Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಭಗವದ್ಗೀತೆ ಸ್ಪರ್ಧೆ

ಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದಿಂದ ಗೀತಾ ಜಯಂತಿ ಅಂಗವಾಗಿ ಭಗವದ್ಗೀತೆ ಸ್ಪರ್ಧೆಯನ್ನು  ಇಂದು ಬೆಳಿಗ್ಗೆ 12 ಗಂಟೆಗೆ ನಗರದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. 

ಮಲೇಬೆನ್ನೂರಿನಲ್ಲಿ ಇಂದು ಪುರಸಭೆ ಸಭೆ

ಪಟ್ಟಣದ ಪುರಸಭೆಯ ಕೌನ್ಸಿಲ್‌ ಸಭಾಂಗಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಪುರಸಭೆ ಪ್ರಭಾರಿ ಅಧ್ಯಕ್ಷೆ ಶ್ರೀಮತಿ ನಪ್ಸಿಯಾ ಬಾನು ಚಮನ್‌ ಷಾ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಲಿಯಾದ ಇಟ್ಟಿಗೆ ಗ್ರಾಮದ ರೈತ ಸಿದ್ದರಾಮಪ್ಪ

ಚನ್ನಗಿರಿ : ತಾಲ್ಲೂಕಿನ ಇಟ್ಟಿಗೆ ಗ್ರಾಮದ ಎಂ. ಸಿದ್ದರಾಮಪ್ಪ ಎಂಬ ರೈತ ತೋಟಕ್ಕೆ ತೆರಳಿದಾಗ ವಿದ್ಯುತ್‌ ತಂತಿ ತಗುಲಿ ಸಾವಿಗೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ತರಳಬಾಳು ಶ್ರೀಗಳಿಂದ ಬ್ಯಾಡಗಿಯಲ್ಲಿ ಇಂದು ಬಾಗಿನ ಅರ್ಪಣೆ

ಸಿರಿಗೆರೆಯ ತರಳಬಾಳು ಜಗದ್ಗುರು  ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬ್ಯಾಡಗಿ ತಾಲ್ಲೂಕಿನ ಆಣೂರು, ಕೊಲ್ಲಾಪೂರ, ಶಿಡೇನೂರ, ಕೆರವಡಿ, ಹೆಡಿಗ್ಗೊಂಡ, ಹಿರೇನಂದಿಹಳ್ಳಿ ಮತ್ತು ಮಾಸಣಗಿ ಗ್ರಾಮಗಳ ಕೆರೆಗಳಿಗೆ ಇಂದು ಬೆಳಿಗ್ಗೆ 11.30  ಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ನಗರದಲ್ಲಿ ಇಂದು ವಿಕರವೇಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಳೆ ದಿನಾಂಕ 16 ರ ಸನಿವಾರ ಸಂಜೆ 6 ಗಂಟೆಗೆ ನಗರದ ಶಿವಯೋಗಾಶ್ರಮದ ಆವರಣದಲ್ಲಿ 66 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು

ನಗರದ ಗ್ಲಾಸ್ ಹೌಸ್‌ನಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ

ರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ಮತ್ತು ನಾಳೆ ಸಂಜೆ 5.30ಕ್ಕೆ ಗಾಜಿನ ಮನೆಯಲ್ಲಿ   ಸುವರ್ಣ ಸಂಭ್ರಮ ನಡೆಯಲಿದೆ. ಇಂದು ಯುಗಧರ್ಮ ರಾಮಣ್ಣ ಅವರಿಂದ ಜಾನಪದ ಗೀತೆಗಳು, ಪಂಡಿತ್ ರವೀಂದ್ರ ಅವರಿಂದ ಹಿಂದೂಸ್ತಾನಿ ಸಂಗೀತ, ಪಲ್ಲವಿ ಮತ್ತು ಸಂಗಡಿಗರಿಂದ ಮಹಿಳಾ ವೀರಗಾಸೆ ಜರುಗಲಿದೆ.

ಪಿಜೆ ಬಡಾವಣೆಯ ವಕ್ಫ್ ಆಸ್ತಿ ವಿವಾದ : ನಗರದಲ್ಲಿ ಇಂದು ಸಭೆ

ಪಿ.ಜೆ. ಬಡಾವಣೆಯ ಶ್ರೀರಾಮ ದೇವಸ್ಥಾನದ ಮುಂಭಾಗದಲ್ಲಿ ಇಂದು ಸಂಜೆ 6 ಗಂಟೆಗೆ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ಪಿಜೆ ಬಡಾವಣೆಯ ವಕ್ಫ್ ಆಸ್ತಿಯ ವಿವಾದ ಹಾಗೂ ಪಿ.ಜೆ. ಬಡಾವಣೆಯ ಕುಂದು ಕೊರತೆ ಸಭೆ ಕರೆಯಲಾಗಿದೆ.

ಕದಳಿ ವೇದಿಕೆಯಿಂದ ಪ್ರಬಂಧ ಸ್ಪರ್ಧೆ

ಕದಳಿ ಮಹಿಳಾ ವೇದಿಕೆಯ ವಾರ್ಷಿಕೋತ್ಸವದ ಪ್ರಯುಕ್ತ, ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ.

ನಗರದಲ್ಲಿ ಇಂದು ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಮತ್ತು ಇನ್‍ಕ್ಲೇನ್ ಬೆಂಚ್ ಪ್ರೆಸ್ ಚಾಂಪಿಯನ್‍ಶಿಪ್

ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಮತ್ತು ಇನ್‍ಕ್ಲೇನ್ ಬೆಂಚ್ ಪ್ರೆಸ್ ಚಾಂಪಿಯನ್‍ಶಿಪ್-2024 ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಸಂಘದ ಆವರಣದಲ್ಲಿ ನೆರವೇರಲಿದೆ.

ನಗರದಲ್ಲಿ ಇಂದು ಮಕ್ಕಳ ದಿನಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ, ಕರ್ನಾಟಕ ವಿಜ್ಞಾನ ಪರಿಷತ್ (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ 11.30 ಕ್ಕೆ ಜೆ.ಹೆಚ್.ಪಟೇಲ್ ಬಡಾವಣೆಯ ಜಿಲ್ಲಾ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ

ಎಸ್‌.ಬಿ.ಸಿ. ಕಾಲೇಜಿನಲ್ಲಿ ಇಂದು `ಕನ್ನಡೋತ್ಸವ’ ಸಂಭ್ರಮಾಚರಣೆ

ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ವತಿಯಿಂದ ಇಂದು ಮಧ್ಯಾಹ್ನ 12 ಗಂಟೆಗೆ  ಕಾಲೇಜಿನ ಸಭಾಂಗಣದಲ್ಲಿ 69 ನೇ `ಕನ್ನಡೋತ್ಸವ’ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಲಿದೆ.

error: Content is protected !!