Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಒಳಮೀಸಲಾತಿ : ನಗರದಲ್ಲಿ ಇಂದು ಮಾದಿಗ ಜನಾಂಗದ ಸಭೆ

ಒಳಮೀಸಲಾತಿ ಕುರಿತು ಮಾದಿಗ ಜನಾಂಗದ ಪ್ರಮುಖರ ಮತ್ತು ಮಾದಿಗ ಸಂಬಂಧಿತ ಸಂಘಟನೆಗಳ ಮುಖಂಡರ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ  ಹಳೇ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದೆ. 

ಮಲೇಬೆನ್ನೂರಿನಲ್ಲಿ ಇಂದು ಗುಮ್ಮಿ ಚೌಡೇಶ್ವರಿ ಕಾರ್ತಿಕ

ವಾಲ್ಮೀಕಿ ಬಡಾವಣೆ ಸಮೀಪದ ಶ್ರೀ ಗುಮ್ಮಿ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಇಂದು ಸಂಜೆ 7ಕ್ಕೆ ಕಾರ್ತಿಕೋತ್ಸವ ನಡೆಯಲಿದೆಂದು ಬಸವರಾಜ್‌ ದೊಡ್ಮನಿ ತಿಳಿಸಿದ್ದಾರೆ.

ಆಂಜನೇಯ ಕಾರ್ತಿಕ

ನಗರದ ಕೊಟ್ಟೂರೇಶ್ವರ ಬಡಾ ವಣೆ ಶ್ರೀ ಮಾಳೆ ಮಾರಮ್ಮ ದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 14ರ ಶನಿವಾರ ಸಂಜೆ 7 ಗಂಟೆಗೆ ಶ್ರೀ ಜಪಲಿ ವೀರ ಆಂಜನೇಯ ಸ್ವಾಮಿ ಕಾರ್ತಿಕ ನಡೆಯಲಿದೆ.

ಹರಿಹರದಲ್ಲಿ ಇಂದು ಶಿವಸಂಚಾರ ನಾಟಕ

ಬಸವ ಬಳಗ, ಸಿಟಿ ಫ್ಯಾಮಿಲಿ ಸೆಂಟರ್, ಎಪಿಎಂಸಿ ವಾಯು ವಿಹಾರ ಬಳಗದ ಸಹಯೋಗ ದೊಂದಿಗೆ  ವಿದ್ಯಾನಗರ ಆವರಣ ದಲ್ಲಿರುವ ಸಿಟಿ ಫ್ಯಾಮಿಲಿ ಸೆಂಟರ್ ಮುಂಭಾಗದ ಆವರಣದಲ್ಲಿ ಶಿವ ಸಂಚಾರ ನಾಟಕ ಮಂಡಳಿಯಿಂದ ಇಂದು ಮತ್ತು ನಾಳೆ ನಾಟಕಗಳ ಪ್ರದರ್ಶನ ನಡೆಯಲಿದೆ.

ಮಾರಮ್ಮ ಕಾರ್ತಿಕ

ನಗರದ ಕೊಟ್ಟೂರೇಶ್ವರ ಬಡಾವಣೆ ಯಲ್ಲಿರುವ ಶ್ರೀ ಮಾಳೆ ಮಾರಮ್ಮ ದೇವಿ ದೇವಸ್ಥಾನದಲ್ಲಿ ಇದೇ ನಾಂಕ 17ರ ಸಂಜೆ ಮಂಗಳವಾರ ಸಂಜೆ 7 ಗಂಟೆಗೆ ಮಳೆ ಮಾರಮ್ಮ ದೇವಿಯ ಕಾರ್ತಿಕ ನಡೆಯಲಿದೆ.

ಕಬ್ಬಿಗೆ 5500 ರೂ.ಬೆಂಬಲ ಬೆಲೆಗೆ ಆಗ್ರಹಿಸಿ ಸುವರ್ಣ ಸೌಧ ಚಲೋ

ಕಬ್ಬಿಗೆ 5500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಾಡಿದ್ದು ದಿನಾಂಕ 12 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ನಗರದ ಕಾನೂನು ಕಾಲೇಜಿನಲ್ಲಿ ಇಂದು `ಮಾನವ ಹಕ್ಕುಗಳ’ ದಿನಾಚರಣೆ

ಆರ್.ಎಲ್.ಕಾನೂನು ಕಾಲೇಜಿನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ `ಮಾನವ ಹಕ್ಕುಗಳ’ ದಿನಾಚರಣೆ   ಹಮ್ಮಿಕೊಳ್ಳಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಉದ್ಘಾಟಿಸುವರು.

ನಗರದಲ್ಲಿ ಇಂದು ಕೆಎಎಸ್ ಪರೀಕ್ಷಾ ಪೂರ್ವ ತರಬೇತಿ

ಜಿಲ್ಲಾ ಉದ್ಯೋಗ ವಿನಿ ಮಯ ಕೇಂದ್ರದ ವತಿಯಿಂದ ರಾಮನಗರದ ಗಾಂಧಿ ಭವನ, ಡಿ.ಹೆಚ್.ಓ ಕಚೇರಿ ಪಕ್ಕ ಹಾಗೂ ಎಸ್.ಓ.ಜಿ ಕಾಲೋನಿಯಲ್ಲಿ ಇಂದಿನಿಂದ ಇದೇ ದಿನಾಂಕ 19ರ ವರೆಗೆ ಕೆ.ಎ.ಎಸ್ ಪರೀಕ್ಷೆಯ ಉಚಿತ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ.

ಹರಿಹರ : ದತ್ತ ಜಯಂತಿ ಆಚರಣೆ

ಹರಿಹರ : ನಗರದ ಜಗದ್ಗುರು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ದತ್ತ ಪಾದುಕಾ ಮಂದಿರದಲ್ಲಿ ಶ್ರೀ ದತ್ತ ಜಯಂತಿಯನ್ನು ಇಂದಿನಿಂದ ಇದೇ ದಿನಾಂಕ 16 ರವರಿಗೆ ಆಚರಿಸಲಾಗುತ್ತದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ನಾರಾಯಣ ಜೋಯಿಸರು ತಿಳಿಸಿದರು.

ಕೊಡದಗುಡ್ಡದ ವೀರಭದ್ರೇಶ್ವರ ಕಾರ್ತಿಕೋತ್ಸವ

ಜಗಳೂರು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರ ಸ್ವಾಮಿ ಕಾರ್ತಿಕೋತ್ಸವವು ಇದೇ ದಿನಾಂಕ 17ರ ಮಂಗಳವಾರ ನಡೆಯಲಿದ್ದು, ಈ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿವೆ.

ಚೌಡಯ್ಯದಾನಾಪುರದಲ್ಲಿ ಕಾರ್ತಿಕ

ರಾಣೇಬೆನ್ನೂರು : ತಾಲ್ಲೂಕಿನ ಚೌಡಯ್ಯ ದಾನಾಪುರದಲ್ಲಿ ಇದೇ ದಿನಾಂಕ 12ರಂದು ರಾತ್ರಿ 8ಕ್ಕೆ ಶ್ರೀ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವ ಜರುಗಲಿದೆ.

error: Content is protected !!