Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಹರಿಹರದಲ್ಲಿ ನಾಳೆಯಿಂದ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ

ಹರಿಹರ : ನಗರದ  ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 9 ರಿಂದ 11 ರವರಿಗೆ ಬಾಳೆಹೊನ್ನೂರಿನ ಶ್ರೀ ಮದ್‌ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಮಹಾ ಸ್ವಾಮಿಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಜಾಗೃತಿ ಸಮಾರಂಭ ನಡೆಯಲಿದೆ

`ಲೂಸ್’ ಬಿತ್ತನೆ ಬೀಜ : ಕೃಷಿ ಇಲಾಖೆ ಎಚ್ಚರಿಕೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಭೂಮಿ ಸಿದ್ಧತೆ, ಸಮಗ್ರ ಬೆಳೆ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಬಹು ಮುಖ್ಯವಾಗಿದ್ದು, ಅನಧಿಕೃತ `ಲೂಸ್’ ಬಿತ್ತನೆ ಬೀಜಗಳ ಬಗ್ಗೆ ರೈತರು ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖೆ ತಿಳಿಸಿದೆ.

ರೈತರಿಂದಲೇ ಬೆಳೆ ಸಮೀಕ್ಷೆಗೆ ಅವಕಾಶ

ರೈತರು ಬೆಳೆದ ಬೆಳೆಗಳಿಗೆ ಸರ್ಕಾರದ ಯೋಜನೆಗಳನ್ನು ಪಡೆ ಯಲು ಬೆಳೆ ಸಮೀಕ್ಷೆ ಅಡಿಯಲ್ಲಿ ನಿಖರವಾಗಿ ಬೆಳೆಯನ್ನು ನಮೂದಿಸುವುದು ಅತ್ಯಗತ್ಯ ವಾಗಿದೆ. 

ಇಂದು ಪುರಿ ಶ್ರೀ ಜಗನ್ನಾಥ ಯಾತ್ರೆ

ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್‌) ವತಿಯಿಂದ 3ನೇ ವರ್ಷದ ಪುರಿ ಶ್ರೀ ಜಗನ್ನಾಥ ರಥಯಾತ್ರೆಯು ದಾವಣಗೆರಯಲ್ಲಿ ಇಂದು ನಡೆಯಲಿದೆ ಎಂದು ಇಸ್ಕಾನ್‌ ಜಿಲ್ಲಾ ಮುಖ್ಯಸ್ಥರಾದ ಅವಧೂತ ಚಂದ್ರ ದಾಸರು ತಿಳಿಸಿದ್ದಾರೆ.

ಐರಣಿ : ಇಂದು ಮುಪ್ಪಿನಾರ್ಯ, ನಿಂಗಜ್ಜ ಶ್ರೀಗಳ ಪುಣ್ಯಾರಾಧನೆ

ರಾಣೇಬೆನ್ನೂರು ಸಮೀಪದ ಐರಣಿ ಹೊಳೆಮಠದ ಮಹಾ ತಪಸ್ವಿ ಶ್ರೀ ಗುರು  ಮುಪ್ಪಿನಾರ್ಯ ಮಹಾತ್ಮಾಜಿಯವರ 41ನೇ ವರ್ಷದ ಪುಣ್ಯಾರಾಧನೆ ಹಾಗೂ ಶ್ರೀ ನಿಂಗಜ್ಜ ಸ್ವಾಮಿಯವರ 10ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಐರಣಿ ಗ್ರಾಮದ ಶ್ರೀ ಗುರುಕುಲ ಕ್ಷೇತ್ರ ಮನೆ ಮಠದಲ್ಲಿ  ಇಂದು ನಡೆಯಲಿದೆ.  

ಗಣೇಶ್ ಶೆಣೈಗೆ ಕಲಾಕೌಸ್ತುಭ ಪ್ರಶಸ್ತಿ

ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡದಿಂದ ನಗರದ ಸಾಲಿಗ್ರಾಮ ಗಣೇಶ್ ಶೆಣೈ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕಲಾಕೌಸ್ತುಭ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

ದೀನ ದಯಾಳ್ ಅಂತ್ಯೋದಯ ಯೋಜನೆ-ನಗರ ಜೀವನೋಪಾಯ ಅಭಿಯಾನ

ಹರಿಹರ : ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪ್ರಸಕ್ತ ಸಾಲಿಗೆ ಸ್ವಯಂ ಉದ್ಯೋಗ ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತು ಸಹಾಯ ಧನ), ಗುಂಪು ಉದ್ಯಮ ಕಾರ್ಯಕ್ರಮದಡಿ, ಗುಂಪು ಉದ್ಯಮ ಕೈಗೊಳ್ಳಲು, ಎಸ್.ಹೆಚ್.ಜಿ ಬ್ಯಾಂಕ್ ಕ್ರೆಡಿಟ್ ಲಿಂಕೇಜ್ ಕಾರ್ಯಕ್ರಮದಡಿ ಸಾಲ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಗರದಲ್ಲಿ ಇಂದು ಸಿವಿಲ್ ಸನ್ಮಾನ

ವೃತ್ತಿಪರ ಸಿವಿಲ್ ಇಂಜಿನಿಯರ್ ಮಸೂದೆಯನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅದಕ್ಕೆ ಶ್ರಮಿಸಿದ ಹಲವು ಪ್ರಮುಖ ಇಂಜಿನಿಯರ್ ಗಳಿಗೆ ಇಂದು ನಗರದಲ್ಲಿ ಸನ್ಮಾನ ಕಾರ್ಯ ನಡೆಯಲಿದೆ. 

ನಗರದಲ್ಲಿ ಇಂದು ಈಶ್ವರಮ್ಮ ಶಾಲಾ ಮಂತ್ರಿ ಮಂಡಲ ಪ್ರತಿಜ್ಞಾ ಸ್ವೀಕಾರ

ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಶಾಲಾ ಮಂತ್ರಿ ಮಂಡಲ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್ ತಿಳಿಸಿದ್ದಾರೆ.

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಚಿತ್ರದುರ್ಗ : ಎಚ್. ಆಂಜನೇಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು. ಇದೇ ದಿನಾಂಕ 10 ಕೊನೆ ದಿನಾಂಕ ಆಗಿದೆ. 

error: Content is protected !!