ನಾಳೆ ದಿವ್ಯಾಂಗರ ವೈದ್ಯಕೀಯ ತಪಾಸಣೆ
ಶಾಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ನಾಡಿದ್ದು ದಿನಾಂಕ 5ರ ಬೆಳಿಗ್ಗೆ 9.30ಕ್ಕೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವಿಕಲ ಚೇತನ ಮಕ್ಕಳ ವೈದ್ಯಕೀಯ ತಪಾಸಣೆ ಮತ್ತು ಸಾಧನ ಸಲಕರಣೆಗಳ ಮೌಲ್ಯಾಂಕನ ಶಿಬಿರ ನಡೆಯಲಿದೆ.
ಶಾಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ನಾಡಿದ್ದು ದಿನಾಂಕ 5ರ ಬೆಳಿಗ್ಗೆ 9.30ಕ್ಕೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವಿಕಲ ಚೇತನ ಮಕ್ಕಳ ವೈದ್ಯಕೀಯ ತಪಾಸಣೆ ಮತ್ತು ಸಾಧನ ಸಲಕರಣೆಗಳ ಮೌಲ್ಯಾಂಕನ ಶಿಬಿರ ನಡೆಯಲಿದೆ.
ಜಾತಿ ಜನಗಣತಿ ವರದಿಯನ್ನು ಸರ್ಕಾರ ಸಂಪುಟದಲ್ಲಿ ಒಪ್ಪಿಗೆ ಪಡೆದು ಬಹಿರಂಗಪಡಿಸದಿದ್ದಲ್ಲಿ ಲಾಯರ್ಸ್ ಗಿಲ್ಡ್ ವತಿಯಿಂದ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಗಿಲ್ಡ್ ರಾಜ್ಯ ಸಂಚಾಲಯ ಅನೀಸ್ ಪಾಷ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಕೆರೆಗಳು ಅಲ್ಪ ಪ್ರಮಾಣದಲ್ಲಿವೆ. ಹಾಗಾಗಿ ಅವುಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ನೆಲ-ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಒಕ್ಕೂಟ ಮನವಿ ಸಲ್ಲಿಸಿದೆ.
ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಉಚಿತವಾಗಿ ಕನ್ನಡ ಬಾವುಟಗಳನ್ನು ನಗರದ 11ನೇ ಮೇನ್ 3ನೇ ಕ್ರಾಸ್‌ನ ಎಂ.ಸಿ.ಸಿ `ಬಿ’ ಬ್ಲಾಕ್‌ನಲ್ಲಿರುವ ಸುರೇಶ್ ಕಾಫಿ ಬಾರ್‌ನಲ್ಲಿ ಇಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಒಬ್ಬರಿಗೆ ಒಂದು ಬಾವುಟ ವಿತರಿಸಲಾಗುವುದು.
ಬೆಂಗಳೂರಿನ ಆಚಾರ್ಯ ಕ್ರೀಡಾಂಗಣದಲ್ಲಿ ನ.1 ರಿಂದ ಡಿ.1ರ ವರೆಗೆ ಒಂದು ತಿಂಗಳ ಕಾಲ ಕರ್ನಾಟಕ ಸಾಫ್ಟ್‌ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‌ಪಿಎಲ್) ಟೂರ್ನಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಸ್ಟೇಟ್ ಸಾಫ್ಟ್‌ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ರಾಜು ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 11-30ಕ್ಕೆ ನಡೆಯಲಿದೆ
ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಇಂದು ಸಂಜೆ 6ಕ್ಕೆ ಲಿಂ. ಮಾಗನೂರು ಬಸಪ್ಪನವರ 29ನೇ ವಾರ್ಷಿಕ ಪುಣ್ಯಸ್ಮರಣೆ ಮತ್ತು ಲಿಂ. ಸರ್ವಮಂಗಳಮ್ಮ ಮಾಗನೂರು ಬಸಪ್ಪನವರ 16ನೇ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಸರ್ವಶರಣ ಸಮ್ಮೇಳನ ನಡೆಯಲಿದೆ.
ನವೆಂಬರ್ 1 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಚಿತವಾಗಿ ಕನ್ನಡ ಬಾವುಟಗಳನ್ನು ನಗರದ 11ನೇ ಮೇನ್ 3ನೇ ಕ್ರಾಸ್‌ನ ಎಂ.ಸಿ.ಸಿ `ಬಿ’ ಬ್ಲಾಕ್‌ನಲ್ಲಿರುವ ಸುರೇಶ್ ಕಾಫಿ ಬಾರ್‌ನಲ್ಲಿ ನಾಡಿದ್ದು ದಿನಾಂಕ 31ರ ಗುರುವಾರ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಒಬ್ಬರಿಗೆ ಒಂದು ಬಾವುಟ ವಿತರಿಸಲಾಗುವುದು.
ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ದಿನಾಂಕ 30 ರ ಬುಧವಾರ ನೀರು ತುಂಬಿಸುವುದು, ನಾಡಿದ್ದು ದಿನಾಂಕ 31 ರ ಗುರುವಾರ ಮಧ್ಯಾಹ್ನ 2 ರವರೆಗೆ ಚತುರ್ದಶಿ ಎಣ್ಣೆಯ ಅಭ್ಯಂಜನ ಸ್ನಾನ, ಮಧ್ಯಾಹ್ನ 3 ರವರೆಗೆ ಅಂಗಡಿ, ಕಚೇರಿಗಳಲ್ಲಿ ಸಾಮೂಹಿಕ ಲಕ್ಷ್ಮೀಪೂಜೆ ಮಾಡುವುದು.
ಬಿ.ಇಡಿ ಕೋರ್ಸ್ಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 14 ಅರ್ಜಿ ಸಲ್ಲಿಸಲು ಕೊನೆ ದಿನ.
ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಜಯಂತಿ ಪ್ರಯುಕ್ತ ಜಿಲ್ಲೆಯ ಬಿಜೆಪಿ ವತಿಯಿಂದ ರನ್ ಫಾರ್ ಯುನಿಟಿ ಕಾರ್ಯಕ್ರಮ ವನ್ನು ಪ್ರಧಾನಮಂತ್ರಿ ಮೋದಿಯವರ ಆದೇಶದಂತೆ ಇಂದು ಬೆಳಗ್ಗೆ 7ಕ್ಕೆ ನಗರದ ಗುಂಡಿ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಧನ್ವಂತರಿ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.