ನಗರದಲ್ಲಿ ಇಂದು ಶಿವಗೋಷ್ಠಿ
ಸಾದರ ನೌಕರರ ಬಳಗದ ಸಹಯೋಗದಲ್ಲಿ ಶಿವಗೋಷ್ಠಿ – 311ಹಾಗೂ ಸ್ಮರಣೆ-88 ಮಾಸಿಕ ಕಾರ್ಯಕ್ರಮವು ಇಂದು ಸಂಜೆ ಸಂಜೆ 6.30ಕ್ಕೆ ಶ್ರೀ ತರಳಬಾಳು ಬಡಾವಣೆ ಶಿವಕುಮಾರ ಸ್ವಾಮೀಜಿ ಮಹಾಮಂಟಪದಲ್ಲಿ ನೆರವೇರಲಿದೆ.
ಸಾದರ ನೌಕರರ ಬಳಗದ ಸಹಯೋಗದಲ್ಲಿ ಶಿವಗೋಷ್ಠಿ – 311ಹಾಗೂ ಸ್ಮರಣೆ-88 ಮಾಸಿಕ ಕಾರ್ಯಕ್ರಮವು ಇಂದು ಸಂಜೆ ಸಂಜೆ 6.30ಕ್ಕೆ ಶ್ರೀ ತರಳಬಾಳು ಬಡಾವಣೆ ಶಿವಕುಮಾರ ಸ್ವಾಮೀಜಿ ಮಹಾಮಂಟಪದಲ್ಲಿ ನೆರವೇರಲಿದೆ.
ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಶ್ರೀ ಗುರು ರಾಮದಾಸರ 66 ನೇ ವರ್ಷದ ಹಾಗೂ ಶ್ರೀ ಕೊಂಡಯ್ಯ ಸ್ವಾಮಿಗಳ 18 ನೇ ವರ್ಷದ ಪುಣ್ಯಾರಾಧನೆ, 33 ನೇ ವರ್ಷದ ಸಾಮೂಹಿಕ ವಿವಾಹ, ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಎಂ.ಸಿ.ಸಿ `ಬಿ’ ಬ್ಲಾಕ್ ಬಿಐಇಟಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದು ಮಂಡಲ ಪೂಜೆ, ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ನಾಮದೇವ ಸಿಂಪಿ ಸಮಾಜದ ಎಸ್.ಕೆ.ಪಿ. ರಸ್ತೆಯ ಶ್ರೀ ವಿಠಲ ರುಕುಮಾಯಿ ಹರಿಮಂದಿರದಲ್ಲಿ (ಗಣೇಶ ದೇವಸ್ಥಾನದ ಪಕ್ಕ) ಇಂದು ಸಂಜೆ 7 ಕ್ಕೆ ಕಾರ್ತಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ
ನಗರದ ಕೆ.ಬಿ. ಬಡಾವಣೆ ದೀಕ್ಷಿತ್ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ದಿನಾಂಕ 15ರ ಭಾನುವಾರ ಕಡೇ ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್.ಕೆ. ಸೋಮಶೇಖರಪ್ಪ, ಕೆ.ಜಿ. ಶಿವಕುಮಾರ್ ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ವಾರ್ಷಿಕೋತ್ಸವ, ಅರಿವಿನ ಮಹಾಮನೆ ಉದ್ಘಾಟನೆ, ಶರಣರ ಜಯಂತಿ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 11.30ಕ್ಕೆ ಜೆ.ಹೆಚ್. ಪಟೇಲ್ ಬಡಾವಣೆಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾರತೀಯ ಲೋಕ ಪರಂಪರೆ ಆಧಾರಿತ `ಕಲಾಯಾನ ರಂಗಾಸಕ್ತಿಯ ಅನಾವರಣ 2024-25′ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆವರಣದಲ್ಲಿ ಇಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿರುತ್ತದೆ.
ಮೇಡ್ಲೇರಿ ರಸ್ತೆಯ ಆಂಗ್ಲ ಮಾಧ್ಯಮ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ಲಬ್, ಶಂಕರ ಕಣ್ಣಿನ ಆಸ್ಪತ್ರೆ, ಕಂಚಿ ಕಾಮಕೋಟಿ ಮೆಡಿಕಲ್ ಹಾಗೂ ವಿವಿಧ ಸಂಘಟನೆಗಳು ಇಂದು ಬೆಳಿಗ್ಗೆ 9 ರಿಂದ 1 ಗಂಟೆವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಅವಶ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ.
ಕೆ.ಆರ್. ರಸ್ತೆಯ ಶ್ರೀ ಗಣೇಶ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ 7ಕ್ಕೆ ಕಾರ್ತಿಕೋತ್ಸವ ನಡೆಯಲಿದೆ.
ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಆಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ದಾವಣಗೆರೆಯ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಸಹಕಾರ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಆಯೋಗದಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಸಂಧಾನದ ಮೂಲಕ ಇತ್ಯರ್ಥವಾಗು ವಂತಹ ಪ್ರಕರಣಗಳನ್ನು ಲೋಕ್ ಅದಾಲತ್‌ಗೆ ಗುರುತಿಸಿಕೊಂ ಡಿರುವ ಪ್ರಕರಣಗಳನ್ನು ಗ್ರಾಹಕರು ಮತ್ತು ವಕೀಲರುಗಳು ಹಾಜರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸ ಬೇಕು ಎಂದು ಆಯೋಗದ ಸಹಾ ಯಕ ರಿಜಿಸ್ಟಾರ್ ಹಾಗೂ ಸಹಾ ಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಮಲೇಬೆನ್ನೂರು : ಕೋರಂ ಇಲ್ಲದ ಕಾರಣ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಯನ್ನು ಮುಂದೂಡಿದ ಘಟನೆ ಗುರುವಾರ ಮಲೇಬೆನ್ನೂರು ಪುರಸಭೆಯಲ್ಲಿ ನಡೆಯಿತು.