ಡಾ. ರವಿಕುಮಾರ್‌ಗೆ ಪ್ರಶಸ್ತಿ ಪ್ರದಾನ
ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ಡೆಪ್ಯುಟಿ ಚೀಫ್ ಡೆಂಟಲ್ ಆಫೀಸರ್ ಡಾ. ರವಿಕುಮಾರ್ ಅವರಿಗೆ ದಾವಣಗೆರೆ ಶಾಖೆಯು `ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ನೀಡಿ ಗೌರವಿಸಿದೆ.
ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ಡೆಪ್ಯುಟಿ ಚೀಫ್ ಡೆಂಟಲ್ ಆಫೀಸರ್ ಡಾ. ರವಿಕುಮಾರ್ ಅವರಿಗೆ ದಾವಣಗೆರೆ ಶಾಖೆಯು `ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್’ ನೀಡಿ ಗೌರವಿಸಿದೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ 5 ರಂದು ನಡೆಯುತ್ತಿರುವ ಕನಕದಾಸರ 537ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ವೀಕ್ಷಿಸಿದರು.
ಅಡ್ಡಿ ಆತಂಕಗಳ ನಡುವೆಯೂ ಮೇರು ನಟರಾಗಿ ಬೆಳೆದು, ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿದ್ದ ಕೀರ್ತಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾಧ್ಯಕ್ಷ ವಿ. ತಿರುಮಲೇಶ್ (ಸ್ವಾಮಿ) ಅಭಿಪ್ರಾಯಪಟ್ಟರು.
ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳಿಯ ವತಿಯಿಂದ ನಗರದ ಮಹಾರಾಜಪೇಟೆಯ ಶ್ರೀ ವಿಠಲ ರುಕುಮಾಯಿ ದೇವಸ್ಥಾನದಲ್ಲಿ 6ನೇ ವರ್ಷದ ಶ್ರೀ ವಿಠ್ಠಲ ರುಕುಮಾಯಿ ದೇವರ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀಮದ್ ಭಾಗವತ ಮಹಾ ಪುರಾಣಗಳಲ್ಲಿ ಜ್ಞಾನ ಮತ್ತು ಭಕ್ತಿಯ ಎರಡೂ ವಿಚಾರಗಳು ಸಮರ್ಥವಾಗಿ ಮೂಡಿ ಬಂದಿವೆ ಎಂದು ಹಿರಿಯ ಪ್ರವಚನಕಾರ ಗೋಪಾಚಾರ್ ಮಣ್ಣೂರ್ ಹೇಳಿದರು.
ದಾವಣಗೆರೆ ಎಸ್‌ಪಿಎಸ್ ನಗರದ ಬೂದಾಳ್ ರಸ್ತೆಯಲ್ಲಿರುವ ಸಮರ್ಥ್ ಹೇರ್ ಸಲೂನ್ ವತಿಯಿಂದ ಜಂಗ್ಲಿ ಶಶಿ ಅವರು ಸತತವಾಗಿ 16 ವರ್ಷಗಳಿಂದ ಹೊಸ ವರ್ಷಕ್ಕೆ ವಿನೂತನ ಕೇಶವಿನ್ಯಾಸ ಮಾಡಿಸಿಕೊಂಡು ಶುಭ ಕೋರಿದ್ದಾರೆ
ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಶಾಲೆ ಹತ್ತಿರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದು ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ನಡೆಯಲಿದೆ.
ರಾಣೇಬೆನ್ನೂರು : ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2024-25ನೇ ಸಾಲಿನ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆಂದು ಮಂಗಳವಾರ ಹುಬ್ಬಳ್ಳಿಯ ಪಿಆರ್‌ಎಸ್ ಕಡೆಗೆ ಹೋಗಿ ಬಂದರು.
ಎಸ್ಐ ಮಹಮ್ಮದ್ ರಸೂಲ್ ಹಾಗೂ ಜಗಳೂರು ಪೊಲೀಸ್ ಠಾಣೆಯ ಸಿಹೆಚ್‌ಸಿ ಆರ್.ಟಿ. ಗುರುಮೂರ್ತಿ ಅವರುಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಿನ್ನೆ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
ಮಲೇಬೆನ್ನೂರು : ಶ್ರೀ ಮಾರುತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನವದೆಹಲಿಯ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಸಂಸ್ಥೆ ಉಚಿತವಾಗಿ ನೀಡಿದ ಸ್ಕೂಲ್ ಬ್ಯಾಗ್‌ಗಳನ್ನು ವಿತರಣೆ ಮಾಡಲಾಯಿತು.
ನ್ಯಾಷನಲ್ ಯೋಗ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಹಯೋಗದೊಂದಿಗೆ ಗೋವಾದಲ್ಲಿ ಕಳೆದ ವಾರ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆಯುವುದರ ಮೂಲಕ `ಚಾಂಪಿಯನ್ ಆಫ್ ಚಾಂಪಿಯನ್‌ಶಿಪ್’ ವಿಜೇತರಾಗಿದ್ದಾರೆ.
ಪುಟ್ಟಣ್ಣ ಕಣಗಾಲ್ ಅವರು ನಾಗರ ಹಾವು ಚಿತ್ರದ ಮೂಲಕ ಡಾ. ವಿಷ್ಣುವರ್ಧನ್ ಅವರನ್ನು ಅಂದು ಕನ್ನಡ ಜನತೆಗೆ ಪರಿಚಯಿಸಿದರು. ತನ್ಮೂಲಕ ಒಬ್ಬ ಪ್ರಬುದ್ಧ ಕಲಾವಿದನನ್ನು ಸೃಷ್ಟಿಸಿದ ಕೀರ್ತಿ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲತಕ್ಕದ್ದು