ಬಿಎಸ್ಸೆನ್ನೆಲ್: ಉಚಿತ ವೈಫೈ , ರೋಮಿಂಗ್ ಸೌಲಭ್ಯ
ಬಿಎಸ್ಸೆನ್ನೆಲ್‌ನ ಯಾವುದೇ ಹಾಟ್ ಸ್ಪಾಟ್ ವಲಯಗಳಲ್ಲಿ ನಿಮ್ಮ ಎಫ್‍ಟಿಟಿಹೆಚ್ ಖಾತೆಯನ್ನು ಬಳಸಿ ಕೊಂಡು ರೋಮಿಂಗ್ ಮಾಡುವಾಗ ಭಾರತ ದಾದ್ಯಂತ ಹೆಚ್ಚುವರಿ ಶುಲ್ಕಗಳಿಲ್ಲದೆ ಬಿಎಸ್ಸೆನ್ನೆಲ್ ವೈಫೈ ರೋಮಿಂಗ್ ಸೌಲಭ್ಯವನ್ನು ಪರಿಚಯಿಸುತ್ತಿದೆ.
ಬಿಎಸ್ಸೆನ್ನೆಲ್‌ನ ಯಾವುದೇ ಹಾಟ್ ಸ್ಪಾಟ್ ವಲಯಗಳಲ್ಲಿ ನಿಮ್ಮ ಎಫ್‍ಟಿಟಿಹೆಚ್ ಖಾತೆಯನ್ನು ಬಳಸಿ ಕೊಂಡು ರೋಮಿಂಗ್ ಮಾಡುವಾಗ ಭಾರತ ದಾದ್ಯಂತ ಹೆಚ್ಚುವರಿ ಶುಲ್ಕಗಳಿಲ್ಲದೆ ಬಿಎಸ್ಸೆನ್ನೆಲ್ ವೈಫೈ ರೋಮಿಂಗ್ ಸೌಲಭ್ಯವನ್ನು ಪರಿಚಯಿಸುತ್ತಿದೆ.
ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ ರಾಜ್ಯದ 11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಹೊರಟಿದೆ.
ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ವಿಶ್ವ ಸಂಸ್ಥೆ ದಿನದ ಪ್ರಯುಕ್ತ `ನಿಲ್ಲದ ಯುದ್ಧ ದಾಹ; ವಿಶ್ವಸಂಸ್ಥೆ ನೀತಿ ನಿಯಮ ಬದಲಾವಣೆ ಅನಿವಾರ್ಯವೇ?’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಇಸ್ರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಶ್ರೀ ಸತ್ಯ ಸಾಯಿ ವಿದ್ಯಾ ವಾಹಿನಿ, ಪುಟ್ಟಪರ್ತಿ ಇವರ ವತಿಯಿಂದ ಇಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆ ವರೆಗೆ ಇಸ್ರೋ ಆನ್ ವ್ಹೀಲ್ಸ್ ಸ್ಪೇಸ್ ಎಕ್ಸಿಬಿಷನ್ ಕಾರ್ಯಕ್ರಮವನ್ನು ಈಶ್ವರಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ವಿಟಿಯು ಮತ್ತು ಇ ಅಂಡ್ ಐ ವಿಭಾಗದ ಸಹಯೋಗದಲ್ಲಿ ವಿಟಿಯು ಕನ್ಸೋರ್ಟಿಯಮ್ ಇ – ರಿಸೋರ್ಸ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರ್ವೋಚ್ಛ ನ್ಯಾಯಾ ಲಯದ ತೀರ್ಪಿನ ಅದೇಶದಂತೆ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 10ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ
ಜಿಲ್ಲೆಯಲ್ಲಿ ಸೋಮವಾರ 15.4 ಮಿ.ಮೀ. ಮಳೆಯಾಗಿದ್ದು, 31.25 ಲಕ್ಷ ರೂ.ಗಳ ನಷ್ಟವಾಗಿದೆ.
ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಾಳೆ ದಿನಾಂಕ 23 ರ ಬುಧವಾರ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನವರ 200 ನೇ ವಿಜಯೋತ್ಸವ, 246 ನೇ ಜಯಂತ್ಯುತ್ಸವ ಸಮಾರಂಭ ನಡೆಯಲಿದೆ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿ ವರದಿಯನ್ನು ಯಾರ ಒತ್ತಡಕ್ಕೂ ಮಣಿಯದೇ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಬಿಡುಗಡೆ ಮಾಡುವಂತೆ ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹಾಲೇಕಲ್ಲು ಸಿ. ವೀರಣ್ಣ ಆಗ್ರಹಿಸಿದರು.
ಜಗಳೂರು : ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಯಡಿ ತೋಟಗಾರಿಕೆ ಇಲಾಖೆಯಿಂದ ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ವರ್ಷ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಾಂಗದ ವರಿಂದ ನಿಗಮದ ವಿವಿಧ ಯೋಜನೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹದಡಿ ರಸ್ತೆಯಲ್ಲಿರುವ ಶ್ರೀ ಕೊಪ್ಪದಾಂಬ ದೇವಿಯ ಕೆಂಡದಾರ್ಚನೆಯು ಇಂದು ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಹಳೆಪೇಟೆಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಕುಂಭೋತ್ಸವದಿಂದ ಮೆರವಣಿಗೆ ಹೊರಟು, ಅಲ್ಲಿಂದ ಶ್ರೀಕ್ಷೇತ್ರ ನವ ದೇವಸ್ಥಾನಕ್ಕೆ ಬಂದು ಕೆಂಡೋತ್ಸವ ನೆರೆವೇರಿಸಲಾಗುತ್ತದೆ.