Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಹಗರಿಗಜಾಪುರದಲ್ಲಿ ಇಂದು ಪ್ರವಚನ

ಲಿಂಗೈಕ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಇಂದಿನಿಂದ ಇದೇ ದಿನಾಂಕ 30ರವರೆಗೆ  ಹಗರಿ ಗಜಾಪುರದ ವರಗಳ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ಪ್ರತಿದಿನ ಸಂಜೆ 6.30ಕ್ಕೆ ಜರುಗಲಿದೆ.

ಹನಗವಾಡಿಯಲ್ಲಿ ಇಂದು ನಾಟಕ ಪ್ರದರ್ಶನ, ಸಾಣೇಹಳ್ಳಿ ಶ್ರೀ ಭಾಗಿ

ಮಾನವ ಬಂಧುತ್ವ ವೇದಿಕೆ ಹಾಗೂ ಶ್ರೀ ಜಯಲಕ್ಷ್ಮಿ ನಾಟಕ ಸಂಘ (ದಾವಣಗೆರೆ) ಇವರ ಸಹಯೋಗದಲ್ಲಿ ಯಲ್ಲೇಶ್ ಯಾಳಗಿ ವಿರಚಿತ `ಮಗ ಹೋದರೂ ಮಾಂಗಲ್ಯ ಬೇಕು’ (ಹೆತ್ತವಳ ಹಾಲು ವಿಷವಾಯ್ತು) ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಪರೀಕ್ಷೆ : ವಿದ್ಯಾರ್ಥಿಗಳಿಗೆ ಹೂವು ನೀಡಿ ಶುಭ ಹಾರೈಕೆ

ಮಲೇಬೆನ್ನೂರು : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 7 ಪ್ರೌಢಶಾಲೆಗಳ ಎಲ್ಲಾ 264 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

25 ರಂದು ಉದ್ಯೋಗ ಮೇಳ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ಇದೇ ದಿನಾಂಕ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-51ರಲ್ಲಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ `ಉದ್ಯೋಗ ಮೇಳ’ ನಡೆಯಲಿದೆ.

ಬಾ ಗುರು ಚಾನಲ್‌ ಕಡೆ …

ಬೇಸಿಗೆ ತಾಪ ತಣಿಸಿಕೊಳ್ಳಲು ಯುವಕರು ಚಾನಲ್‌ ಕಡೆ ತೆರಳುತ್ತಿದ್ದಾರೆ.  ಶಿರಮಗೊಂಡನಹಳ್ಳಿ ಬಳಿಯ ಚಾನಲ್‌ನಲ್ಲಿ  ಹುಡುಗರು ಧುಮುಕುತ್ತಿರುವ ಚಿತ್ರವಿದು. 

ನಗರದಲ್ಲಿ ಇಂದು ತಾ.ಕಸಾಪ ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 11.30 ಗಂಟೆಗೆ  ನಡೆಯಲಿದೆ. 

ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಕಳ್ಳನ ಬಂಧಿಸಿದ ಪೊಲೀಸರು

ಹೊನ್ನಾಳಿ : ಹೊನ್ನಾಳಿಯಲ್ಲಿ ಮನೆಯೊಂದನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಬಂಧಿಸಿದ ಪೊಲೀಸರು, 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

ಮಲೇಬೆನ್ನೂರಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 260 ವಿದ್ಯಾರ್ಥಿಗಳು

ಮಲೇಬೆನ್ನೂರು : ನಾಳೆ ಶುಕ್ರವಾರದಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಿದ್ದು, 7 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ನಗರದಲ್ಲಿ ನಾಡಿದ್ದು ಸಿದ್ಧ ಕಣ್ಣಿನ ಹನಿ

ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ಇದೇ ದಿನಾಂಕ 23 ರ ಭಾನುವಾರ  ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿಯಾಲ – ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ. 

ಅತ್ಯಾಚಾರ ಪ್ರಕರಣ : ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ, 35 ಸಾವಿರ ರೂ ದಂಡ

ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಬಲಾತ್ಕಾರ ಮಾಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದೆ.

ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ರಾಜನಹಳ್ಳಿ ಕಲಾ ಭೀಮಾನಂದ್ ಮತ್ತು ಮಕ್ಕಳು, ದಾವಣಗೆರೆ ಇವರು ಇಂದಿನ ದಾನಿಗಳಗಿದ್ದಾರೆ.

ನಗರದಲ್ಲಿ ಇಂದು ಶಾಲಾ – ಕಾಲೇಜು ಅಂಗಳದಲ್ಲಿ ತಾ.ಕಸಾಪ ಉಪನ್ಯಾಸ

ದಾವಣಗೆರೆ  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳ ದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪ ನ್ಯಾಸ ಕಾರ್ಯಕ್ರಮವು ಎಂ.ಎಂ. ಶಿಕ್ಷಣ ಮಹಾವಿ ದ್ಯಾಲಯದಲ್ಲಿ  ಇಂದು ಮಧ್ಯಾಹ್ನ 2.30 ಗಂಟೆಗೆ  ನಡೆಯಲಿದೆ. 

error: Content is protected !!