Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಚನ್ನಗಿರಿ : ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿರುವ 100 ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ  ಮಾಸಿಕ 25 ಸಾವಿರ ರೂ.ಗಳಂತೆ ಶಿಷ್ಯವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅನುಕಂಪದ ಹುದ್ದೆಗಳಿಗೆ ಆನ್‌ಲೈನ್ ತಂತ್ರಾಂಶ

ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್  ತಂತ್ರಾಂಶದ ಮುಖಾಂತರ ಇಇಡಿಎಸ್‍ನಲ್ಲಿ  ನಿರ್ವಹಿಸುವ ವ್ಯವಸ್ಥೆಯನ್ನು  ಇಲಾಖಾ ವೆಬ್‍ಸೈಟ್ schooleducation.karnataka.gov.in ನಲ್ಲಿ  ಅಳವಡಿಸಲಾಗಿದೆ.

ಸ್ನಾತ ಕೋತ್ತರ ಪದವಿ ಹಾಗೂ ಪಿಹೆಚ್‍ಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ  ಪ್ರಸಕ್ತ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯ ಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‍ಡಿ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ. ದೇವರಾಜು ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಪರಿಚಿತ ಮಹಿಳೆಯ ಶವ ಪತ್ತೆ

ನಗರದ ವೆಂಕಟೇಶ್ವರ ವೃತ್ತದ ಬಳಿ ದಿನಾಂಕ 28 ರಂದು ಮಧ್ಯಾಹ್ನ ಯಾವುದೋ ಕಾರಣದಿಂದ ಮೃತಪಟ್ಟ ಸುಮಾರು 65 ರಿಂದ 70 ವರ್ಷವಿರುವ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಜಿಗಳಿಯಲ್ಲಿ ಇಂದು ಗ್ರಾಮಸಭೆ

ಜಿಗಳಿ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ಗ್ರಾಮ ಸಭೆಯನ್ನು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ರೂಪ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಓ ಉಮೇಶ್ ತಿಳಿಸಿದ್ದಾರೆ.

300 ರೈತರಿಗೆ ಭೂಮಿ ಪ್ರಶಸ್ತಿ

ಭೂಮಿ ಡಿಜಿಟಲ್ ಪ್ಲಾಟ್‌ಫಾರ್ಮ್‌ವತಿಯಿಂದ ರೈತರಿಗೆ `ಭೂಮಿ’ ಪ್ರಶಸ್ತಿ ನೀಡಲಾಗುತ್ತಿದ್ದು ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು ಎಂದು ವೇದಿಕೆಯ ಸಂಸ್ಥಾಪಕ ಕಾರ್ಯನಿರ್ವಹ ಣಾಧಿಕಾರಿ ರಘುನಂದನ್ ತಿಳಿಸಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಕಾರ್ತಿಕ

ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಸಂಜೆ 5 ಗಂಟೆಗೆ ಕಾರ್ತಿಕೋತ್ಸವ ನಡೆಯಲಿದೆ. ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿ ಗಳು ಹಾಗೂ ಡಾ. ಕಲ್ಲಯ್ಯಜ್ಜನವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. 

ನಗರದಲ್ಲಿ ಇಂದು ಪದ್ಮಶಾಲಿ ಸಮಾಜದ ಸಭೆ

ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯನ್ನು ಇಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಹಂಗಾಮಿ ಅಧ್ಯಕ್ಷ ಪೆದ್ದಿಪದ್ದಿ ಕಿರಣ್ ತಿಳಿಸಿದ್ದಾರೆ.

ನಗರಕ್ಕೆ ಇಂದು ಮೂಳೆ ವೈದ್ಯರ ಭೇಟಿ

ರಾಮನಗರ ಜಿಲ್ಲೆಯ ಕುದೂರಿನ ಪಾರಂಪರಿಕ ಮೂಳೆ ವೈದ್ಯ ಮಹದೇವಯ್ಯ ಅವರು  ನಿಟು ವಳ್ಳಿಯ ಪತಂಜಲಿ ವೆಲ್‌ನೆಸ್ ಸೆಂಟರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಚಿಕಿತ್ಸೆ ನೀಡಲಿದ್ದಾರೆ.

15ರಂದು ಕೃಷಿಕ ಸಮಾಜದ ಚುನಾವಣೆ

ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೃಷಿಕ ಸಮಾ ಜದ ಚುನಾವಣೆಯು ದಿನಾಂಕ 15 ರಂದು ನಡೆಯಲಿದೆ. ಚುನಾವಣಾ ಪ್ರಕ್ರಿಯೆಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ ಹಾಗೂ ರೈತ ಸಂಪರ್ಕ ಕೇಂದ್ರ ನ್ಯಾಮತಿ ಈ ಸ್ಥಳಗಳಲ್ಲಿ ನಿಗದಿಪಡಿಸಲಾಗಿದೆ.

ಚಿತ್ರದುರ್ಗದಲ್ಲಿ ಅಯ್ಯಪ್ಪ ಸ್ವಾಮಿ ಬ್ರಹ್ಮೋತ್ಸವ

ಚಿತ್ರದುರ್ಗ : ಮೆದೆಹಳ್ಳಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ಆರಂಭಗೊಂಡಿದ್ದು, ಬರುವ ಜನವರಿ 13ರವರೆಗೆ ನಡೆಯಲಿದೆ. ಮಾಲಾಧಾರಿ ಗಳಿಗೆ ದೇವಸ್ಥಾನದಲ್ಲಿ ಪ್ರತಿನಿತ್ಯ ಉಚಿತ ಅನ್ನದಾನ ಕಾರ್ಯಕ್ರಮ ಜರುಗಲಿದೆ.    

error: Content is protected !!