ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.