Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

7ರಂದು ರಂಭಾಪುರಿ ಜಗದ್ಗುರುಗಳ 69ನೇ ಜನ್ಮ ದಿನೋತ್ಸವ

ಕೊಲನುಪಾಕ ಶ್ರೀ ಚಂಡಿಕಾಂಬಾ ಸಮೇತ ಸ್ವಯಂಭೂ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 7 ರಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗ ಳವರ 69ನೇ ಜನ್ಮ ದಿನೋತ್ಸವ ಹಾಗೂ ವೀರಶೈವ ಸಂಸ್ಕೃತಿ ಸಂವರ್ಧನಾ ಸಮಾರಂಭ ನಡೆಯಲಿದೆ.

ತೇಜಸ್ವಿನಿ ಕುರ್ಕಿ ಅವರಿಗೆ ಚಿನ್ನದ ಪದಕ

ನಗರದ ಸೇಂಟ್ ಜಾನ್ಸ್  ಶಾಲೆಯ ವಿದ್ಯಾರ್ಥಿನಿ ಕೆ. ಎಸ್. ತೇಜಸ್ವಿನಿ ಕುರ್ಕಿ ಅವರು 2023 – 24 ನೇ ಶೈಕ್ಷಣಿಕ ಸಾಲಿನ  ಎಸ್.ಎಸ್.ಎಲ್ ಸಿ, ಪರೀಕ್ಷೆಯಲ್ಲಿ 608 (ಶೇ.97.28 ) ಅಂಕಗಳನ್ನು  ಪಡೆದು ವಿಶಿಷ್ಠ ದರ್ಜೆಯಲ್ಲಿ ಸಾಧನೆಗೈದು, ಚಿನ್ನದ ಪದಕ ಪಡೆದು ಪ್ರತಿಭಾನ್ವಿತ ವಿದ್ಯಾರ್ಥಿನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಹೊಸಪಾಳ್ಯ ಕೆರೆಗೆ ಬಾಗಿನ ಅರ್ಪಣೆ

ಮಲೇಬೆನ್ನೂರು : ಹೊಸಪಾಳ್ಯ ಗ್ರಾಮದ ಶ್ರೀ ಕರಿಯಮ್ಮ ದೇವಿ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಭಿವೃದ್ಧಿ ಪಡಿಸಿದ ಬಳಿಕ ಕೆರೆ ಭರ್ತಿಯಾಗಿದ್ದು, ಬುಧವಾರ ಗ್ರಾಮಸ್ಥರು ಕೆರೆಗೆ ಪೂಜೆ ಸಲ್ಲಿಸಿ ಬಾಗಿನ
ಅರ್ಪಿಸಿದರು.

ಹೊಸ ವರ್ಷಕ್ಕೆ ವೃದ್ಧೆಗೆ `ವಾತ್ಸಲ್ಯ’ ಮನೆ

ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿರುವ  `ವಾತ್ಸಲ್ಯ’  ಮನೆಯನ್ನು ಕಡು ಬಡ ಮಹಿಳೆ ರಟ್ಟಿಹಳ್ಳಿ ಸಿದ್ದಮ್ಮ ಅವರಿಗೆ ಬುಧವಾರ ಹೊಸ ವರ್ಷದ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಆಯೋಜನೆಗೆ ಆಗ್ರಹಿಸಲು ಇಂದು ಸಭೆ

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಸರ್ಕಾರವನ್ನು ಒತ್ತಾಯಿಸಲು  ಇಂದು ಮಧ್ಯಾಹ್ನ 3  ಘಂಟೆಗೆ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಸರ್ವ ಕನ್ನಡಿಗರ ಪೂರ್ವಭಾವಿ ಸಭೆ ಕರೆಯಲಾಗಿದೆ.

ಐಗೋಳ ಚಿದಾನಂದ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆ

ಹರಪನಹಳ್ಳಿ : ನಗರ ಮನೋರಂಜನಾ ಕೇಂದ್ರದ ಅಧ್ಯಕ್ಷ ಐಗೋಳ ಚಿದಾನಂದ ಅವರು ಹಡಗಲಿ ತಾಲ್ಲೂಕು ಸಹಕಾರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ನಗರ ಮನೋರಂಜನಾ ಕೇಂದ್ರದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಆಯೋಜನೆಗೆ ಆಗ್ರಹಿಸಲು ನಾಳೆ ಸಭೆ

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಸರ್ವ ಕನ್ನಡಿಗರ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ. 

ಇಂದು ವಿಶ್ವೇಶತೀರ್ಥ ಶ್ರೀಪಾದಂಗಳವರ 5ನೇ ಆರಾಧನೆ

ಅಖಿಲ ಭಾರತ ಮಾಧ್ವ ಮಹಾಮಂಡಲ ಹರಿಹರ ಶಾಖೆ ವತಿಯಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾಂದಂಗಳವರ 5 ನೇ ಆರಾಧನಾ ಮಹೋತ್ಸವವವು  ಇಂದು ಬಿರ್ಲಾ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ

ಹರಿಹರದಲ್ಲಿ ಇಂದು ಡಾ. ಬಸವಲಿಂಗ ಶ್ರೀಗಳ 75ನೇ ವರ್ಷದ ಹುಟ್ಟುಹಬ್ಬ ಆಚರಣೆ

ಹರಿಹರ : ನಗರದ ಹೊಸ ಭರಂ ಪುರ ಬಡಾವಣೆಯ ನೂರ ಎಂಟು ಲಿಂಗೇಶ್ವರ ದೇವಸ್ಥಾನದ ಸ್ವಾಮಿಗಳಾದ ಶರಣ ಡಾ. ಶ್ರೀ ಬಸವಲಿಂಗ ಮಹಾಸ್ವಾಮಿಗಳವರ (ಸೊಲ್ಲಾಪುರ) ಹುಟ್ಟು ಹಬ್ಬವನ್ನು ಜನವರಿ 1 ರಂದು ಅದ್ಧೂರಿ ಯಾಗಿ ಆಚರಣೆ ಮಾಡಲಾಗುತ್ತದೆ

ನಂದಿಬೇವೂರು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಆಯ್ಕೆ

ಹರಪನಹಳ್ಳಿ : ನಂದಿಬೇವೂರು ಗ್ರಾಮದ ವಿವಿಧೋದ್ಧೇದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ  ಚುನಾವಣೆಯಲ್ಲಿ ನಂದಿಬೇವೂರು ಗ್ರಾಮದ ರೇವಣಸಿದ್ದಪ್ಪ ಅವರ ಬೆಂಬಲಿಗ   7 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 

ಕೊಕ್ಕನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಹನುಮಗೌಡ

ಮಲೇಬೆನ್ನೂರು : ಕೊಕ್ಕನೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹನುಮಗೌಡ ಕಡೂರು ಮತ್ತು ಉಪಾಧ್ಯಕ್ಷರಾಗಿ ಎಂ. ಷಣ್ಮುಖ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿರಮಗೊಂಡನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಶಿರಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿನ್ನೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಎ.ಬಿ.ಕರಿಬಸಪ್ಪ, ಸೌಭಾಗ್ಯಮ್ಮ, ಕೆ.ಹೆಚ್. ಶಿವಾಜಿ, ಹೆಚ್.ಜಿ. ಪಂಚಾಕ್ಷರಿ, ಪ್ರದೀಪ್ ರಾಯಪ್ಳ, ಜಿ.ಆರ್.ಹರೀಶ್, ಜಿ.ಮಂಜುನಾಥ್, ಲಕ್ಷ್ಮಣ, ರಮೇಶ್, ದುರುಗಪ್ಪ ಅವರುಗಳು ಚುನಾಯಿತರಾಗಿದ್ದಾರೆ.

error: Content is protected !!