Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಹೊನ್ನಾಳಿ : 2 ಕ್ವಿಂಟಾಲ್ ಅಡಿಕೆ ಕಳವು

ಹೊನ್ನಾಳಿ : ತಾಲ್ಲೂಕಿನ ಲಿಂಗಾಪುರ ಗ್ರಾಮದ ಹನುಮಂತಪ್ಪ ಎನ್ನುವವರ ಕಣದಲ್ಲಿದ್ದ 2 ಕ್ವಿಂಟಾಲ್ ಅಡಿಕೆ ಕಳವು ನಡೆದಿರುವ ಘಟನೆಯ ಕುರಿತು ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಸಮುದಾಯ ಕೃಷಿ ಹೊಂಡ, ಕೃಷಿ ಹೊಂಡ, ಪ್ಯಾಕ್‍ಹೌಸ್, ಟ್ರ್ಯಾಕ್ಟರ್ 20 ಪಿಟಿಒ ಎಚ್‍ಪಿ ಒಳಗಿನ ಪ್ರಾಥಮಿಕ ಸಂಸ್ಕರಣಾ ಘಟಕ ಮತ್ತು ಎಸ್.ಎಂ.ಎ.ಎಂ. ಯೋಜನೆಯಡಿಯಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಹಾಗೆ ಫೈಬರ್ ದೋಟಿ (ಅಡಿಕೆ ಕಟಾವು ಮಾಡಲು) ಪಡೆಯಲು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಹಿಳಾ ಸಮಾಜ ಪ್ರೌಢಶಾಲೆ ಪ್ರಥಮ

ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಯಲ್ಲಿ ಮಹಿಳಾ ಸೇವಾ ಸಮಾಜದ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ. ದಿವ್ಯ ಮತ್ತು ಎಸ್. ಪ್ರಾರ್ಥನಾ ಪ್ರಥಮ ಸ್ಥಾನ ಪಡೆದಿದ್ದಾರೆ.

ನಗರಕ್ಕೆ ನಾಡಿದ್ದು ಮೂಳೆ ವೈದ್ಯರ ಭೇಟಿ

ರಾಮನಗರ ಜಿಲ್ಲೆಯ ಕುದೂರಿನ ಪಾರಂಪರಿಕ ಮೂಳೆಯ ವೈದ್ಯ ಮಹದೇವಯ್ಯ ಅವರು ನಾಡಿದ್ದು ದಿನಾಂಕ 3ರಂದು ನಗರಕ್ಕೆ ಆಗಮಿಸಲಿದ್ದು, ನಿಟುವಳ್ಳಿಯಲ್ಲಿರುವ ಪತಂಜಲಿ ವೆಲ್‌ನೆಸ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಿದ್ದಾರೆ

ಎನ್.ಜಯದೇವನಾಯ್ಕ ನೇಮಕ ಕಾಂಗ್ರೆಸ್ ಕಾನೂನು ಘಟಕದ ಹರ್ಷ

ಹಿರಿಯ ವಕೀಲ ಎನ್. ಜಯದೇವನಾಯ್ಕ ಅವರನ್ನು ರಾಜ್ಯ ಸರ್ಕಾರವು ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕ ಹರ್ಷ ವ್ಯಕ್ತಪಡಿಸಿದೆ

ನಗರದಲ್ಲಿ ಪಿಜಿ ಸಿಇಟಿ ಕೋಚಿಂಗ್

ಬಾಪೂಜಿ ಎಂಬಿಎ ಕಾಲೇಜ್ ಲೇಕ್ ವ್ಯೂ ಕ್ಯಾಂಪಸ್‌ನಲ್ಲಿ ಪಿಜಿ ಸಿಇಟಿ 2024-25 ಸಾಲಿನ ಎಂಬಿಎ ಕೋರ್ಸ್ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 5 ದಿನದ ತರಬೇತಿಯನ್ನು ಬರುವ ಜುಲೈ 1 ರಿಂದ ಜುಲೈ 5 ರವರೆಗೆ ಹಮ್ಮಿಕೊಳ್ಳಲಾಗಿದೆ. 

ಹೊಳೆಸಿರಿಗೆರೆಯಲ್ಲಿ ಇಂದು ಸ್ಮೃತಿ ದಿನ

ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಇಂದು ಬೆಳಿಗ್ಗೆ 10.30ಕ್ಕೆ ರಾಜಯೋಗಿನಿ ಬ್ರಹ್ಮಾಕುಮಾರಿ ಜಗದಂಬಾ ಸರಸ್ವತಿ ಮಮ್ಮನವರ ಸ್ಮೃತಿ ದಿನ ಹಾಗೂ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ಅವರ ಸ್ಮೃತಿ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಲಯನ್ಸ್ ಅಧ್ಯಕ್ಷರಾಗಿ ಉಳುವಯ್ಯ

ನಗರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೈಗಾರಿಕೋದ್ಯಮಿ ಎಸ್.ಜಿ .ಉಳುವಯ್ಯ ಆಯ್ಕೆಯಾಗಿದ್ದು, ನಾಡಿದ್ದು ದಿನಾಂಕ 1ರ ಸೋಮವಾರ ಸಂಜೆ 5.30ಕ್ಕೆ ಲಯನ್ಸ್ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮ ದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನಗರದಲ್ಲಿ ಇಂದು `ನಾಗಮ್ಮ’ ಆಂಟಿ ಒಂದು ನೆನಪು

ವನಿತಾ ಸಮಾಜ ಮತ್ತು ಈಶ್ವರಮ್ಮ ಟ್ರಸ್ಟ್‌ ವತಿಯಿಂದ  ವನಿತಾ ಸಮಾಜದ ಸತ್ಯಸಾಯಿ ರಂಗ ಮಂದಿರದಲ್ಲಿ ಇಂದು ಸಂಜೆ 5ಕ್ಕೆ `ನಾಗಮ್ಮ ಆಂಟಿ- ಒಂದು ನೆನಪು’ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಚುನಾವಣೆ ಸುಧೀಂದ್ರರಾವ್ ತಂಡಕ್ಕೆ ಭರ್ಜರಿ ಬಹುಮತ

ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಹಿರಿಯ ತೆರಿಗೆ ಸಲಹೆಗಾರ ಹೆಚ್.ಟಿ. ಸುಧೀಂದ್ರರಾವ್ ಅವರ ನೇತೃತ್ವದ ತಂಡಕ್ಕೆ ಭರ್ಜರಿ ಬಹುಮತ ಲಭಿಸಿದೆ.

ಯಲವಟ್ಟಿ : ಇಂದು ಜನಸ್ಪಂದನ ಸಭೆ

ಮಲೇಬೆನ್ನೂರು ಸಮೀಪದ ಯಲವಟ್ಟಿ ಗ್ರಾಮದ ಶ್ರೀಗುರು ಸಿದ್ಧಾಶ್ರಮದ ಆವರಣದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಹರಿಹರ ತಾ. ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಮತ್ತು ತಹಶೀಲ್ದಾರ್ ಗುರುಬಸವರಾಜ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಹಾವೇರಿ ಬಳಿ ಅಪಘಾತ: 13 ಮಂದಿ ಸಾವು

ಹಾವೇರಿ : ಸಮೀಪದ ಗುಂಡನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ 4 ಗಂಟೆ ಸುಮಾರಿನಲ್ಲಿ ನಡೆದ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

error: Content is protected !!