Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಇಂದು ಪಿಯು ಕಾಲೇಜುಗಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

ನಗರದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆ ದಿನಾಂಕ 12ರಿಂದ 14ರ ವರೆಗೆ 2024-25ನೇ ಸಾಲಿನ ಪದವಿ ಪೂರ್ವ ಕಾಲೇಜು ಗಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ನಡೆಯಲಿದೆ

ನಗರದಲ್ಲಿ ಅಪರಿಚಿತನ ಶವ ಪತ್ತೆ

ಕೃಷ್ಣಪ್ಪ ಬಿನ್ ಭೀಮಪ್ಪ ಎಂಬ 60 ವರ್ಷ ವಯಸ್ಸಿನ ವ್ಯಕ್ತಿ  ಕಳೆದ ಅ.23 ರಂದು ಸಂಜೆ ನಗರದ ಪಿ.ಬಿ.ರಸ್ತೆ ಹತ್ತಿರ ಇರುವ ಸಾಗರ ಬೆಣ್ಣೆದೋಸೆ ಹೋಟೆಲ್ ಮುಂಭಾಗದ ಫುಟ್‌ಪಾತ್  ಮೇಲೆ ಮೃತಪಟ್ಟಿದ್ದಾರೆ.

ಸಿ.ಜಿ. ಆಸ್ಪತ್ರೆಯಲ್ಲಿ ಅಪರಿಚಿತನ ಸಾವು

ಯಾವುದೋ ಕಾಯಿಲೆಯಿಂದ ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಅಕ್ಟೋಬರ್ 31 ರಂದು  ಮೃತಪಟ್ಟಿದ್ದಾನೆ. 

ಹುಬ್ಬಳ್ಳಿ – ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಣೆ

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 07339/07340) ರೈಲುಗಳ ಅವಧಿಯನ್ನು ಈಗಿರುವ ನಿಲುಗಡೆ ಮತ್ತು ಸಮಯದೊಂದಿಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. 

ನಗರದಲ್ಲಿ ಇಂದು ಕುರಿ-ಮೇಕೆ ಸಾಕಾಣಿಕೆ ತರಬೇತಿ

ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ರೈತರಿಗೆ ಪಶು ಸಂಗೋ ಪನಾ ಚಟುವಟಿಕೆಗಳ ತರಬೇತಿ ಆಯೋಜಿಸಲಾಗಿದೆ. ಇಂದು  ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಹಾಗೂ ಇದೇ ದಿನಾಂಕ 15 ಮತ್ತು 16ರಂದು ಕೋಳಿ ಸಾಕಾಣಿಕೆ ತರಬೇತಿ, ಇದೇ ದಿನಾಂಕ 29, 30ರಂದು ಆಧುನಿಕ ಹೈನುಗಾರಿಕೆ ತರಬೇತಿ  ನಡೆಯಲಿದೆ.

ಹೊನ್ನಾಳಿಗೆ ಇಂದು ನಿರ್ಮಲ ತುಂಗಭದ್ರಾ ಅಭಿಯಾನ

ನಿರ್ಮಲ ತುಂಗಭದ್ರಾ ಅಭಿಯಾನವು ಇಂದು ಬೆಳಿಗ್ಗೆ ನ್ಯಾಮತಿ ತಾಲ್ಲೂಕು ಚೀಲೂರು ಪ್ರವೇಶಿಸಲಿದೆ ಎಂದು ಅಭಿಯಾನದ ತಾಲ್ಲೂಕು ಕಾರ್ಯದರ್ಶಿ ವಾಸಪ್ಪ ತಿಳಿಸಿದ್ದಾರೆ.

ಬ್ಯಾಡಗಿಯಲ್ಲಿ ಕೊಪ್ಪಳ ಶ್ರೀ ಪ್ರವಚನ

ರಾಣೇಬೆನ್ನೂರು : ಬ್ಯಾಡಗಿಯ ಎಸ್.ಜೆ.ಜೆ.ಎಂ ಕಾಲೇಜು ಕ್ರೀಡಾಂಗಣದಲ್ಲಿ ನಾಡಿದ್ದು ದಿನಾಂಕ 13 ರಿಂದ 24 ರವರೆಗೆ ಪ್ರತಿದಿನ ಸಂಜೆ 6 ರಿಂದ 7 ಗಂಟೆಯವರೆಗೆ ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ  ಪ್ರವಚನ ನಡೆಸುವರು.

ಮಲೇಬೆನ್ನೂರಿನಲ್ಲಿಂದು ವಿವಿಧ ಕಾಮಗಾರಿಗಳಿಗೆ ಚಾಲನೆ

ಪುರಸಭೆ ಆವರಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್‌ ತಿಳಿಸಿದ್ದಾರೆ.

ನಗರದ ಪಿ.ಜೆ. ಬಡಾವಣೆ ಆಸ್ತಿಯ ಪಹಣಿಗಳಲ್ಲಿ ವಕ್ಫ್‌ ಸಂಸ್ಥೆ ಹೆಸರು

ರೈತರ ಜಮೀನು, ಮಠ, ಮಂದಿರಗಳು ವಕ್ಫ್‌ಗೆ ಸೇರಿರುವ ಕುರಿತು ನೋಟೀಸುಗಳು ಬಂದ ಸುದ್ದಿಗಳ ನಂತರ ಇದೀಗ ನಗರದ ಪ್ರತಿಷ್ಠಿತ ಬಡಾವಣೆಯೂ ವಕ್ಫ್‌ಗೆ ಸೇರಿದ ಬಗ್ಗೆ ಪಹಣಿಯಲ್ಲಿ ನಮೂದಾಗಿದೆ.

ಮಹಾನಗರ ಪಾಲಿಕೆಯಿಂದ 13 ರಿಂದ ಇ-ಆಸ್ತಿ ಆಂದೋಲನ

ಮಹಾನಗರಪಾಲಿಕೆ ವತಿಯಿಂದ ಏಕಗವಾಕ್ಷಿಯಡಿ ಇ-ಆಸ್ತಿ ವಿಶೇಷ ಆಂದೋಲನವನ್ನು ನವಂಬರ್ 13 ರಿಂದ ಡಿಸೆಂಬರ್ 31 ರವರೆಗೆ  ಮಹಾನಗರಪಾಲಿಕೆಯ 3 ವಲಯ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ತೆರಿಗೆ ವಸೂಲಿಗೆ ಅಧಿಕಾರಿ, ಸಿಬ್ಬಂದಿಗಳ ತಂಡ ರಚನೆ

ಪ್ರಸಕ್ತ ಸಾಲಿನ ಆರ್ಥಿಕ ವರ್ಷವು ಮಾರ್ಚ್-2025ಕ್ಕೆ ಮುಕ್ತಾಯವಾಗ ಲಿದ್ದು, ಮಹಾ ನಗರಪಾಲಿಕೆಯಿಂದ ಆಸ್ತಿ ತೆರಿಗೆ, ನೀರಿನ ದರ, ಒಳಚರಂಡಿ ಸೇವಾ ಶುಲ್ಕಗಳನ್ನು ಪಾವತಿಸಿಕೊಳ್ಳುವುದಕ್ಕಾಗಿ ಪ್ರತಿ ವಾರ್ಡ್‍ಗಳಿಗೆ ಅಧಿಕಾರಿ, ಸಿಬ್ಬಂದಿಗಳ ತಂಡವನ್ನು ರಚಿಸಲಾಗಿದೆ.

13ರಂದು ನಗರದಲ್ಲಿ ಆರೋಗ್ಯ ತಪಾಸಣೆ

ಉಚಿತ ಅರೋಗ್ಯ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಕಣ್ಣಿನ ಪರೀಕ್ಷೆಯನ್ನು ಇದೇ ದಿನಾಂಕ 13 ರಂದು ಬುಧುವಾರ ಬೆಳಿಗ್ಗೆ 9.30 ರಿಂದ ಮದ್ಯಾಹ್ನ 2 ರವರೆಗೆ ನಗರದ ಮಹಾರಾಜಪೇಟೆಯ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ನಡೆಸಲಾಗುವುದು

error: Content is protected !!