Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಲಯನ್ಸ್ ಸಭೆ

 ಲಯನ್ಸ್ ಕ್ಲಬ್  ಸಾಮಾನ್ಯ ಸಭೆ, ಉಪನ್ಯಾಸ, ಪ್ರಶಸ್ತಿ ಫಲಕ ವಿತರಣೆ, ಲಯನ್ಸ್ ಸ್ಟಿಕರ್ ಹಾಗೂ ಬ್ಯಾಡ್ಜ್ ವಿತರಣಾ ಕಾರ್ಯಕ್ರಮವು ಲಯನ್ಸ್ ಭವನದಲ್ಲಿ ಇಂದು ಸಂಜೆ 7.05ಕ್ಕೆ ನಡೆಯಲಿದೆ.

ಇಂದು ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ

ಎಂ.ಸಿ.ಸಿ. `ಬಿ’ ಬ್ಲಾಕ್‍ನ ಬಿ.ಐ.ಇ.ಟಿ. ಕಾಲೇಜ್ ರಸ್ತೆಯ ಶರಣಂ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಇಂದು ಸಂಜೆ 5 ಗಂಟೆಗೆ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ, ಗಣಪತಿ ಹೋಮ, ಪೂರ್ಣ ವ್ರತ, ಮಂತ್ರ ಪುಷ್ಪ, ಮಡಿ ಪೂಜೆ, ಮಹಾಮಂಗಳಾರತಿ, ಮತ್ತು ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.

ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ

ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂಬ ಸುಪ್ರೀಂಕೋರ್ಟ್ ತೀರ್ಪು ಮಾದಿಗ ಸಮುದಾಯದ ಸಮಗ್ರ ಪ್ರಗತಿಗೆ ರಹದಾರಿ ಹಾಗಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಗೌರಿ ಹುಣ್ಣಿಮೆ, ಶಿವಾನುಭವ ಗೋಷ್ಠಿ

ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ  285ನೇ  ಗೌರಿ ಹುಣ್ಣಿಮೆ ಶಿವಾನುಭವ ಗೋಷ್ಠಿ ನಡೆಯಲಿದೆ. ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀ ಕಲ್ಲಯ್ಯಜ್ಜ ವಹಿಸುವರು.

ನಗರದಲ್ಲಿಂದು ವೃತ್ತಿ ರಂಗಭೂಮಿ ದಿನ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್‌ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕನ್ನಡ ವೃತ್ತಿ ರಂಗಭೂಮಿ ಮತ್ತು ರಾಜ್ಯೋತ್ಸವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ವೃತ್ತಿ ರಂಗಭೂಮಿ ರಂಗಾಯಣ,  ಸರ್ಕಾರಿ ಮಹಿಳಾ ಕಾಲೇಜ್ ಮತ್ತು ಧಾರವಾಡದ ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಇವರ ಸಹಯೋಗದಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿದೆ.

ಕಳ್ಳನ ಬಂಧನ : ಆಭರಣಗಳ ವಶ

ನಗರದ ಕೆಎಸ್ಆರ್‌ಟಿಸಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿ, ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ 5.08 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತರಳಬಾಳು ಜಗದ್ಗುರುಗಳಿಂದ ಬ್ಯಾಡಗಿಯಲ್ಲಿ ಬಾಗಿನ ಅರ್ಪಣೆ

ರಾಣೇಬೆನ್ನೂರು : ಸಿರಿಗೆರೆಯ ತರಳಬಾಳು ಜಗದ್ಗುರು  ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬ್ಯಾಡಗಿ ತಾಲ್ಲೂಕಿನ ಆಣೂರು, ಕೊಲ್ಲಾಪೂರ, ಶಿಡೇನೂರ, ಕೆರವಡಿ, ಹೆಡಿಗ್ಗೊಂಡ, ಹಿರೇನಂದಿಹಳ್ಳಿ ಮತ್ತು ಮಾಸಣಗಿ ಗ್ರಾಮಗಳ ಕೆರೆಗಳಿಗೆ ನಾಡಿದ್ದು ದಿನಾಂಕ 16ರ ಬೆಳಿಗ್ಗೆ 11.30  ಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ಪ್ಯಾಕ್ಸ್‌ಗಳಿಗೆ ಕೇಂದ್ರದಿಂದ ಪಂಚ ನೆರವು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಐದು ಉಪಕ್ರಮಗಳನ್ನು ರೂಪಿಸಿದ್ದು, ತಂತ್ರಾಂಶದಿಂದ ಹಿಡಿದು ಪೆಟ್ರೋಲ್‌ ಪಂಪ್‌ ಸ್ಥಾಪನೆವರೆಗೆ ಹಲವು ವಿಷಯಗಳಲ್ಲಿ ನೆರವು ನೀಡುತ್ತಿದೆ.

18ಕ್ಕೆ ಕನಕ ಜಯಂತಿ

ಜಿಲ್ಲಾಡಳಿತದಿಂದ ಇದೇ ದಿನಾಂಕ 18 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಕನಕ ಜಯಂತಿ ಆಚರಣೆ ಸಮಾರಂಭ ನಡೆಯಲಿದೆಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದ್ದಾರೆ.

ಕದಳಿ ವೇದಿಕೆಯಿಂದ ಪ್ರಬಂಧ ಸ್ಪರ್ಧೆ

ಕದಳಿ ಮಹಿಳಾ ವೇದಿಕೆಯ ವಾರ್ಷಿಕೋತ್ಸವದ ಪ್ರಯುಕ್ತ, ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ.

error: Content is protected !!