Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಪಾಲಿಸಿ

ಹರಿಹರ : ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಪ್ರೌಢ ಶಾಲೆ ವಿಭಾಗ) 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ದಾವಣಗೆರೆಯ ರಾಮಕೃಷ್ಣ ಆಶ್ರಮದ ತ್ಯಾಗೇಶ್ವರಾನಂದ ಶ್ರೀಗಳು ಸುಮಾರು 65 ಸಾವಿರ ರೂ. ಮೌಲ್ಯದ ಕಲಿಕಾ ಸಾಮಗ್ರಿ ವಿತರಿಸಿದರು. 

ಬೀದಿ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ

ಹೊನ್ನಾಳಿ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಅಖಂಡ ಭಾರತದ ಕನಸುಗಾರರೂ ಡಾ. ಶಾಮ ಪ್ರಸಾದ್ ಮುಖರ್ಜಿ ಅವರ ಹುತಾತ್ಮ ದಿನ ಹಾಗೂ ಕರ್ನಾಟಕ ಕೇಸರಿ ಎಂದೇ ಹೆಸರಾದ ಜನಸಂಘದ ಸಂಸ್ಥಾಪಕರಾದ ಡಾ. ಜಗನ್ನಾಥ್ ರಾವ್ ಜೋಶಿಯವರ ಜನುಮದಿನವನ್ನು  ಹೊನ್ನಾಳಿ ಸ್ವಾಮಿ ವಿವೇಕಾನಂದ ಭಗತ್‍ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಮಹೇಶ್‍ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ರಕ್ತದಾನದಿಂದ ಚುರುಕುತನ, ಜ್ಞಾಪಕಶಕ್ತಿ ವೃದ್ಧಿ

ತುರ್ತು ಸಂದರ್ಭದಲ್ಲಿ ಜೀವಗಳನ್ನುಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಈ ರಕ್ತವನ್ನು ಯಾರೂ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕೆಂದು  ಆಡಳಿತ ವೈದ್ಯಾಧಿಕಾರಿ ಡಾ. ಗೀತಾ  ಹೇಳಿದರು.

ಯತ್ತಿನಹಳ್ಳಿ : ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ್

ರಾಣೇಬೆನ್ನೂರು : ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ ಚ. ಹೊಳಲು ಹಾಗೂ ಉಪಾಧ್ಯಕ್ಷರಾಗಿ ರೂಪಾ ಗ. ಮಾಚೇನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾದರು. 

ಇಂಧನ ಬೆಲೆ ವಿರೋಧಿಸಿ ಹರಿಹರದಲ್ಲಿ ಬಿಜೆಪಿ ಪ್ರತಿಭಟನೆ

ಹರಿಹರ : ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ನಗರದಲ್ಲಿ ಭಾರತೀಯ ಜನತಾ ಪಕ್ಷದ  ಕಾರ್ಯಕರ್ತರು   ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. 

ಮಹಿಳಾ ಸಮಾಜದ ಶಾಲೆಯಲ್ಲಿ ಯೋಗ ದಿನ

ಮಹಿಳಾ ಸೇವಾ ಸಮಾಜದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಟಿ.ಎಂ. ಚಿನ್ನಮ್ಮ ಮಹೇಶ್ವರಯ್ಯ ಮೆಮೋರಿಯಲ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಿನ್ನೆ ನಡೆದ ವಿಶ್ವ ಯೋಗ ದಿನ ಅಂಗವಾಗಿ ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಶ್ರೀಮತಿ ನೀಲಗುಂದ ಜಯಮ್ಮ ಗಿಡಕ್ಕೆ ನೀರೆರೆಯುವ ಮೂಲಕ ಯೋಗ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.

ನೈತಿಕ ಶಿಕ್ಷಣದ ಕೊರತೆಯಿಂದ ಸಮಾಜ ಅಧೋಗತಿಗೆ

ಕೇವಲ ಅಂಕಗಳಿಕೆಗಷ್ಟೇ ಒತ್ತು ನೀಡದೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಮುಖ್ಯವಾಗಿದೆ ಎಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ನಿವೃತ್ತ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ಹೇಳಿದರು.

ಅಕ್ಕಮಹಾದೇವಿ ಸಮಾಜದಿಂದ ಪುರಸ್ಕಾರ

ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಸಮಾಜದ ಸಹಾಯ ನಿಧಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯೋಗದಿಂದ ಮಾನಸಿಕ ಸಮಸ್ಯೆಗೆ ಮದ್ದು

ಹರಪನಹಳ್ಳಿ : ಯೋಗವು ಮಾನಸಿಕ ಸಮಸ್ಯೆಗಳ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು  ಇತ್ತೀಚಿನ ಪರಿಕಲ್ಪನೆಯೇನಲ್ಲ. ಹಿಂದಿನಿಂದಲೂ ವೈದ್ಯರು ಒತ್ತಡ ಸಂಬಂಧಿ ಖಾಯಿಲೆಗೆ ಯೋಗಾಭ್ಯಾಸದ ಸಲಹೆ ನೀಡುತ್ತಿದ್ದರು ಎಂದು ಜಿಲ್ಲಾ ಯೋಗ ಶಿಬಿರದ ಸಂಚಾಲ ಕರಾದ ಕುಸುಮಾ ಜಗದೀಶ್ ಹೇಳಿದರು.

ಕೃಷಿ ಪತ್ತಿನ ಸಂಘಕ್ಕೆ ಸುಶೀಲಮ್ಮ ಅಧ್ಯಕ್ಷೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿರಮಗೊಂಡನಹಳ್ಳಿಯ ಶ್ರೀಮತಿ ಸುಶೀಲಮ್ಮ ರಾಜಪ್ಪ ಅವರು ನಿನ್ನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮತಿ ಜಯಮ್ಮ, ಮಲ್ಲೇಶಪ್ಪ, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!