Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಕಾರ್ಯಾಗಾರ

ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಯುನಿಸೆಫ್ ಸಹಯೋಗದಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಕರ್ನಾಟಕ ರಾಜ್ಯ ಪತ್ರಕರ್ತರಿಗಾಗಿ  ಇಂದು ಮತ್ತು ನಾಳೆ ವೃತ್ತಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ನಗರದಲ್ಲಿ ಇಂದು ಅಂಬಾಭವಾನಿ ಅಮ್ಮನವರ ಗೋಂದಳಿ ಪೂಜೆ

ಶ್ರೀ ಅಂಬಾ ಭವಾನಿ ಅಮ್ಮನವರ ಸಾಮೂಹಿಕ ಗೋಂದಳ  ಕಾರ್ಯಕ್ರಮ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ ಅಂಬಾಭವಾನಿ ಅಮ್ಮನವರ ಸಾಮೂಹಿಕ ಗೋಂದಳಿ ಪೂಜೆ ಅಂಗವಾಗಿ ಶ್ರೀ ಕೃಷ್ಣಭವಾನಿ ಕಲ್ಯಾಣ ಮಂಟಪದಲ್ಲಿ ಇಂದು ಮತ್ತು ನಾಳೆ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಸಹನಾ ರವಿ ಶಾಲೆಯಲ್ಲಿ ಇಂದು ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ

ಶ್ರೀಮತಿ ಸಹನಾ ರವಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ `ಅನುಭಾವ’ ಶೀರ್ಷಿಕೆಯಲ್ಲಿ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ.

ನಗರದಲ್ಲಿ 20ರಂದು ಉದ್ಯೋಗ ಮೇಳ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ವತಿಯಿಂದ  ಇದೇ ದಿನಾಂಕ 20 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ ಸಂಖ್ಯೆ 51) ದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ನಗರದಲ್ಲಿ ಇಂದಿನಿಂದ ಎಸ್‌ಎಸ್‌ವೈ ಶಿಬಿರ

ಸಿದ್ಧ ಸಮಾಧಿ ಯೋಗ ತರ ಬೇತಿ (ಎಸ್‌ಎಸ್‌ವೈ) ಶಿಬಿರವು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವ ಸ್ಥಾನದಲ್ಲಿ ಇಂದಿನಿಂದ ರೇಣುಕಾ ಮಾತಾಜಿ ಸಾನ್ನಿಧ್ಯದಲ್ಲಿ ಆರಂಭ ವಾಗಲಿದೆ.

ಹಳ್ಳಿಹಾಳ್‌ನಲ್ಲಿಂದು ಕಾರ್ತಿಕೋತ್ಸವ

ಮಲೇಬೆನ್ನೂರು ಸಮೀಪದ ಹಳ್ಳಿಹಾಳ್ ಗ್ರಾಮದ ಶ್ರೀ ಮುರುಡ ಬಸವೇಶ್ವರ ದೇವರ ಕಾರ್ತಿಕೋತ್ಸವವು ಇಂದು ಸಂಜೆ 7:30 ಕ್ಕೆ ಜರುಗಲಿದೆ ಎಂದು ಗ್ರಾಮದ ಯು.ಎನ್. ಶಿವನಗೌಡ, ಹೆಚ್. ವೀರನಗೌಡ ತಿಳಿಸಿದ್ದಾರೆ.

ನಗರದಲ್ಲಿ ಇಂದು ಗಣಪತಿ ಕಾರ್ತಿಕ

ಮೋತಿ ಟಾಕೀಸ್ ಹಿಂಭಾಗ ದಲ್ಲಿರುವ ಶ್ರೀ ಮಹಾವಿದ್ಯಾ ಗಣಪತಿ ದೇವಸ್ಥಾನದಲ್ಲಿ ಇಂದು ಸಂಜೆ 6.30ಕ್ಕೆ ಕಡೇ ಕಾರ್ತಿಕೋತ್ಸವ ಜರುಗುವುದು.

ಲಿಂಗದಹಳ್ಳಿಯಲ್ಲಿ ವಿದ್ಯಾರ್ಥಿಗಳ ಸಾವು : ಶಿಕ್ಷಕರಿಗೆ ಕಾಂಪೌಂಡ್ ಕಟ್ಟಿಸುವ ಹೊಣೆಗಾರಿಕೆ

ರಾಕೇಶ ಕೋಲೇರ ಹಾಗೂ ಸಂತೋಷ ಚನ್ನಗೌಡ್ರ ಈ ಇಬ್ಬರು ವಿದ್ಯಾರ್ಥಿಗಳು ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ಸಾವನ್ನಪ್ಪಿದ್ದು, ಕಾರಣ ಶಿಕ್ಷಕರೇ ಹಣ ಖರ್ಚು ಮಾಡಿ ಶಾಲಾ ಕಾಂಪೌಂಡ್ ನಿರ್ಮಿಸಿ, ಗೇಟ್ ಸರಿಪಡಿಸುವಂತೆ ಹೊಣೆಗಾರಿಕೆಯನ್ನು ಗ್ರಾಮಸ್ಥರು ವಿಧಿಸಿದ್ದಾರೆಂದು ಗೊತ್ತಾಗಿದೆ.

ಒಳ ಮೀಸಲಾತಿ : ಹಕ್ಕೊತ್ತಾಯ ಸಮಾವೇಶ

ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೆ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿ ಸಬೇಕೆಂದು ಆಗ್ರಹಿಸಿ ನಾಳೆ 16ರ ಸೋಮವಾರ ಬೆಳಗಾವಿಯಲ್ಲಿ ಬೃಹತ್‌ ಹಕ್ಕೊತ್ತಾಯ ಸಮಾವೇಶಕ್ಕೆ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದೆ.

ನಗರದ ಎಸ್‌ಬಿಸಿ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿ ಸಂಘ ಉದ್ಘಾಟನೆ

ಎಸ್‌.ಬಿ.ಸಿ. ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್‌.ಎಸ್‌.ಎಸ್‌. ಘಟಕ ಹಾಗೂ ರೆಡ್‌ ಕ್ರಾಸ್‌ ಘಟಕಗಳ ಉದ್ಘಾಟನಾ ಸಮಾರಂಭವನ್ನು ಇಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಎಸ್‌.ಬಿ.ಸಿ. ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.

error: Content is protected !!