Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಕೊಮಾರನಹಳ್ಳಿ : ಇಂದು ಕಂಕಣಧಾರಣೆ, ಧ್ವಜ ಸ್ಥಾಪನೆ

29 ರಂದು ಕೆರೆಯಲ್ಲಿ ತೆಪ್ಪೋತ್ಸವ ಮತ್ತು ದೇವಸ್ಥಾನದಲ್ಲಿ ದೀಪೋತ್ಸವ ಹಮ್ಮಿಕೊಂಡಿರುವ ಕಾರಣ ಇಂದು ಬೆಳಗ್ಗೆ 11 ಗಂಟೆಗೆ ರಂಗನಾಥ ಸ್ವಾಮಿಗೆ ಕಂಕಣಧಾರಣೆ ಮತ್ತು ಕೆರೆಯ ನಡುಗಡ್ಡೆಯಲ್ಲಿ ಧ್ವಜ ಸ್ತಂಭ ಸ್ಥಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ

ದ್ವಿಚಕ್ರ ಬೈಕ್ ಟ್ಯಾಕ್ಸಿ ರದ್ಧುಪಡಿಸಿ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

ಅನಧಿಕೃತ ದ್ವಿಚಕ್ರ ಬೈಕ್ ಟ್ಯಾಕ್ಸಿಗಳನ್ನು ರದ್ದುಪಡಿಸಿ, ಆಟೋ, ಕ್ಯಾಬ್ ಚಾಲಕರ ಹಿತದೃಷ್ಟಿಯಿಂದ  ಚಾಲಕರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್.ಅರವಿಂದಾಕ್ಷ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರನ್ನು ಆಗ್ರಹಿಸಿದ್ದಾರೆ.

26 ರಂದು ರೆಡ್‌ಕ್ರಾಸ್ ಸಂಸ್ಥೆ ಮಹಾಸಭೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಇದೇ ದಿನಾಂಕ 26 ರಂದು ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಸಂಸ್ಥೆಯ ಕಛೇರಿಯಲ್ಲಿ ಆಯೋಜಿಸಲಾಗಿದೆ.

ಅತ್ಯಾಚಾರ : 10 ವರ್ಷ ಜೈಲು, 40 ಸಾವಿರ ದಂಡ

ಪ್ರೀತಿ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.

ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ

ಗಾಂಧೀಜಿಯವರ ಕನಸಿನ ಖಾದಿ ಹಾಗೂ ಗ್ರಾಮೀಣ ಉದ್ಯೋಗದ ಕನಸು ನನಸು ಮಾಡುವ ನಿಟ್ಟಿನಲ್ಲಿ ಇಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಮಂಡಳಿ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ಖಾದಿ ಸಂಘ ಸಂಸ್ಥೆಗಳ ವತಿಯಿಂದ ಖಾದಿ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಭೂ ಕಬಳಿಕೆ ವಿವಾದ: ಸಚಿವ ಜಮೀರ್ ಅಹಮದ್ ಸಂಪುಟದಿಂದ ವಜಾಗೊಳಿಸಲು ಬಿಜೆಪಿ ಆಗ್ರಹ

ಹಿಂದುಗಳಿಗೆ ಸೇರಿದ ಜಮೀನು, ಮಠ ಮಾನ್ಯಗಳ, ದೇವಸ್ಥಾನಗಳ ಮತ್ತು ಪರಿಶಿಷ್ಟರ ಜಮೀನನ್ನು ವಕ್ಫಬೋರ್ಡ್‌ಗೆ ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದು, ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿರುವ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟ ದಿಂದ ವಜಾಗೊಳಿಸಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ಶಿರಮನಹಳ್ಳಿಯಲ್ಲಿ ಇಂದು ಉದ್ಘಾಟನೆ

ಶಿರಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಘದ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡದ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 11.30 ಕ್ಕೆ ಎಸ್.ಎ ರವೀಂದ್ರನಾಥ್ ನಗರದಲ್ಲಿ ನಡೆಯಲಿದೆ.

ಹೊನ್ನಾಳಿಯಲ್ಲಿ ಇಂದು ಬಿಜೆಪಿಯಿಂದ ಪ್ರತಿಭಟನೆ

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲೂ ರೈತರ ಪಲವ ತ್ತಾದ ಕೃಷಿ ಭೂಮಿ, ಹಿಂದುಗಳ ಸ್ಮಶಾನ, ದೇವ ಸ್ಥಾನ ಜಾಗ, ಕಂದಾಯ, ಗೋಮಾಳ ಜಾಗವನ್ನು ವಕ್ಫ್ ಬೋರ್ಡ ಹೆಸರಿಗೆ ಮಾಡಿಕೊಳ್ಳುತ್ತಿರುವ ಕ್ರಮವನ್ನು ವಿರೋಧಿಸಿ  ನಾಳೆ ದಿನಾಂಕ 4ರ ಸೋಮವಾರ ಬೆಳಗ್ಗೆ 10 ಕ್ಕೆ ಹೊನ್ನಾಳಿ ಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ  ಹೇಳಿದರು.

ನಗರದಲ್ಲಿ ಇಂದು ಅಂತರ್ ಕಾಲೇಜು ಜುಡೋ ಪಂದ್ಯಾವಳಿ, ವಿವಿ ತಂಡದ ಆಯ್ಕೆ

ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಕ್ರೀಡಾ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷ ಹಾಗೂ ಮಹಿಳೆಯರ ಜುಡೋ ಪಂದ್ಯಾವಳಿ ಮತ್ತು ವಿವಿ ತಂಡದ ಆಯ್ಕೆ ಕಾರ್ಯಕ್ರಮವು ಇಂದು ಬೆಳಿಗ್ಗೆ 10.30ಕ್ಕೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಸಭಾಂಗಣದಲ್ಲಿ ನಡೆಯಲಿದೆ.

ಬಿ.ಇಡಿ ಕೋರ್ಸ್‌ಗೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ 2 ವರ್ಷದ ಬಿ.ಇಡಿ ಕೋರ್ಸ್ ಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.   ನವೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ. 

error: Content is protected !!