ಮಹಿಳಾ ಸೇವಾ ಸಮಾಜದ ವಾರ್ಷಿಕೋತ್ಸವ
ಮಹಿಳಾ ಸಮಾಜದ ವಾರ್ಷಿಕೋತ್ಸವವು ಈಚೆಗೆ ನಡೆಯಿತು. ಶ್ರೀಮತಿ ಕೆ.ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಮಾಜದ ವಾರ್ಷಿಕೋತ್ಸವವು ಈಚೆಗೆ ನಡೆಯಿತು. ಶ್ರೀಮತಿ ಕೆ.ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹರಿಹರ : ನಗರಸಭೆ ಸಭಾಂಗಣದಲ್ಲಿ ಇಂದು ನಿಗದಿ ಆಗಿದ್ದ ಬಜೆಟ್ ಪೂರ್ವಭಾವಿ ಪ್ರಥಮ ಸಭೆಯನ್ನು ಸಾರ್ವಜನಿಕರಿಗೆ ಮಾಹಿತಿ ಕೊರತೆ ಕಾರಣದಿಂದ ಮುಂದೂಡಿರುವುದಾಗಿ ನಗರಸಭೆ ಅಧ್ಯಕ್ಷೆ ಕವಿತಾ ತಿಳಿಸಿದರು.
ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮರು ಸಿಂಚನ ವಿದ್ಯಾರ್ಥಿ ಅಭ್ಯಾಸ ಪುಸ್ತಕಗಳನ್ನು 5, 6 ಮತ್ತು 7ನೇ ತರಗತಿಗಳಿಗೆ ವಿತರಿಸಲಾಯಿತು.
ಹರಿಹರ : ನಗರದ ಹೊರ ವಲಯದ ಬನ್ನಿಕೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಹೆಚ್. ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಎಸ್. ಜಯದೇವಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಇದೇ ದಿನಾಂಕ 5 ಮತ್ತು 6 ರಂದು ನಗರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳು ನಡೆಯಲಿದ್ದು, ಇದರ ಅಂಗವಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ನಾಳೆ ದಿನಾಂಕ 3 ರಂದು ಯುವ ಸಮೂಹದಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಕರ್ನಾಟಕ ಸಂಸ್ಕೃತ ವಿಶ್ವವಿ ದ್ಯಾಲಯ ಆಯೋಜಿಸಿದ್ದ ಡಿಪ್ಲೋಮಾ ಇನ್ ಜೋತಿಷ್ಯದಲ್ಲಿ ದಾವಣಗೆರೆ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ವಿದ್ಯಾರ್ಥಿ ಶಾರದಾ ಡಿ.ಆರ್. 448 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸೇವ್ ಅರ್ಥ್ – ಫೋಟೋಗ್ರಫಿ ಗುಂಪಿನಿಂದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ ಅವರನ್ನು 2024ರ ವರ್ಷದ 10 ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರೆಂದು ಪರಿಗಣಿಸಿ ಪ್ರಶಸ್ತಿ ಪತ್ರ ನೀಡಲಾಗಿದೆ.
ಹರಿಹರ : ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಬಂಡೇರ ಪ್ರಭು ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಯ ಮ್ಮನಹಳ್ಳಿಯ ಶಿಕ್ಷಕರಾದ ಬಂದೋಳ ಸಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿ ರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ಹರಿಹರ : ಶ್ರೀ ಶರಣ ಬಸವಲಿಂಗ ಶ್ರೀಗಳು ತಮ್ಮ ಜ್ಞಾನ ಹಾಗೂ ಶಕ್ತಿಯ ಬಲದಿಂದ 256 ಅನುಷ್ಠಾನಗಳನ್ನು ಮಾಡಿ ರಾಷ್ಟ್ರೀಯ ಶ್ರೇಷ್ಠ ಸಂತರಾಗಿ ಹೊರಮ್ಮಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಹೇಳಿದರು.