Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಹಟ್ಟಿ : ಸಿಲಿಂಡರ್ ಸ್ಫೋಟ

ಚನ್ನಗಿರಿ : ಹಟ್ಟಿ ಗ್ರಾಮದ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಶಾಸಕ ಬಸವರಾಜು ವಿ. ಶಿಗಂಗಾ ಅವರು ಭೇಟಿ ನೀಡಿ, ಸಂತ್ರಸ್ತ ಹಬೀಬ್ ಮತ್ತು ಆಯಾಬ್ ಖಾನ್ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 10 ಸಾವಿರ ರೂ. ನೀಡುವ ಮೂಲಕ ಆತ್ಮಸ್ಥೈರ್ಯ ತುಂಬಿದರು.

ಇಂದು ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್‌ ಹೈಟೆಕ್‌ನಲ್ಲಿ ವಾಣಿಜ್ಯೋತ್ಸವ

ದಾವಣಗೆರೆ ಎಸ್‌.ಎಸ್‌. ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಬಾಪೂಜಿ ಬಿ-ಸ್ಕೂಲ್ಸ್‌ ಆಡಿಟೋರಿಯಂ ನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಮಟ್ಟದ ವಾಣಿಜ್ಯ ಎಕ್ಸಿಬಿಷನ್‌ `6ನೇ ವಾಣಿಜ್ಯೋತ್ಸವ-2024′ ಏರ್ಪಡಿಸಲಾಗಿದೆ.

ನಗರದಲ್ಲಿ ಇಂದು ಶರಣ ಸಾಹಿತ್ಯ ಪರಿಷತ್ತಿನಿಂದ ಉಪನ್ಯಾಸ

ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕ ಮತ್ತು ಶ್ರೀ ಧರ್ಮಪ್ರಕಾಶ ಜಾಲಿಮರದ ವಿರೂಪಾಕ್ಷಪ್ಪ ಸರ್ಕಾರಿ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಶ್ರೀಮತಿ ಕಾವೇರಮ್ಮ ಶಾಲೆ ಆವರಣ ದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಕ್ಕಳನ್ನು ಪಡೆಯಲು ಅರ್ಜಿ ಆಹ್ವಾನ

ವಂಚನೆಗೆ ಒಳಗಾದ 6 ರಿಂದ 18 ವರ್ಷದ ಒಳಗಿನ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ತಾತ್ಕಾಲಿಕವಾದ, ಶಾಶ್ವತವಾದ ಪರ್ಯಾಯ ಕೌಟುಂಬಿಕ ವ್ಯವಸ್ಥೆಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢವಾಗಿರುವ ಕುಟುಂಬದ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೀದಿಬದಿ ವ್ಯಾಪಾರಸ್ಥರ ಅಭಿವೃದ್ಧಿಗೆ ಪಿಎಂ ನಿಧಿ ಯೋಜನೆಯ ಪಖ್ವಾಡ ಶಿಬಿರ

ನವೆಂಬರ್ 18 ರಿಂದ ಡಿಸೆಂಬರ್ 2ರವರೆಗೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಖ್ವಾಡ ಶಿಬಿರಗಳನ್ನು ವಿವಿಧ ಬ್ಯಾಂಕುಗಳ  ಶಾಖೆಗಳಲ್ಲಿ ಆಯೋಜಿಸಲಾಗಿದೆ.

ನಾಳೆ ವಿಶ್ವ ವಿಕಲಚೇತನರ ದಿನಾಚರಣೆ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 3ರ ಮಂಗಳವಾರ ಬೆಳಗ್ಗೆ 11ಕ್ಕೆ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

ಕೊಲೆ : ಅಪರಾಧಿಗೆ 6 ವರ್ಷ ಶಿಕ್ಷೆ

ಕೆಲಸದ ವಿಚಾರಕ್ಕೆ ಜೊತೆಗಾರನನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಏಡ್ಸ್ ಜಾಗೃತಿಗೆ ನಗರದಲ್ಲಿ ವಾಕಥಾನ್

ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜೆ.ಜೆ.ಎಂ ಮೆಡಿಕಲ್‌ ಕಾಲೇಜ್ ಮತ್ತು ಎಸ್‌.ಎಸ್‌.ಐ.ಎಂ.ಎಸ್‌ನ ಚರ್ಮರೋಗ ತಜ್ಞರು ಏಡ್ಸ್ ಕುರಿತು ಜಾಗೃತಿ ಮೂಡಿಸಲು ವಾಕಥಾನ್‌ ಆಯೋಜಿಸಿದ್ದರು. 

ಹರಿಹರದಲ್ಲಿ ಇಂದು ರಾಜ್ಯೋತ್ಸವ

ಹರಿಹರ : ನಗರದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ದ ವತಿಯಿಂದ ನಾಳೆ ದಿನಾಂಕ 30 ರ ಶನಿವಾರ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಆಟೋ ಮೆರವಣಿಗೆ, ಸಾಧಕರಿಗೆ ಸನ್ಮಾನ, ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ

ರಮಾನಂದ್ ನಿಧನಕ್ಕೆ ಕರಿಬಸಮ್ಮ ಶೋಕ

ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷರೂ ಆಗಿರುವ ದಾನಿ ಆರ್.ಎಲ್.ರಮಾನಂದ್ ಅವರ ನಿಧನಕ್ಕೆ ದಯಾಮರಣ ಹೋರಾಟಗಾರ್ತಿ – ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್.ಡಿ. ಕರಿಬಸಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ಜಾಗೃತಿ ಕಾರ್ಯಾಗಾರ

ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಆರ್ ಮತ್ತು ಡಿ ಬ್ಲಾಕ್‌ನಲ್ಲಿ `ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ’ ವಿಷಯ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಇಂದು ಕನ್ನಡ ರಾಜ್ಯೋತ್ಸವ

ಎಸ್.ನಿಜಲಿಂಗಪ್ಪ ಬಡಾವಣೆ ಕ್ಷೇಮಾಭಿವೃದ್ಧಿ ಸಮಿತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು  ಸರ್ಕಾರಿ ನೌಕರರ ಭವನದಲ್ಲಿ ಇಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ.

error: Content is protected !!