Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಶಾಲಾ ಮಕ್ಕಳ ನಾಟಕೋತ್ಸವ

ವೃತ್ತಿ ರಂಗಭೂಮಿ ರಂಗಾಯಣ, ಬಾಪೂಜಿ ವಿದ್ಯಾ ಸಂಸ್ಥೆ ಮತ್ತು ಎಸ್‌.ಎಸ್.ಕೇರ್ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗಾಗಿ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಇಂದಿನಿಂದ ಮೂರು ದಿನ ಶಾಲಾ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ನಡೆಯಲಿವೆ. 

ವಿಶೇಷಚೇತನರಿಗೆ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಸ್ವಯಂ ಉದ್ಯೋಗ ನಡೆಸಲು ಹೊಲಿಗೆ ಯಂತ್ರ 80, ಟಾಕಿಂಗ್ ಲ್ಯಾಪ್‍ಟಾಪ್ 1, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ಮಾರ್ಟ್ ಫೋನ್ 2 ಮತ್ತು ಎಸ್.ಎಸ್.ಎಲ್.ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ನೀಡಲು  ಅರ್ಹ ವಿಕಲಚೇತನ ಫಲಾನುಭವಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ

ಹರಿಹರ : ನದಿಗೆ ಹಾರಿ ಆತ್ಮಹತ್ಯೆ

ಹರಿಹರ : ಬೆಂಗಳೂರು  ಬನ್ನೇರುಘಟ್ಟ, ದೇವರ ಚಿಕ್ಕನಹಳ್ಳಿ ಬಡಾವಣೆ ನಿವಾಸಿ ಎನ್ನಲಾದ ಮಾರುತಿ  (57)  ಎಂಬಾತ  ನಿನ್ನೆ ಸಂಜೆ  ತುಂಬಿ ಹರಿಯುತ್ತಿರುವ  ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಸತಿ ಶಾಲೆಗೆ ವಿಶೇಷ ವರ್ಗದ ಮಕ್ಕಳ ಪ್ರವೇಶಕ್ಕೆ ಅಹ್ವಾನ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಿಗೆ 6ನೇ ತರಗತಿಗೆ ಶೇ. 10 ರಷ್ಟು ಮೀಸಲಿರಿಸಿ ವಿಶೇಷ ವರ್ಗಗಳ ಅಡಿಯಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ನಗರದಲ್ಲಿ ಇಂದು ಹೈನುಗಾರಿಕೆ ತರಬೇತಿ

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿ ಯಿಂದ ಪಶು ಆಸ್ಪತ್ರೆ ಆವರಣದಲ್ಲಿ ರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಇಂದು ಮತ್ತು ನಾಳೆ ರೈತರಿಗೆ ಆಧು ನಿಕ ಹೈನುಗಾರಿಕೆ ಚಟುವಟಿಕೆಗಳ ತರಬೇತಿ ನಡೆಯಲಿದೆ

ವಿಮಾ ಯೋಜನೆಯಡಿ ರೈತರಿಗೆ ಬೆಳೆ ಸಾಲ

ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೊ ಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆ ಗಳಿಗೆ ಬೆಳೆ ಸಾಲಕ್ಕಾಗಿ ರೈತರು ನೋಂದಾಯಿಸಿ ಕೊಳ್ಳಬಹುದು.

23 ರಂದು ಗ್ರಾ.ಪಂ ನೌಕರರ ಮುಷ್ಕರ

ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಸೌಲಭ್ಯ ಸೇರಿದಂತೆ 19 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಇದೇ ದಿನಾಂಕ 23 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ

ಮುಂಗಾರು ಹಂಗಾಮಿಗೆ ವಿಮಾ ಕಂತು ಪಾವತಿಸಲು ಸೂಚನೆ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ, ಪಡೆಯದ ರೈತರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.

ನಗರದಲ್ಲಿ ಇಂದು ಅನಂತ ಚೇತನ ಪರಿವಾರ ಉದ್ಘಾಟನೆ

ಜೀವನೋತ್ಸಾಹ ಚಿರವಾಗಿರಲಿ ಎಂಬ ಸದುದ್ದೇಶದಿಂದ ಆರೋಗ್ಯ, ಪ್ರಕೃತಿ, ಸಂಸ್ಕೃತಿ, ಕೌಶಲ್ಯ, ಮನೋಲ್ಲಾಸ ಹೀಗೆ ವಿವಿಧ ಸಾಮಾಜಿಕ ಕಾಳಜಿಯ `ಅನಂತ ಚೇತನ ಪರಿವಾರ’ ಸಂಸ್ಥೆಯು ಇಂದು ಸಂಜೆ 4 ಗಂಟೆಗೆ ಶ್ರೀ ಸದ್ಯೋಜ್ಯಾತ ಶಿವಾಚಾರ್ಯ ನಿಕೇತನ ಹಿರೇಮಠ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ

ನಾಳೆ ಸರಕು – ಸೇವಾ ತೆರಿಗೆ ಸೆಮಿನಾರ್‌

ಜಿಲ್ಲಾ ಪ್ರಾಕ್ಟಿಷನರ್ಸ್‌ ಅಸೋಸಿಯೇಷನ್‌ ವತಿಯಿಂದ ನಗರದ ಚಾರ್ಟಡ್‌ ಅಕೌಂಟೆಂಟ್ಸ್‌ ಭವನದಲ್ಲಿ ನಾಡಿದ್ದು ದಿನಾಂಕ 18ರ ಗುರುವಾರ ಸರಕು ಮತ್ತು ಸೇವಾ ತೆರಿಗೆ ಕುರಿತು ಸೆಮಿನಾರ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ದಾನ ಬದುಕನ್ನು ಸುಂದರಗೊಳಿಸುತ್ತದೆ

ರಾಣೇಬೆನ್ನೂರು : ದಾನ ಮಾಡುವುದು, ಸ್ವೀಕರಿಸುವುದು ಆರೋಗ್ಯಕರ ಸಮಾಜದ ಅವಿಭಾಜ್ಯ ಅಂಗ, ಅಲ್ಲಿ ಪ್ರೀತಿ, ಮಮಕಾರ, ಸಂತೃಪ್ತಿ, ನೆಮ್ಮದಿ ಎಲ್ಲ ಇದೆ. ದಾನ ಮಾಡುವುದರಿಂದ ಬದುಕು ಸುಂದರಮಯವಾಗಿ ರೂಪಗೊಳ್ಳಲಿದೆ

28ಕ್ಕೆ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಜಗಳೂರು ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಇದೇ ದಿನಾಂಕ 28 ರಂದು ಮಧ್ಯಾಹ್ನ 1 ಗಂಟೆಗೆ ಜಗಳೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ

error: Content is protected !!