Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ಎಸ್ಸೆಸ್ಸೆಗೆ ಸಿದ್ದಗಂಗಾ ಶ್ರೀಗಳಿಂದ ಗುರು ರಕ್ಷೆ

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಶತಾಯುಷಿಗಳಾಗುವಂತೆ ಗುರುರಕ್ಷೆ ನೀಡಿ, ಆಶೀರ್ವದಿಸಿದರು.

ಮಲೆನಾಡಿಗರ ಧ್ವನಿ, ಸಾಹಿತಿ ನಾ. ಡಿಸೋಜಾ ಇನ್ನಿಲ್ಲ

ನಾಡಿನ ಹಿರಿಯ ಸಾಹಿತಿ ಡಾ. ನಾ ಡಿಸೋಜ ಅವರು ವಯೋಸಹಜ ಅನಾರೋಗ್ಯದಿಂದ ಇಂದು ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕೆಟಿಜೆ ನಗರದಲ್ಲಿ ಕಾರ್ತಿಕೋತ್ಸವ

ಕೆಟಿಜೆ ನಗರ 2ನೇ ಕ್ರಾಸ್, 2ನೇ ಮೇನ್‌ನಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಶನೈಶ್ಚರ, ಶ್ರೀ ನವಗ್ರಹ ಸನ್ನಿಧಿ, ಶ್ರೀ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕಡೇ ಕಾರ್ತಿಕ ದೀಪೋತ್ಸವವು ಈಚೆಗೆ ನಡೆಯಿತು.

ಕೆಲವು ಕುಚೋದ್ಯ ಶಕ್ತಿಗಳು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಬೇರ್ಪಡಿಸಿ, ಬಣ ರಾಜಕೀಯ ಮಾಡುತ್ತಿವೆ

ದಾವಣಗೆರೆಯಲ್ಲಿ ಕೆಲವು ಕುಚೋದ್ಯ ಶಕ್ತಿಗಳು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಬೇರ್ಪಡಿಸಿ, ಬಣ ರಾಜಕೀಯ ಮಾಡುತ್ತಿವೆ ಎಂದು ಕರ್ನಾಟಕ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ಫೆಡರೇಷನ್‌ ಅಧ್ಯಕ್ಷ ಅಮ್ಜದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.

ಹುಲಗೂರ, ದೇವಾಂಗ ಸಮಾಜದ ನಿರ್ದೇಶಕ

ರಾಣೇಬೆನ್ನೂರು : ದೇವಾಂಗ ಸಮಾಜದ ಶಿಕ್ಷಣ ಸಂಸ್ಥೆಯಾದ ಶ್ರೀ ಬನಶಂಕರಿ ಗ್ರಾಮೀಣ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ 2024-29ನೇ ಸಾಲಿನ ಆಡಳಿತ ಸಮಿತಿಯ ನಿರ್ದೇಶಕರಾಗಿ ನಗರದ ಬನಶಂಕರಿ ಸೀಡ್ಸ್ ಕಂಪನಿ  ಮಾಲೀಕ ಲಕ್ಷ್ಮೀಕಾಂತ ಎಸ್.ಹುಲಗೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ವೆಂಕಟೇಶ್ವರಪುರದಲ್ಲಿ 10ರಂದು ವೈಕುಂಠ ಏಕಾದಶಿ ವೈಭವ

ಶ್ರೀ ವೆಂಕಟೇಶ್ವರ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಧನುರ್ಮಾಸದ ಶುಕ್ಲ ಪಕ್ಷ ವೈಕುಂಠ ಏಕಾದಶಿ ಇದೇ ದಿನಾಂಕ 10ರ ಶುಕ್ರವಾರ ಬೆಳಗಿನ ಜಾವ 3.30 ರಿಂದ ಉತ್ತರ ದ್ವಾರ ದರ್ಶನ, ವಿಶೇಷ ಪಂಚಾಮೃತ ಅಭಿಷೇಕ, ದಿವ್ಯ ವಜ್ರ ಖಚಿತ ಆಭರಣ ಅಲಂಕಾರ ಸೇವೆಯನ್ನು ನಡೆಸಲಾಗುತ್ತದೆ. 

ಜಿಗಳಿ ಪಿಎಸಿಎಸ್ ಚುನಾವಣೆ : 11 ಜನ ಆಯ್ಕೆ

ಮಲೇಬೆನ್ನೂರು : ಜಿಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾಗಿದ್ದಾರೆ.

ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕ ಚರಿತ್ರೆ, ದಾಖಲೆಗಳು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ಹರಿಹರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ದಿನಾಂಕ 6 ಮತ್ತು 7 ರಂದು ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕದ ಚರಿತ್ರೆ ಮತ್ತು ದಾಖಲೆಗಳು ವಿಷಯ ಕುರಿತು ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ

ಕೊಂಡಜ್ಜಿ ಪಿಎಸಿಎಸ್ ಚುನಾವಣೆ ನಿಖಲ್ ಸೇರಿ 6 ಜನ ಅವಿರೋಧ ಆಯ್ಕೆ

ಮಲೇಬೆನ್ನೂರು : ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಸಾಲಗಾರರಲ್ಲದ ಕ್ಷೇತ್ರದಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಸೇರಿ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆರ್.ಟಿ. ಪ್ರಶಾಂತ್ ಅವರಿಗೆ ಪ್ರಶಸ್ತಿ

`ಧರ್ಮ ವಿಭೂಷಣ’ ಪ್ರಶಸ್ತಿಯನ್ನು ಕಾಶಿ ಪೀಠದ ಹಿರಿಯ ಜಗದ್ಗುರುಗಳವರು ಹರಿಹರದ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದ ಕಾರ್ಯದರ್ಶಿಗಳೂ, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆದ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ್ ಅವರಿಗೆ ನೀಡಿ ಆಶೀರ್ವದಿಸಿದರು.

ಕೊಕ್ಕನೂರು ಶಾಲೆಗೆ ಲೋಟ ಕೊಡುಗೆ

ಮಲೇಬೆನ್ನೂರು : ಕೊಕ್ಕನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ 240 ತಟ್ಟೆ ಹಾಗೂ ಲೋಟಗಳನ್ನು ಮತ್ತು  ಕೊಕ್ಕನೂರು ಹಾಲು ಉತ್ಪಾದಕರ ಸಂಘದವರು ತಟ್ಟೆಸ್ಟ್ಯಾಂಡನ್ನು ಶುಕ್ರವಾರ ಕೊಡುಗೆಯಾಗಿ ನೀಡಿದರು. 

ಕ್ರೀಡಾಪಟು ವೈಭವ್ ಜಿ. ಅವರಿಗೆ ಬಂಗಾರದ ಪದಕ

ಕಳೆದ ವಾರ ಉತ್ತರಪ್ರದೇಶದ ಲಕ್ನೋದಲ್ಲಿ ಎಂ.ಆರ್. ಜೈಪುರಿಯಾಗೋಲ್ ಕ್ಯಾಂಪಸ್ ನಲ್ಲಿ ನಡೆದ ರಾಷ್ಟ್ರಮಟ್ಟದ 15 ನೇ ನ್ಯಾಷನಲ್ ಇಂಡೋರ್ ಆರ್ಚರಿ ಚಾಂಪಿಯನ್ ಷಿಪ್ ನಲ್ಲಿ 7 ನೇ ತರಗತಿ ಓದುತ್ತಿರುವ ಕುಮಾರ ವೈಭವ್ . ಜಿ. ಬಂಗಾರದ ಪದಕ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾರೆ.

error: Content is protected !!