Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

15, 16ರಂದು ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕ ದೀಪೋತ್ಸವ

ಕೊಟ್ಟೂರು ಶ್ರೀ ಗುರುಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ಇವರಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 15 ರ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದೆ.

ಇಂದಿನಿಂದ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿ

ದಾವಣಗೆರೆ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ವತಿಯಿದ  ಇಂದಿನಿಂದ ಮೂರು ದಿನ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿಯನ್ನು  ಹೈಸ್ಕೂಲ್ ಮೈದಾನದಲ್ಲಿರುವ ಟೆನ್ನಿಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ 

ಎಲೆಬೇತೂರಿನಲ್ಲಿ ನಾಳೆ ಶ್ರೀ ಬಂಡೆ ರಂಗಪ್ಪ ದೇವರ ಕಾರ್ತಿಕೋತ್ಸವ

ಇಲ್ಲಿಗೆ ಸಮೀಪದ ಎಲೆಬೇತೂರು ಗ್ರಾಮದ  ಪುಟಗನಾಳು ರಸ್ತೆಯಲ್ಲಿರುವ ಶ್ರೀ ಬಂಡೆ ರಂಗಪ್ಪ ದೇವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಮಾರ್ಗಶಿರ ಮಾಸದ ಕೊನೆಯ ಶನಿವಾರ ಇದೇ ದಿನಾಂಕ 14 ರಂದು ಶ್ರೀ ಬಂಡೆ ರಂಗಪ್ಪ ದೇವರ ಕಾರ್ತಿಕೋತ್ಸವವು ಸಂಜೆ 6:30ಕ್ಕೆ ನಡೆಯಲಿದೆ.

ಸ್ವದೇಶಿ ಮೇಳದಲ್ಲಿ ಇಂದು ‘ಸಾಂಸ್ಕೃತಿಕ ಸಂಭ್ರಮ’

ಸ್ವದೇಶಿ ಜಾಗರಣ ಮಂಚ್ ಕರ್ನಾಟಕದ ವತಿಯಿಂದ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಸ್ವದೇಶಿ ಮೇಳದಲ್ಲಿ ಇಂದು ಸಂಜೆ 5 ರಿಂದ 9 ರವರೆಗೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದಲ್ಲಿ ಇಂದು ಮತ್ತು ನಾಳೆ ಕಲಾಯಾನ-ರಂಗಾಸಕ್ತಿಯ ಅನಾವರಣ

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವತಿಯಿಂದ ಭಾರತೀಯ ಲೋಕ ಪರಂಪರೆಯ ಕಲಾಯಾನ ರಂಗಾಸಕ್ತಿಯ ಅನಾವರಣ 2024-25 ಕಾರ್ಯಕ್ರಮವು ವಿದ್ಯಾಕೇಂದ್ರದ ಆವರಣದಲ್ಲಿ ಇಂದು ಮತ್ತು ನಾಳೆ ದಿನಾಂಕ 14ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ.

ಎಸ್ಎಜಿಬಿ ಕಾಲೇಜಿನ ಕಾಲೇಜು ಹಬ್ಬ

ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಡೈಮಂಡ್ ಜ್ಯೂಬಿಲಿ ವಿದ್ಯಾಪೀಠದ ಶ್ರೀ ಅಜ್ಜಂಪುರ ಗೋವಿಂದಸ್ವಾಮಿ, ಭಾಗ್ಯ ಲಕ್ಷ್ಮಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜು ಹಬ್ಬ ಆಚರಣೆಯನ್ನು  ಇಂದು ಮತ್ತು ಆಹಾರ ಮೇಳ ಕಾರ್ಯಕ್ರಮವನ್ನು ನಾಳೆ 14 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

15ರಂದು ಧರಾಮ ವಿಜ್ಞಾನ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ

ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಇದೇ ದಿನಾಂಕ 15 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನವನ್ನು ಆಯೋಜಿಸಲಾಗಿದೆ.

ನಾಳೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಪ್ರತಿಭಟನೆ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡಿ, ಇಲ್ಲವೇ ಮುಚ್ಚಿ ಬಿಡಿ ಎಂಬ ಘೋಷವಾಕ್ಯದೊಂದಿಗೆ ನಾಡಿದ್ದು ದಿನಾಂಕ 13 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು

ಚೌಡಯ್ಯದಾನಾಪುರದಲ್ಲಿ ಕಾರ್ತಿಕ

ರಾಣೇಬೆನ್ನೂರು ತಾಲ್ಲೂಕಿನ ಚೌಡಯ್ಯದಾನಾಪುರದಲ್ಲಿ ಡಿ.12ರ ರಾತ್ರಿ 8ಕ್ಕೆ ಶ್ರೀ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವವು ಚೌಡಯ್ಯದಾನಾಪುರ ಸಂಸ್ಥಾನ ಮಠದ ಚಿತ್ರಶೇಖರ ಒಡೆಯರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ದೇವಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಹರಿಹರ: ನಾಳೆ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಎಸ್.ಡಿ.ಪಿ.ಐ. ಉಡುಪಿಯಿಂದ ಡಿ. 10 ರಂದು ಪ್ರಾರಂಭಿಸಿರುವ `ಚಲೋ ಬೆಳಗಾವಿ, ಅಂಬೇಡ್ಕರ್ ಜಾಥಾ- 2′ ನಾಡಿದ್ದು ದಿನಾಂಕ 13 ರಂದು ಹರಿಹರ ತಲುಪಲಿದೆ

ಕಲಾಕುಂಚದಿಂದ `ಸಂಕ್ರಾಂತಿ ಕಾವ್ಯ ಸಂಭ್ರಮ’ ರಾಜ್ಯ ಮಟ್ಟದ ಉಚಿತ ಸ್ಪರ್ಧೆ

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಕ್ರಾಂತಿ ಪ್ರಯುಕ್ತ ರಾಜ್ಯ ಮಟ್ಟದ `ಸಂಕ್ರಾಂತಿ ಕಾವ್ಯ ಸಂಭ್ರಮ’ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತೀರ್ಪುಗಾರ ರಲ್ಲಿ ಒಬ್ಬರಾದ ಕವಯತ್ರಿ, ಸಾಹಿತಿ ಶ್ರೀಮತಿ ಅನ್ನಪೂರ್ಣ ಪಾಟೀಲ್ ತಿಳಿಸಿದ್ದಾರೆ.

error: Content is protected !!