Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಕೃಷ್ಣ ನಿಧನಕ್ಕೆ ಜಿಲ್ಲಾ ಕಸಾಪ ಸಂತಾಪ

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಧೀಮಂತ ರಾಜಕಾರಣಿ ಮುತ್ಸದ್ಧಿಗಳೂ, ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ಎಸ್.ಎಂ. ಕೃಷ್ಣ ನಿಧನರಾಗಿರುವುದನ್ನು ಕೇಳಿ ನಮಗೆ  ಒಬ್ಬ ಉತ್ತಮ ಮಾರ್ಗದರ್ಶಕನನ್ನು ಕಳೆದುಕೊಂಡ ಅನಾಥ ಪ್ರಜ್ಞೆ ನಾಡಿನ ಜನತೆಗೆ ಕಾಡುತ್ತದೆ

ಕೃಷ್ಣ ನಿಧನಕ್ಕೆ ಜೆ. ಸೋಮನಾಥ್ ಸಂತಾಪ

ದೇಶದ ರಾಜಕಾರಣದಲ್ಲಿ ಅಪ್ರತಿಮ ಸೇವೆ ಸಲ್ಲಿಸಿ, ಅಜಾತಶತ್ರು ಎನಿಸಿಕೊಂಡಿದ್ದ ಎಸ್.ಎಂ. ಕೃಷ್ಣ ಅವರ ಅಗಲಿಕೆಯು ರಾಜ್ಯಕ್ಕೂ, ದೇಶಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ವೀರಶೈವ ಸಮಾಜದ ಮುಖಂಡ ಜೆ. ಸೋಮನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ಸಭೆ

ವಿವಿಧ ನಿಗಮಗಳ ಫಲಾನುಭವಿಗಳ ಆಯ್ಕೆಗೆ ಇಂದು ಬೆಳಿಗ್ಗೆ 10ಕ್ಕೆ ಜಿ.ಪಂ. ನಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದೆ.

ನಾಳೆ ಶ್ರೀ ಗಡಿ ಚೌಡೇಶ್ವರಿ ದೇವಿ ಕಾರ್ತಿಕ

ನಗರದ ಎಸ್‌.ಎಸ್‌. ಬಡಾವಣೆ `ಬಿ’ ಬ್ಲಾಕ್‌ (ಚಿಗಟೇರಿ ಬಡಾವಣೆ), ಕುಂದುವಾಡ ರಸ್ತೆಯ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ  ಕಾರ್ತಿಕೋತ್ಸವವು  ನಾಡಿದ್ದು  ದಿನಾಂಕ 13 ರಂದು ನಡೆಯಲಿದೆ.

15 ರಂದು ಡಾ.ಎಂ.ಜಿ. ಈಶ್ವರಪ್ಪ, ಪ್ರಭಾ ಅತ್ರೆ ಸ್ಮರಣಾರ್ಥ `ಸ್ವರಾಂಜಲಿ’

ಡಾ. ಎಂ. ಜಿ. ಈಶ್ವರಪ್ಪ ಹಾಗೂ ಸ್ವರ ಯೋಗಿನಿ ಡಾ. ಪ್ರಭಾ ಅತ್ರೆ ಸ್ಮರಣಾರ್ಥ ಇದೇ ದಿನಾಂಕ 15 ರಂದು ಸಂಜೆ 5.30 ಕ್ಕೆ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ಎಸ್.ಎಸ್.ಎಂ.ಸಭಾಂಗಣದಲ್ಲಿ `ಸ್ವರಾಂಜಲಿ’ ಹಮ್ಮಿಕೊಳ್ಳಲಾಗಿದೆ

ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿ ಹಾಲೇಶ್

ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿಯನ್ನು ಸಂಘದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ್‌ ನೇತೃತ್ವದಲ್ಲಿ ಇಂದು  ಆಯ್ಕೆ ಮಾಡಲಾಯಿತು.

ಎಸ್.ಎಂ. ಕೃಷ್ಣ ಜೀವನ ತೆರೆದ ಪುಸ್ತಕವಿದ್ದಂತೆ -ಶಾಸಕ ಕೆ.ಎಸ್. ಬಸವಂತಪ್ಪ ಪ್ರಶಂಸೆ

ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಅವರ ರಾಜಕೀಯ ಜೀವನ ತೆರೆದಿರುವ ಪುಸ್ತಕ. ಬೆಂಗಳೂರು ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.

ಸೌಡಿಗಳ ಬಾಕಿ ವೇತನ ಬಿಡುಗಡೆಗೆ ರಾಮಪ್ಪ ಪಟ್ಟು : 2 ತಿಂಗಳ ವೇತನ ನೀಡುವ ಭರವಸೆ

ಮಲೇಬೆನ್ನೂರು : ಇಲ್ಲಿನ ನೀರಾವರಿ ಕಛೇರಿಗೆ ಮಂಗಳವಾರ ಭೇಟಿ ನೀಡಿದ ಮಾಜಿ ಶಾಸಕ ಎಸ್ ರಾಮಪ್ಪ ಅವರು ಬಾಕಿ ವೇತನ ನೀಡುವಂತೆ ಆಗ್ರಹಿಸಿ  ಪ್ರತಿಭಟನೆ ನಡೆಸುತ್ತಿದ್ದ ಸೌಡಿಗಳ ಜೊತೆ ಸಮಸ್ಯೆ ಕುರಿತು ಚರ್ಚಿಸಿದರು.

ನಗರದಲ್ಲಿ ಇಂದಿನಿಂದ 15 ರವರೆಗೆ ಸ್ವದೇಶಿ ಮೇಳ

ಇದೇ ದಿನಾಂಕ 11 ರಿಂದ 15 ರವರೆಗೆ ಮೂರು ದಿನಗಳ ಕಾಲ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ `ಬೃಹತ್ ಸ್ವದೇಶಿ ಮೇಳ’ ಆಯೋಜಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್- ಕರ್ನಾಟಕದ ಕೆ. ಜಗದೀಶ್ ಮಾಹಿತಿ ನೀಡಿದರು.

ನಗರದೇವತೆ ದೇವಸ್ಥಾನದಲ್ಲಿ ಕಳ್ಳರ ಕೈಚಳಕ.! ಆಭರಣ ಜೊತೆ ಸಿಸಿ ಕ್ಯಾಮರಾವನ್ನೂ ಕದ್ದೊಯ್ದರು

ರಾಣೇಬೆನ್ನೂರು : ನಿನ್ನೆ ರಾತ್ರಿ ಇಲ್ಲಿನ ನಗರದೇವತೆ ತುಂಗಾಜಲ ಚೌಡೇಶ್ವರಿ ದೇವಿಯ ದೇವಸ್ಥಾನದ ಬಾಗಿಲು ಬೀಗ ಮುರಿದು  ಸುಮಾರು 13  ಕೆ.ಜಿ ತೂಕದ ಬೆಳ್ಳಿಯ ಆಭರಣ ಹಾಗೂ 1 ತೊಲ ತೂಕದ ತಾಳಿಸರದ ಜೊತೆಗೆ  ಸಿಸಿ ಕ್ಯಾಮರಾವನ್ನೂ ಕಳ್ಳತನ ಮಾಡಲಾಗಿದೆ.

ಎಸ್.ಎಂ. ಕೃಷ್ಣ, ಐಟಿ – ಬಿಟಿ ಹೆಬ್ಬಾಗಿಲ ನಿರ್ಮಾತೃ

ಚಿತ್ರದುರ್ಗ : ರಾಜ್ಯ ರಾಷ್ಟ್ರ ರಾಜಕಾರಣ ದಲ್ಲಿ ಎಲ್ಲಾ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ,  ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಎಸ್.ಕೆ.ಕೃಷ್ಣ ಪ್ರಮುಖರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ಯೋಜನೆಯಡಿ ಬಿ.ಎಡ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

error: Content is protected !!