Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಭಾರತ ವಿಕಾಸ ಪರಿಷದ್‌ನಿಂದ ಶಾಲೆಗೆ ಸ್ಮಾರ್ಟ್‌ ಟಿವಿ ವಿತರಣೆ

ಹಳ್ಳಿ ಮಹಾದೇವಪ್ಪ ಶಾಲೆಯಲ್ಲಿ ಇಂದು ಬೆಳಿಗ್ಗೆ 10 ಕ್ಕೆ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ವಿಕಾಸ ಪರಿಷದ್‌ ಗೌತಮಿ ಶಾಖೆ ದಾವಣಗೆರೆ ಯಿಂದ ಶಾಲೆಗೆ ಸ್ಮಾರ್ಟ್‌ ಟಿ.ವಿ. ವಿತರಿಸಲಾಗುವುದು.

ಶ್ರೀ ಕ್ಷೇತ್ರ ಕಡಲಬಾಳು ಗ್ರಾಮದಲ್ಲಿ ಇಂದು ಧಾತ್ರೀ ಹವನ

ಕಡಲಬಾಳು ಗ್ರಾಮದ ಶ್ರೀ ಮಧ್ವಾಂಜನೇಯ ಸ್ವಾಮಿಗೆ ನಿತ್ಯ ನೈವೇದ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ನೈವೇದ್ಯ ಸೇವಾದ ಹದಿನಾರನೇ ವಾರ್ಷಿಕೋತ್ಸವದ ನಿಮಿತ್ತ ಇಂದು ಧಾತ್ರೀ ಹವನ ಮಹೋತ್ಸವ ನಡೆಯಲಿದೆ. 

ನಗರದಲ್ಲಿ ಇಂದು ಶ್ರೀ ಸತ್ಯಸಾಯಿ ಬಾಬಾರ ಜನ್ಮ ದಿನೋತ್ಸವ

ಈಶ್ವರಮ್ಮ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಬಾಬಾರವರ 99ನೇ ಜನ್ಮದಿನೋತ್ಸವದ ಅಂಗ ವಾಗಿ ಇಂದು ಬೆಳಿಗ್ಗೆ 9ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಭಜನೆ, ಸ್ವಾಮಿಯ ದಿವ್ಯ ಸಂದೇಶಗಳು, ಮಹಾ ಮಂಗಳಾರತಿ, ಪ್ರಸಾದ ವಿತರಣೆೆ ಕಾರ್ಯಕ್ರಮ ಜರುಗಲಿವೆ.

ನಗರದಲ್ಲಿ ಇಂದು, ನಾಳೆ `ಸತ್ಯವನ್ನೇ ಹೇಳುತ್ತೇನೆ’

ಭಾರತ ವಿಕಾಸ ಪರಿಷದ್, ಸ್ವಾಮಿ ವಿವೇಕಾನಂದ ಶಾಖೆ ಮತ್ತು ರಂಗಭೂಮಿ ಟ್ರಸ್ಟ್ ಕೊಡಗು ಸಹಯೋಗದಲ್ಲಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿದ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನ ನಗರದ ಚಿಂದೋಡಿ ಲೀಲ್ ರಂಗ ಮಂದಿರದಲ್ಲಿ ನಡೆಯಲಿದೆ.

ತುಳಜಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಇಲ್ಲಿನ ಕೆಟಿಜೆ ನಗರ 3ನೇ ಮುಖ್ಯರಸ್ತೆ, 11 ಮತ್ತು 12ನೇ ಕ್ರಾಸ್‌ನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಶ್ರೀ ತುಳಜಾ ಭವಾನಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು  ಬರುವ ಡಿಸೆಂಬರ್ 20ರ ಶುಕ್ರವಾರ ಸಂಜೆ 7.15ಕ್ಕೆ ನಡೆಯಲಿದೆ.

ನಗರದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ನಗರದ ಎ.ಪಿ.ಎಂ.ಸಿ. `ಡಿ’ ಬ್ಲಾಕ್‌ನ ಅಮರೇಶ್ವರ ದಲ್ಲಾಳಿ ಮಂಡಿ ಹತ್ತಿರದಲ್ಲಿ ಸುಮಾರು 50 ವರ್ಷ ವಯಸ್ಸಿನ ಅಪರಿಚಿರ ಮಹಿಳೆಯ ಶವ ಇದೇ ದಿನಾಂಕ 18ರ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

ಹರಪನಹಳ್ಳಿಯಲ್ಲಿ 27ಕ್ಕೆ ಸಂಸ್ಕೃತಿ ಉತ್ಸವ

 ಹರಪನಹಳ್ಳಿ : ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಸೇಡಂ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯಿಂದ 7ನೇ ಭಾರತೀಯ ಸಂಸ್ಕೃತಿ ಉತ್ಸವವು ಇದೇ ದಿನಾಂಕ 27ರ ಬುಧವಾರ ನಡೆಯಲಿದೆ.

ಕದಳಿ ಮಹಿಳಾ ವೇದಿಕೆಯಿಂದ ಪ್ರಬಂಧ ಸ್ಪರ್ಧೆ : ಸದಸ್ಯರಿಂದ ಆಹ್ವಾನ

ಕದಳಿ ಮಹಿಳಾ ವೇದಿಕೆಯ ವಾರ್ಷಿಕೋತ್ಸ ವದ ಪ್ರಯುಕ್ತ, ದಾವಣಗೆರೆ ಜಿಲ್ಲೆಯ ಸಾರ್ವಜನಿಕ ಮಹಿಳೆಯರಿಗೆ ಹಾಗೂ ನಮ್ಮ ಕದಳಿ ಮಹಿಳಾ ವೇದಿಕೆಯ ಸದಸ್ಯ ರಿಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ 

ವಕ್ಫ್‌ ಸಮಸ್ಯೆ ಪರಿಹಾರಕ್ಕಾಗಿ ಇಂದು ‘ನಮ್ಮ ಭೂಮಿ-ನಮ್ಮ ಹಕ್ಕು’ ಆಂದೋಲನ

ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ  ನಾಳೆ ದಿನಾಂಕ 22ರ ಶುಕ್ರವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ನಮ್ಮ ಭೂಮಿ- ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ

ಸ್ನಾತ ಕೋತ್ತರ ಪದವಿ ಹಾಗೂ ಪಿಹೆಚ್‍ಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ  ಪ್ರಸಕ್ತ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‍ಡಿ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

error: Content is protected !!