ರವಿ ಪರಿಷತ್ ಸದಸ್ಯತ್ವ ವಜಾಕ್ಕೆ ಒತ್ತಾಯ
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು ಎಂದು ಬಿ. ವೀರಣ್ಣ ಆಗ್ರಹ ಮಾಡಿದ್ದಾರೆ
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು ಎಂದು ಬಿ. ವೀರಣ್ಣ ಆಗ್ರಹ ಮಾಡಿದ್ದಾರೆ
ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 3ನೇ ವರ್ಷದ ಕನ್ನಡ ಹಬ್ಬ ಹಾಗೂ 69ನೇ ಕನ್ನಡ ರಾಜ್ಯೋತ್ಸವವನ್ನು ಡಿ.21ರ ಇಂದು ಸಂಜೆ 5.30ಕ್ಕೆ ಇಲ್ಲಿನ ಜಯದೇವ ವೃತ್ತದ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ
ಸಿ.ಟಿ. ರವಿ ಬಂಧನವನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಎನ್. ತಿಳಿಸಿದ್ದಾರೆ.
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಸಿದ್ಧ ಸಮಾಧಿ ಯೋಗ ತರಬೇತಿ (ಎಸ್‌ಎಸ್‌ವೈ) ಶಿಬಿರವು ಲೋಕಿಕೆರೆ ರಸ್ತೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ರೇಣುಕಾ ಮಾತಾಜಿ ಸಾನ್ನಿಧ್ಯದಲ್ಲಿ ಆರಂಭವಾಗಲಿದೆ.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಡಾ|| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಲಿದೆ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ವತಿಯಿಂದ ಇಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (ಕೊಠಡಿ ಸಂಖ್ಯೆ 51) ದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಶಾಮನೂರಿನ ಶ್ರೀ ಜೆ.ಹೆಚ್. ಪಟೇಲ್ ಬಡಾವಣೆಯ ರೈಲ್ವೆ ಪಾರ್ಕ್ ಪಕ್ಕದ ಶ್ರೀ ಮಾತಾ ಪಂಚವಟಿ ನಾಗಕಾಳಿಕಾದೇವಿಯ 31ನೇ ವರ್ಷದ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಇಂದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ.
ಜಿಲ್ಲಾ ವರದಿಗಾರರ ಕೂಟದಿಂದ 3ನೇ ವರ್ಷದ ಪಿಪಿಎಲ್-2ಕೆ24ನ್ನು ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ನಾಡಿದ್ದು ದಿನಾಂಕ 21ರಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ
ಆಂಜನೇಯ ಬಡಾವಣೆ ಬಿಐಇಟ ಕಾಂಪೌಂಡ್ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ 12ನೇ ವರ್ಷದ ಶ್ರೀ ಬನ್ನಿಮಹಾಂಕಾಳಿ ದೇವಿಯ ಕಡೇಕಾರ್ತಿಕ ಮತ್ತು ದೀಪೋತ್ಸವವು ಇಂದು ಸಂಜೆ 7.30ಕ್ಕೆ ನಡೆಯಲಿದೆ.
ದಾವಣಗೆರೆ ಸಮೀಪದ ಬೇತೂರು ಗ್ರಾಮದ ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಇಂದು ಸಂಜೆ 7 ಗಂಟೆಗೆ ಜರುಗಲಿದೆ. ಭಕ್ತರು ಭಾಗವಹಿಸುವಂತೆ ದೇವಸ್ಥಾನ ಸಮಿತಿ ಕೋರಿದೆ.
ವಿನೋಬನಗರದ ರಾಮಕೃಷ್ಣ ಆಶ್ರಮದ ಹತ್ತಿರವಿರುವ ನವ ವೃಕ್ಷಧಾಮದಲ್ಲಿರುವ ಶ್ರೀ ಕಾಳಿಕಾದೇವಿಯ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 20ರ ಶುಕ್ರವಾರ ರಾತ್ರಿ 8 ಗಂಟೆಗೆ ನೆರವೇರಲಿದೆ ಎಂದು ಸಮಿತಿಯ ಪರವಾಗಿ ಹೆಚ್. ದಿವಾಕರ್ ತಿಳಿಸಿದ್ದಾರೆ.