ಕೋರಂ ಕೊರತೆ : ಮಲೇಬೆನ್ನೂರು ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ
ಮಲೇಬೆನ್ನೂರು : ಕೋರಂ ಇಲ್ಲದ ಕಾರಣ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಯನ್ನು ಮುಂದೂಡಿದ ಘಟನೆ ಗುರುವಾರ ಮಲೇಬೆನ್ನೂರು ಪುರಸಭೆಯಲ್ಲಿ ನಡೆಯಿತು.
ಮಲೇಬೆನ್ನೂರು : ಕೋರಂ ಇಲ್ಲದ ಕಾರಣ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಯನ್ನು ಮುಂದೂಡಿದ ಘಟನೆ ಗುರುವಾರ ಮಲೇಬೆನ್ನೂರು ಪುರಸಭೆಯಲ್ಲಿ ನಡೆಯಿತು.
ಶ್ರೀ ಶಂಕರ ಸೇವಾ ಸಂಘದ ವತಿಯಿಂದ ನಗರದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಇಂದು ಸಂಜೆ 7 ಗಂಟೆಗೆ ಕಡೆ ಕಾರ್ತಿಕ ದೀಪೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ. ಶ್ರೀನಿವಾಸ ಜೋಶಿ ತಿಳಿಸಿದ್ದಾರೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ವಾಣಿಜ್ಯ ತ್ಯಾಜ್ಯ/ಕಸ ವಿಲೇವಾರಿ ಬಗ್ಗೆ ಇಂದು ಸಂಜೆ 4ಕ್ಕೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಹಾಪೌರರಾದ ಕೆ. ಚಮನ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರವನ್ನು ಏರ್ಪಡಿಸಲಾಗಿದೆ.
ಜಾಗತಿಕ ಲಿಂಗಾಯತ ಮಹಾಸಭಾ, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ವಾರ್ಷಿಕೋತ್ಸವ, ಅರಿವಿನ ಮಹಾಮನೆ ಉದ್ಘಾಟನೆ, ಶರಣರ ಜಯಂತಿ ಕಾರ್ಯಕ್ರಮವನ್ನು ಇದೇ ದಿನಾಂಕ 14ರ ಶನಿವಾರ ಬೆಳಿಗ್ಗೆ 11.30ಕ್ಕೆ ಜೆ.ಹೆಚ್. ಪಟೇಲ್ ಬಡಾವಣೆಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡಿ, ಇಲ್ಲವೇ ಮುಚ್ಚಿ ಬಿಡಿ ಎಂಬ ಘೋಷವಾಕ್ಯದೊಂದಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಬಿಜೆಪಿ ಕಾರ್ಯಾ ಲಯದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು
ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ `ಸ್ವಪ್ನಾ ಬುಕ್ ಹೌಸ್’ ಇದರ 23 ನೇ ನೂತನ ಶಾಖೆಯು ಇಂದು ಮಧ್ಯಾಹ್ನ 12 ಗಂಟೆಗೆ ಎವಿಕೆ ಕಾಲೇಜು ರಸ್ತೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸ್ವಪ್ನಾ ಬುಕ್ ಹೌಸ್ ಮಾಲೀಕರೂ ಆದ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ತಿಳಿಸಿದರು.
ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್ (ಚಿಗಟೇರಿ ಬಡಾವಣೆ), ಕುಂದುವಾಡ ರಸ್ತೆಯಲ್ಲಿನ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಚೌಡೇಶ್ವರಿ ಅಮ್ಮನವರ ಕಾರ್ತಿಕ ಮಹೋತ್ಸವವನ್ನು ಇಂದು ಸಂಜೆ 6 ಕ್ಕೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಜಿ. ರಾಘವೇಂದ್ರರಾವ್ ತಿಳಿಸಿದ್ದಾರೆ.
ಹಳ್ಳಿಗಳಲ್ಲಿನ ಖರೀದಿ ವಹಿವಾಟಿಗೂ ಇ-ಟೆಂಡರ್ ಪದ್ಧತಿ ಜಾರಿ ಮಾಡ ಬೇಕು ಎಂದು ಜಿಲ್ಲಾ ರೈತರ ಒಕ್ಕೂಟ ಆಗ್ರಹಿಸಿದೆ.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಕ್ರಾಂತಿ ಪ್ರಯುಕ್ತ ರಾಜ್ಯ ಮಟ್ಟದ `ಸಂಕ್ರಾಂತಿ ಕಾವ್ಯ ಸಂಭ್ರಮ’ ಉಚಿತ ಕವನ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತೀರ್ಪುಗಾರ ರಲ್ಲಿ ಒಬ್ಬರಾದ ಕವಯತ್ರಿ, ಸಾಹಿತಿ ಶ್ರೀಮತಿ ಅನ್ನಪೂರ್ಣ ಪಾಟೀಲ್ ತಿಳಿಸಿದ್ದಾರೆ.
ನಗರದ ಜಿ.ಎಂ. ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಲಭ್ಯತೆ ಮತ್ತು ಪ್ರಗತಿಯ ಹೆಜ್ಜೆ ಗುರುತಿನ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ತಿಳಿಯಬಹುದಾದ `ಓಪನ್ ಡೇ’ ಕಾರ್ಯಕ್ರಮವನ್ನು ನಾಳೆ ದಿನಾಂಕ 13 ಮತ್ತು 14 ರಂದು ಹಮ್ಮಿಕೊಳ್ಳಲಾಗಿದೆ
ಕೊಟ್ಟೂರು ಶ್ರೀ ಗುರುಬಸವ ರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಇದೇ ದಿನಾಂಕ 15 ರ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದೆ.