ಬೆಳ್ಳೂಡಿಯಲ್ಲಿ ಇಂದು ಕಾರ್ತಿಕ
ಬೆಳ್ಳೂಡಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ಇಂದು ರಾತ್ರಿ 8 ಗಂಟೆಗೆ ಜರುಗಲಿದೆ.
ಬೆಳ್ಳೂಡಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ಇಂದು ರಾತ್ರಿ 8 ಗಂಟೆಗೆ ಜರುಗಲಿದೆ.
ಮಲೇಬೆನ್ನೂರು : ಪಟ್ಟಣದ ಸಾರ್ವ ಜನಿಕ ಸ್ಥಳಗಳಲ್ಲಿ ಅನಧಿಕೃತ ವಾಗಿ ಅಳವಡಿಸಲಾದ ಫ್ಲೆಕ್ಸ್‌ಗಳನ್ನು ಪುರಸಭೆ ಅಧಿಕಾರಿಗಳಾದ ನವೀನ್, ಶಿವರಾಜ್ ಅವರುಗಳ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ವರ್ಗದವರು ಶುಕ್ರವಾರ ತೆರವುಗೊಳಿಸಿದರು.
ರಂಗಕಲಾ ಅಕಾಡೆಮಿಯಿಂದ ರಂಗ ಮಹಲ್‍ನಲ್ಲಿ ಇಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಆರ್ಟ್ ವರ್ಕ್‌ಶಾಪ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಲಾವಿದ ಮೂರ್ತಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ|| ಎಸ್.ಎಂ. ಕೃಷ್ಣ ಅವರ ಶ್ರದ್ಧಾಂಜಲಿ ಪ್ರಯುಕ್ತ ಶ್ರೀ ವಿರಕ್ತಮಠ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಪೆನ್ನುಗಳ ವಿತರಣಾ ಸಮಾರಂಭವನ್ನು ಇಂದು ಬೆಳಗ್ಗೆ 9.30ಕ್ಕೆ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ.
ಸಾದರ ನೌಕರರ ಬಳಗದ ಸಹಯೋಗದಲ್ಲಿ ಶಿವಗೋಷ್ಠಿ – 311ಹಾಗೂ ಸ್ಮರಣೆ-88 ಮಾಸಿಕ ಕಾರ್ಯಕ್ರಮವು ಇಂದು ಸಂಜೆ ಸಂಜೆ 6.30ಕ್ಕೆ ಶ್ರೀ ತರಳಬಾಳು ಬಡಾವಣೆ ಶಿವಕುಮಾರ ಸ್ವಾಮೀಜಿ ಮಹಾಮಂಟಪದಲ್ಲಿ ನೆರವೇರಲಿದೆ.
ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಶ್ರೀ ಗುರು ರಾಮದಾಸರ 66 ನೇ ವರ್ಷದ ಹಾಗೂ ಶ್ರೀ ಕೊಂಡಯ್ಯ ಸ್ವಾಮಿಗಳ 18 ನೇ ವರ್ಷದ ಪುಣ್ಯಾರಾಧನೆ, 33 ನೇ ವರ್ಷದ ಸಾಮೂಹಿಕ ವಿವಾಹ, ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಎಂ.ಸಿ.ಸಿ `ಬಿ’ ಬ್ಲಾಕ್ ಬಿಐಇಟಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದು ಮಂಡಲ ಪೂಜೆ, ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ನಾಮದೇವ ಸಿಂಪಿ ಸಮಾಜದ ಎಸ್.ಕೆ.ಪಿ. ರಸ್ತೆಯ ಶ್ರೀ ವಿಠಲ ರುಕುಮಾಯಿ ಹರಿಮಂದಿರದಲ್ಲಿ (ಗಣೇಶ ದೇವಸ್ಥಾನದ ಪಕ್ಕ) ಇಂದು ಸಂಜೆ 7 ಕ್ಕೆ ಕಾರ್ತಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ
ನಗರದ ಕೆ.ಬಿ. ಬಡಾವಣೆ ದೀಕ್ಷಿತ್ ರಸ್ತೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ದಿನಾಂಕ 15ರ ಭಾನುವಾರ ಕಡೇ ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್.ಕೆ. ಸೋಮಶೇಖರಪ್ಪ, ಕೆ.ಜಿ. ಶಿವಕುಮಾರ್ ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ವಾರ್ಷಿಕೋತ್ಸವ, ಅರಿವಿನ ಮಹಾಮನೆ ಉದ್ಘಾಟನೆ, ಶರಣರ ಜಯಂತಿ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 11.30ಕ್ಕೆ ಜೆ.ಹೆಚ್. ಪಟೇಲ್ ಬಡಾವಣೆಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾರತೀಯ ಲೋಕ ಪರಂಪರೆ ಆಧಾರಿತ `ಕಲಾಯಾನ ರಂಗಾಸಕ್ತಿಯ ಅನಾವರಣ 2024-25′ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆವರಣದಲ್ಲಿ ಇಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿರುತ್ತದೆ.
ಮೇಡ್ಲೇರಿ ರಸ್ತೆಯ ಆಂಗ್ಲ ಮಾಧ್ಯಮ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ಲಬ್, ಶಂಕರ ಕಣ್ಣಿನ ಆಸ್ಪತ್ರೆ, ಕಂಚಿ ಕಾಮಕೋಟಿ ಮೆಡಿಕಲ್ ಹಾಗೂ ವಿವಿಧ ಸಂಘಟನೆಗಳು ಇಂದು ಬೆಳಿಗ್ಗೆ 9 ರಿಂದ 1 ಗಂಟೆವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಅವಶ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ.