Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಶ್ರೀ ಶಿವಾನಂದ ತೀರ್ಥಗುರುಗಳ 76ನೇ ಪುಣ್ಯಾರಾಧನೆ

ದಾವಣಗೆರೆ : ನಗರದ ಜಯದೇವ ವೃತ್ತದಲ್ಲಿನ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್‌ನ ಶ್ರೀ ಗುರುವ ದತ್ತಾತ್ರೇಯ ದೇವಾಲಯದಲ್ಲಿ ಶ್ರೀ ಶಿವಾನಂದ ತೀರ್ಥಸ್ವಾಮಿಗಳವರ 76ನೇ ಪುಣ್ಯಾರಾಧನಾ ಮಹೋತ್ಸವ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 23ರಿಂದ ಪ್ರವಚನ

ನಗರದ ಶಿವಕುಮಾರ ಸ್ವಾಮಿ ಬಡಾವಣೆಯ 2ನೇ ಹಂತದಲ್ಲಿರುವ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 23 ರಿಂದ 29ರವರೆಗೆ ಪ್ರತಿದಿನ ಸಂಜೆ 7 ರಿಂದ ಪ್ರವಚನ ನಡೆಯಲಿದೆ.

ನಗರದಲ್ಲಿ ಇಂದು ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ

ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ವಿಭಾಗಗಳ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು  ಇಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ.

ಅತ್ತಿಗೆರೆಯಲ್ಲಿ ಇಂದು ಸಹಕಾರ ಸಪ್ತಾಹದ ಸಮಾರೋಪ

ಸಹಕಾರ ಇಲಾಖೆಗಳ ನೇತೃತ್ವದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಅತ್ತಿಗೆರೆ ಶ್ರೀ ನಂದಿಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ಇಂದು ಬೆಳಿಗ್ಗೆ 11 ಕ್ಕೆ ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗದಲ್ಲಿ ಅಯ್ಯಪ್ಪ ಸ್ವಾಮಿ ತೇರು

ಚಿತ್ರದುರ್ಗ : ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ನಿನ್ನೆ ಆರಂಭಗೊಂಡಿದ್ದು, ಬರುವ ಜನವರಿ 13ರವರೆಗೆ ನಡೆಯಲಿದೆ.

ಹರಪನಹಳ್ಳಿ ಹೆಚ್.ಪಿ.ಎಸ್ ಪದವಿ ಕಾಲೇಜಿನಲ್ಲಿ ನಾಳೆ `ಕನ್ನಡ ಹಬ್ಬ’

ಹರಪನಹಳ್ಳಿ : ಪಟ್ಟಣದ ಹಿರೇಮೇಗಳಗೆರೆ ಪಾಟೀಲ್ ಸಿದ್ದನಗೌಡ ಪದವಿ ಮಹಾ ವಿದ್ಯಾಲಯದಲ್ಲಿ ನಾಡಿದ್ದು ದಿನಾಂಕ 20ರ ಬುಧವಾರ ಬೆಳಿಗ್ಗೆ 10.30ಕ್ಕೆ ಕ್ರೀಡಾ ಚಟುವಟಿಕೆ ಮತ್ತು ಕನ್ನಡಹಬ್ಬ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ನಾಳೆ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಸಮಿತಿ ಸಭೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ನಾಡಿದ್ದು ದಿನಾಂಕ 20 ರ ಬುಧವಾರ ಬೆಳಿಗ್ಗೆ 10.30 ಕ್ಕೆ ನಗರದ ಎಪಿಎಂಸಿ ಭವನದಲ್ಲಿ ರಾಜ್ಯ ಸಮಿತಿ ಸಭೆ ಹಮ್ಮಿಕೊಳ್ಳಲಾಗಿದೆ

ನಗರದಲ್ಲಿ ಇಂದು

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್ಎಸ್ ಸ್ಕೌಟ್ ಅಂಡ್ ಗೈಡ್ಸ್‌ನ ವಿವಿಧ ವೇದಿಕೆ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಲಿದೆ.

ನಗರಕ್ಕೆ ಇಂದು ಪಾರಂಪರಿಕ ವೈದ್ಯ ಮಹದೇವಯ್ಯ

ನಿಟುವಳ್ಳಿಯ ಹೆಚ್.ಕೆ.ಆರ್. ಸರ್ಕಲ್ ಹತ್ತಿರದ ಪತಂಜಲಿ ವೆಲ್ನೆಸ್‌ ಸೆಂಟರ್‌ಗೆ ಇಂದು ಮಧ್ಯಾಹ್ನ  1 ಗಂಟೆಗೆ ಕುದೂರಿನ ಮೂಳೆ ತಜ್ಞರೂ, ಪಾರಂಪರಿಕ ವೈದ್ಯರೂ ಆದ ಮಹದೇವಯ್ಯ ಅವರು ಭೇಟಿ ನೀಡಲಿದ್ದಾರೆ. 

ಉಳುಪಿನಕಟ್ಟೆಯಲ್ಲಿ ಇಂದು – ನಾಳೆ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ

ದಾವಣಗೆರೆ ಉತ್ತರ-ದಕ್ಷಿಣ ಹಾಗೂ ಹರಿಹರ ತಾಲ್ಲೂಕುಗಳ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಆನಗೋಡು ಹೋಬಳಿಯ ಉಳುಪಿನಕಟ್ಟೆಯಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇಂದು ಮತ್ತು ನಾಳೆ ಪ್ರಾಯೋಗಿಕ ಕಾರ್ಯಾಗಾರ ನಡೆಯಲಿದೆ

error: Content is protected !!