Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಾಳೆಯಿಂದ ಕೆಎಸ್‌ಪಿಎಲ್ ಟೂರ್ನಿ ಆರಂಭ

ಬೆಂಗಳೂರಿನ ಆಚಾರ್ಯ ಕ್ರೀಡಾಂಗಣದಲ್ಲಿ ನ.1 ರಿಂದ ಡಿ.1ರ ವರೆಗೆ ಒಂದು ತಿಂಗಳ ಕಾಲ ಕರ್ನಾಟಕ ಸಾಫ್ಟ್‌ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‌ಪಿಎಲ್) ಟೂರ್ನಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಸ್ಟೇಟ್ ಸಾಫ್ಟ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ರಾಜು ತಿಳಿಸಿದ್ದಾರೆ.

ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್‍ನಿಂದ ಇಂದಿರಾ ಗಾಂಧಿ ಪುಣ್ಯ ಸ್ಮರಣೆ

 ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ  ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 11-30ಕ್ಕೆ ನಡೆಯಲಿದೆ

ನಗರದಲ್ಲಿ ಇಂದು ಮಾಗನೂರು ಬಸಪ್ಪನವರ ಪುಣ್ಯಸ್ಮರಣೆ

ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ  ಇಂದು ಸಂಜೆ 6ಕ್ಕೆ ಲಿಂ. ಮಾಗನೂರು ಬಸಪ್ಪನವರ 29ನೇ ವಾರ್ಷಿಕ ಪುಣ್ಯಸ್ಮರಣೆ ಮತ್ತು ಲಿಂ. ಸರ್ವಮಂಗಳಮ್ಮ ಮಾಗನೂರು ಬಸಪ್ಪನವರ 16ನೇ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಸರ್ವಶರಣ ಸಮ್ಮೇಳನ ನಡೆಯಲಿದೆ.

ನಗರದಲ್ಲಿ ಉಚಿತ ಕನ್ನಡ ಬಾವುಟ ವಿತರಣೆ

ನವೆಂಬರ್ 1 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಚಿತವಾಗಿ ಕನ್ನಡ ಬಾವುಟಗಳನ್ನು ನಗರದ 11ನೇ ಮೇನ್ 3ನೇ ಕ್ರಾಸ್‌ನ ಎಂ.ಸಿ.ಸಿ `ಬಿ’ ಬ್ಲಾಕ್‌ನಲ್ಲಿರುವ ಸುರೇಶ್ ಕಾಫಿ ಬಾರ್‌ನಲ್ಲಿ ನಾಡಿದ್ದು ದಿನಾಂಕ 31ರ ಗುರುವಾರ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಒಬ್ಬರಿಗೆ ಒಂದು ಬಾವುಟ ವಿತರಿಸಲಾಗುವುದು.

ಇಂದು ನೀರು ತುಂಬಿಸುವುದು, ನಾಳೆ ಅಭ್ಯಂಜನ ಸ್ನಾನ

ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ದಿನಾಂಕ 30 ರ ಬುಧವಾರ ನೀರು ತುಂಬಿಸುವುದು, ನಾಡಿದ್ದು ದಿನಾಂಕ 31 ರ ಗುರುವಾರ ಮಧ್ಯಾಹ್ನ 2 ರವರೆಗೆ ಚತುರ್ದಶಿ ಎಣ್ಣೆಯ ಅಭ್ಯಂಜನ ಸ್ನಾನ, ಮಧ್ಯಾಹ್ನ 3 ರವರೆಗೆ ಅಂಗಡಿ, ಕಚೇರಿಗಳಲ್ಲಿ ಸಾಮೂಹಿಕ ಲಕ್ಷ್ಮೀಪೂಜೆ ಮಾಡುವುದು.

ನಗರದಲ್ಲಿ ಇಂದು ರನ್ ಫಾರ್ ಯುನಿಟಿ

ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ಜಿಲ್ಲೆಯ ಬಿಜೆಪಿ ವತಿಯಿಂದ ರನ್ ಫಾರ್ ಯುನಿಟಿ ಕಾರ್ಯಕ್ರಮ ವನ್ನು ಪ್ರಧಾನಮಂತ್ರಿ ಮೋದಿಯವರ ಆದೇಶದಂತೆ ಇಂದು ಬೆಳಗ್ಗೆ 7ಕ್ಕೆ ನಗರದ ಗುಂಡಿ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಇಂದು ಪಾಂರಪರಿಕ ವೈದ್ಯ ಪರಿಷತ್‌ನಿಂದ ಧನ್ವಂತರಿ ಜಯಂತ್ಯುತ್ಸವ

ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಧನ್ವಂತರಿ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ರೆಡ್‌ಕ್ರಾಸ್ ಸಭೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ನ. 26 ರಂದು ಬೆಳಿಗ್ಗೆ 11 ಕ್ಕೆ ಸಂಸ್ಥೆಯ ಕಛೇರಿಯಲ್ಲಿ ನಡೆಯಲಿದೆ.

ಕಳಸಪ್ಪರ ಗೌಡ್ರ ಚನ್ನಬಸಪ್ಪ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಶೋಕ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿ ಕಳಸಪ್ಪನವರ ಗೌಡ್ರ ಚನ್ನಬಸಪ್ಪ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಶೋಕ ವ್ಯಕ್ತಪಡಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ತಿಳಿಸಿದ್ದಾರೆ.

ಹೈಸ್ಕೂಲ್ ಮೈದಾನದಲ್ಲಿ ನಾಳೆಯಿಂದ ಪಟಾಕಿ ಮಾರಾಟ

ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಹೈಸ್ಕೂಲ್‌ ಮೈದಾನದಲ್ಲಿ ಅ.30ರಿಂದ ನ.2ರ ವರೆಗೆ ಪಟಾಕಿ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ತಿಳಿಸಿದರು.

ಕಳಸಪ್ಪರ ಗೌಡ್ರ ಚನ್ನಬಸಪ್ಪ ನಿಧನಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶೋಕ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಸಭಾಪತಿ ಗೌಡ್ರ ಚನ್ನಬಸಪ್ಪ ಅವರ ನಿಧನಕ್ಕೆ ರೆಡ್ ಕ್ರಾಸ್ ಸಂಸ್ಥೆಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.

error: Content is protected !!