Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ನಾಳೆ ದೇಹದಾರ್ಢ್ಯ ಸ್ಪರ್ಧೆ

ರಾಜ್ಯ ಮಟ್ಟದ ದೇಹದಾರ್ಢ್ಯ `ಕರ್ನಾಟಕ ಸಿರಿ-2024′ ಹಾಗೂ `ಸರ್ಕಾರ್ ಮೆನ್ಸ್ ಫಿಸಿಕ್ ಐಕಾನ್ ಚಾಂಪಿಯನ್‌ಶಿಪ್’ ಪಂದ್ಯಾವಳಿಯನ್ನು  ನಾಡಿದ್ದು ದಿನಾಂಕ 7ರ ಶನಿವಾರ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ದೇಹದಾರ್ಢ್ಯ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಏಕಬೋಟೆ ತಿಳಿಸಿದರು.

ಆಯವ್ಯಯ : ಪಾಲಿಕೆಯಲ್ಲಿ ನಾಳೆ ಸಭೆ

ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 7ರ ಶನಿವಾರ ಬೆಳಿಗ್ಗೆ 11ಕ್ಕೆ ಪಾಲಿಕೆಯ 2025-26ನೇ ಆಯವ್ಯಯ ಪಟ್ಟಿ ತಯಾರಿಸಲು ಸಲಹೆ ಪಡೆಯಲು ಮೊದಲನೇ ಸಭೆ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.

ಹೆಜ್ಜೇನು ದಾಳಿಗೆ ತುತ್ತಾಗಿ ವ್ಯಕ್ತಿ ಸಾವು

ತ್ಯಾವಣಿಗೆ : ಹೆಜ್ಜೇನು ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸಮೀಪದ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಕೆ.ನಾಗೇಂದ್ರಪ್ಪ (66) ಮೃತರು. ದೊಡ್ಡಘಟ್ಟ ಗ್ರಾಮದ ಸಮೀಪ ಇರುವ ತೋಟಕ್ಕೆ ತೆರಳಿದ್ದಾಗ ಜೇನು ನೊಣಗಳು ಕಡಿದಿವೆ.

ನಗರದಲ್ಲಿ ನಾಳೆ ನೇರ ಸಂದರ್ಶನ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರದ ವತಿಯಿಂದ ನಾಡಿದ್ದು ದಿನಾಂಕ 7 ರ ಶನಿವಾರ ಬೆಳಗ್ಗೆ 10 ಗಂಟೆಗೆ ವಾಕ್‍ಇನ್ ಇಂಟರ್‍ವ್ಹೀವ್ ಅನ್ನು ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಹರಪನಹಳ್ಳಿಯಲ್ಲಿ ಇಂದು ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿಯು ಇಂದು ಮತ್ತು ನಾಳೆ ಜರುಗಲಿವೆ ಎಂದು  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸತೀಶ   ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಹೆಚ್. ಕೊಟ್ರೇಶ ತಿಳಿಸಿದ್ದಾರೆ.

ನಗರದಲ್ಲಿ ಇಂದು ವಿದ್ಯಾರ್ಥಿಗಳಿಗೆ ಥೀಮ್ ಪಾರ್ಕ್ ಉಚಿತ ವೀಕ್ಷಣೆ

ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರ ವೀಕ್ಷಣೆಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಇಂದು ಉಚಿತ ಪ್ರವೇಶ ಅವಕಾಶ ನೀಡಲಾಗಿದೆ.

ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರಿಗೆ ಕಲಾ ಪ್ರಕಾರಗಳ ಜಾನಪದ ತರಬೇತಿ ಶಿಬಿರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಾಡಿದ್ದು ನಗರದಿಂದ ಹರಿಹರಕ್ಕೆ ಕಾಲ್ನಡಿಗೆ

ಕುಂದುವಾಡ ಕೆರೆ ವಾಯು ವಿಹಾರ ಬಳಗ ದಿಂದ ನಗರದ ಬಿಎಸ್‌ಎನ್‌ಎಲ್‌ ಸರ್ಕಲ್‌ನಿಂದ ಹರಿಹರದ ಹರಿಹರೇ ಶ್ವರ ದೇವಸ್ಥಾನದ ಆವರಣದವರೆಗೆ ಕಾಲ್ನಡಿಗೆಯನ್ನು ಇದೇ ದಿನಾಂಕ  8 ರ ಭಾನುವಾರ ಬೆಳಿಗ್ಗೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ

ಮುರುಗಯ್ಯ ನಿಧನಕ್ಕೆ ಕಸಾಪ ಸಂತಾಪ

ನಗರದ ಬಿ.ಎಂ. ಮುರುಗಯ್ಯ ಕುರ್ಕಿ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

11 ರಂದು ಜಗಳೂರು ತಾ.ಪಂ.ನಲ್ಲಿ ಲೋಕಾಯುಕ್ತ ಎಸ್ಪಿ ಅಹವಾಲು ಸ್ವೀಕಾರ

ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್ ಕೌಲಾಪೂರೆ ಅವರು ಜಗಳೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇದೇ ದಿನಾಂಕ 11 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.

ನಗರದಲ್ಲಿ ಇಂದು ಅಂಬೇಡ್ಕರ್ 68ನೇ ಪರಿನಿರ್ವಾಣ ದಿನಾಚರಣೆ

68ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು  ಇಂದು ಆಚರಿಸಲಾಗುತ್ತಿದ್ದು, ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮತ್ತು ಬೆಳಿಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ  ಗಣ್ಯರಿಂದ ಮಾಲಾರ್ಪಣೆ ಮಾಡಲಾಗುತ್ತದೆ

ನಗರದಲ್ಲಿ ಇಂದು – ನಾಳೆ `ಇಗ್ನಿಟ್ರಾನ್ 2k 24′ ಕಾರ್ಯಕ್ರಮ

ತಾಂತ್ರಿಕ ಸಮುದಾಯ ವಿಭಾಗದ ವತಿಯಿಂದ ನಾಳೆ ದಿನಾಂಕ 6ರ ಶುಕ್ರವಾರ, ನಾಡಿದ್ದು ದಿನಾಂಕ 7 ರ ಶನಿವಾರ ಎರಡು ದಿನಗಳ ಕಾಲ ತಾಂತ್ರಿಕತೆಯ ಕಲಿಕಾ, ಪ್ರತಿಭಾ ಕೌಶಲ್ಯದ ಹಬ್ಬವಾಗಿರುವ ಇಗ್ನಿಟ್ರಾನ್ 2k 24 ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ

error: Content is protected !!