Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ನಾಳೆ ಹೈನುಗಾರಿಕೆ ತರಬೇತಿ

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನಾಡಿದ್ದು ದಿನಾಂಕ 18 ಹಾಗೂ 19 ರಂದು ರೈತರಿಗೆ ಆಧುನಿಕ ಹೈನುಗಾರಿಕೆ ಚಟುವಟಿಕೆಗಳ ತರಬೇತಿ ನಡೆಯಲಿದೆ

ತೋಟಗಾರಿಕೆ ಇಲಾಖೆ : ಸಹಾಯ ಧನಕ್ಕೆ ಅರ್ಜಿ

ಹರಪನಹಳ್ಳಿ : ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ ತಿಳಿಸಿದ್ದಾರೆ.

ತಬಸ್ಸುಮ್‌ಗೆ 6ನೇ ರ‍್ಯಾಂಕ್

ಚಿತ್ರದುರ್ಗ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಮೇ 2024ರ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ನಗರದ ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆರ್‌. ಸಾನಿಯಾ ತಬಸ್ಸುಮ್ ಅವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್‌ ಗಳಿಸಿದ್ದಾರೆ.

ಇಂದಿನಿಂದ ಉತ್ಸವಾಂಬ ದೇವಿಗೆ ಮಂಡಲಾಭಿಷೇಕ

ವಸಂತ ರಸ್ತೆಯ ಹಾಲೇಶ್ವರ ಪ್ರಿಂಟಿಂಗ್‌ ಪ್ರೆಸ್‌ ಹಿಂಭಾಗದ ಲ್ಲಿರುವ ಶ್ರೀ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳು 12ನೇ ವರ್ಷದ ಮಹಾ ಮಂಡಲಾಭಿಷೇಕವು ಇಂದಿನಿಂದ ಬರುವ ಸೆಪ್ಟೆಂಬರ್‌ 3ರ ಮಂಗಳವಾರದವರೆಗೆ ನಡೆಯಲಿದೆ. 

ಮತದಾರರಿಗೆ ಆಮಿಷ; ಉಪಸಭಾಪತಿ ರುದ್ರಪ್ಪ ಲಮಾಣಿ ವಿರುದ್ದ ಎಫ್‌ಐಆರ್

ರಾಣೇಬೆನ್ನೂರು : 2023ರ ವಿಧಾನಸಭೆ ಚುನಾವಣೆಗೆ  ನಾಮಪತ್ರ ಸಲ್ಲಿಕೆ ಸಮಯದಲ್ಲಿ ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಾವಿರಕ್ಕೂ ಅಧಿಕ ಟಿ-ಶರ್ಟ್ ನೀಡಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪದಡಿ ಶಾಸಕ, ಇಂದಿನ ಉಪಸಭಾಪತಿ ರುದ್ರಪ್ಪ ಲಮಾಣಿ ವಿರುದ್ದ ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಗರದಲ್ಲಿ ಅಪರಿಚಿತ ವ್ಯಕ್ತಿಯ ಸಾವು

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ    ಸುಮಾರು 45-48 ವರ್ಷ ವಯಸ್ಸಿನ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಈತ ಕಪ್ಪು ತಲೆ ಕೂದಲು ಹೊಂದಿದ್ದು, ಡಿಸ್ಟಂಪರ್‌ ಬಣ್ಣದ ಅಂಗಿ, ಹಸಿರು ಬಣ್ಣದ ಪಟ್ಟಿ ಪಟ್ಟಿ ಕಲರ್‌ ಪಂಚೆ, ನೀಲಿ ಮತ್ತು ಬಿಳಿ ಬಣ್ಣದ  ಟವೆಲ್‌ ಧರಿಸಿರುತ್ತಾನೆ.

ರಸ್ತೆ ಅಪಘಾತದಲ್ಲಿ ರಾಜನಹಳ್ಳಿ ಸ್ವಾಮೀಜಿ ಕಾರು ಚಾಲಕನ ಸಾವು

ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳ ವಾಹನ ಚಾಲಕ ನಾಗಯ್ಯ (38) ಚಿಕಿತ್ಸೆ ಫಲಕಾರಿಯಾಗದೇ  ಇಂದು ಬೆಳಗ್ಗೆ ದಾವಣಗೆರೆಯ ಎಸ್.ಎಸ್.ಆಸ್ಪತ್ರೆಯಲ್ಲಿ ನಿಧನರಾದರು.

17ರಿಂದ ಉತ್ಸವಾಂಬ ದೇವಿಗೆ ಮಂಡಲಾಭಿಷೇಕ

ನಗರದ ವಸಂತ ರಸ್ತೆಯ ಹಾಲೇಶ್ವರ ಪ್ರಿಂಟಿಂಗ್‌ ಪ್ರೆಸ್‌ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳು 12ನೇ ವರ್ಷದ ಮಹಾ ಮಂಡಲಾಭಿಷೇಕವು ಇದೇ ದಿನಾಂಕ 17ರ ಬುಧವಾರದಿಂದ ನಡೆಯಲಿದೆ.

ರಾಜನಹಳ್ಳಿಯಲ್ಲಿ ಇಂದು ಅಭಿನಂದನಾ ಸಮಾರಂಭ

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಅವರ ಹುತಾತ್ಮ ದಿನಾಚರಣೆ, ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ

ಹೆಚ್ಚುವರಿ ಪ್ರೀಮಿಯಂ ವಸೂಲಿ; ಹಣ ಮರುಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶ

ಹೆಚ್ಚುವರಿ ಸೌಲಭ್ಯ ಒದಗಿಸುವುದಾಗಿ ಹಾಲಿ ಚಾಲ್ತಿಯಲ್ಲಿದ್ದ  ಆರೋಗ್ಯ ವಿಮೆಗೆ  ಗ್ರಾಹಕರೊಬ್ಬರಿಂದ ಅಧಿಕ ಮೊತ್ತದ ಪ್ರೀಮಿಯಂ ಕಟ್ಟಿಸಿಕೊಂಡಿದ್ದ ಐಸಿಐಸಿಐ ಲ್ಯೋಂಬರ್ಡ್ ಇನ್ಸೂರೆನ್ಸ್ ಕಂಪನಿಯು  25 ಸಾವಿರ  ಮರುಪಾವತಿ ಜೊತೆೆಗೆ 5 ಸಾವಿರ ರೂಪಾಯಿ ಕೋರ್ಟ್ ವೆಚ್ಚ ನೀಡುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ರವೀಂದ್ರನಾಥ್ ಬಡಾವಣೆ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ : ಎಚ್ಚರಿಕೆ

ನಗರದ ಹೊರ ವಲಯದ ಲೋಕಿಕೆರೆ ರಸ್ತೆಯಲ್ಲಿನ ಎಸ್.ಎ. ರವೀಂದ್ರನಾಥ್ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಶೆಡ್ ತೆರವು ಕುರಿತಂತೆ ಕಂದಾಯ ಸಚಿವರು ಸೂಚಿಸಿರುವಂತೆ ಮುಂಬರುವ ಒಂದು ತಿಂಗಳೊಳಗಾಗಿ ಅನುಪಾಲನ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

error: Content is protected !!