Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ಎಚ್‌. ದಾಸಪ್ಪ ಸೇವಾ ನಿವೃತ್ತಿ : ಸನ್ಮಾನ

ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಹರಿಹರದ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ 23 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಚ್. ದಾಸಪ್ಪ ಅವರನ್ನು ಅವರ ನಿವಾಸದಲ್ಲಿ  ಜಿಲ್ಲಾ ಸರ್ಕಾರಿ ನೌಕರರ ಕಬಡ್ಡಿ ತಂಡದ ವತಿಯಿಂದ ಸನ್ಮಾನಿಸಲಾಯಿತು.

ರೆಡ್‌ಕ್ರಾಸ್‌ ಸಂಸ್ಥೆಯ ಎನ್‌.ಜಿ. ಶಿವಕುಮಾರ್‌ಗೆ ಪ್ರಶಸ್ತಿ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರದಲ್ಲಿ ಜಿಲ್ಲಾ ಆಪ್ತಸಮಾಲೋಚಕ ಮತ್ತು ಸಂಯೋಜಕರಾಗಿರುವ ಮೂಲತಃ ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದವರಾದ ಎನ್‌.ಜಿ. ಶಿವಕುಮಾರ್‌ ಅವರಿಗೆ `ನ್ಯಾಷನಲ್ ಸೋಶಿಯಲ್ ಡೆವಲಪ್ ಮೆಂಟ್’ ಪ್ರಶಸ್ತಿ ಲಭಿಸಿದೆ.

ವಿಜಯನಗರ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ನಗರದ ಆರ್‌ಟಿಓ ಆಫೀಸ್ ಹತ್ತಿರವಿರುವ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ವಿಜಯನಗರ ಬಡಾವಣೆ 3ನೇ ಕ್ರಾಸ್‌ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ತೆರಿಗೆ, ಹಣಕಾಸು, ಅಪೀಲು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯರಾದ ಹೆಚ್.ಉದಯಕುಮಾರ್ ಅವರು ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಆನೆಕೊಂಡ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷರಾಗಿ ಕೊಟ್ರಯ್ಯ ಆಯ್ಕೆ

ಸಮೀಪದ ಆನೆಕೊಂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಟ್ರಯ್ಯ ಬಿನ್‌ ಶರಣಯ್ಯ, ಬಸಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕುಂದುವಾಡ ಯೋಧಾಸ್ – ಅಪ್ಪು ಫೈಟರ್ಸ್ ತಂಡಗಳಿಗೆ ಗೋಲ್ಡನ್ ಕೆಪಿಎಲ್ ಸಮಬಲ ಪ್ರಶಸ್ತಿ

ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಮತ್ತು ಜರವೇ ಯಿಂದ ಅದ್ದೂರಿಯಾಗಿ ನಡೆಸಲಾಗಿದ್ದ ಗೋಲ್ಡನ್ ಕೆಪಿಎಲ್ -6 ಪಂದ್ಯಾವಳಿಗೆ ತೆರೆ ಬಿದ್ದಿದ್ದು, ಡ್ರಾನಲ್ಲಿ ಅಂತ್ಯಗೊಂಡಿತು. 

ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕಿ ಲತಾ ಮಲ್ಲಿಕಾರ್ಜುನ್‌

ಹರಪನಹಳ್ಳಿ : ತಾಲ್ಲೂಕಿನ  ತೆಲಿಗಿ ಗ್ರಾಮಕ್ಕೆ ತೆರಳುತ್ತಿದ್ದ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರು, ಅನಂತನಹಳ್ಳಿ ಬಳಿ ಇರುವ   ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ  ದಿಢೀರ್ ಭೇಟಿ ನೀಡಿದರು. 

ಶರಣ ಸಂಸ್ಕೃತಿ ಮರೆಯುತ್ತಿರುವ ಯುವ ಸಮೂಹ

ಜಾಗತೀಕರಣದ ಭರಾಟೆಯಲ್ಲಿ ಸ್ಥಳೀಯ ಸಂಸ್ಕೃತಿ ಕ್ಷೀಣಿಸುತ್ತಿದ್ದು, ಶರಣ ಸಂಸ್ಕೃತಿಯನ್ನು ಯುವ ಸಮೂಹ ಮರೆಯುತ್ತಿದೆ. ಮಕ್ಕಳಿಗೆ ಆಸ್ತಿ ಮಾಡುವ, ಹಣ ಠೇವಣಿ ಇಡುವ ಅಗತ್ಯವಿಲ್ಲ. ಬದಲಾಗಿ ವಚನಗಳ ಅರಿವು ಮೂಡಿಸಿದರೆ ಸದ್ಗುಣಗಳ ಬೀಜ ಬಿತ್ತಿದಂತಾಗುತ್ತದೆ

ಆಹಾರ ಸಂಸ್ಕರಣೆಯಿಂದ ಕೃಷಿಗಿಂತ ಹೆಚ್ಚು ಉದ್ಯೋಗ ಸೃಷ್ಟಿ

ರಾಣೇಬೆನ್ನೂರು : ಕೃಷಿ ನಂತರ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಹಕಾರಿ ಸಂಘಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯ ಕೊಡಿಸಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ದೈಹಿಕ ವ್ಯಾಯಾಮವಾಗುವ ಕ್ರೀಡೆಯಲ್ಲಿ ಆಸಕ್ತಿ ಇರಲಿ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಬಹಳ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌ ಗೇಮ್‌ ಆಡುವುದ ಕ್ಕಿಂತ ದೈಹಿಕ ವ್ಯಾಯಾಮವಾಗುವ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕಾಂಗ್ರೆಸ್‌ ಯುವ ಮುಖಂಡ ಶಿವರತನ್‌ ಹೇಳಿದರು.

ಐಸಿಸ್ ವಿರುದ್ಧದ ಹೋರಾಟಕ್ಕೆ ಆಫ್ರಿಕಾ ಹೊಸ ರಣರಂಗ

ದಶಕದ ಹಿಂದೆ ಇರಾಕ್ ಹಾಗೂ ಸಿರಿಯಾದಲ್ಲಿ ಖಿಲಾಫತ್ ಘೋಷಿಸಿದ್ದ ಐಸಿಸ್ ಉಗ್ರವಾದಿ ಸಂಘಟನೆ, ತನ್ನ ಸಾಕಷ್ಟು ಪ್ರಾಂತ್ಯಗಳನ್ನು ಕಳೆದುಕೊಂಡಿತ್ತು. ಆದರೆ, ಆಫ್ರಿಕಾದಲ್ಲಿ ತನ್ನ ಪ್ರಭಾವ ಹಾಗೂ ಬೆದರಿಕೆ ಮುಂದುವರೆಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2ನೇ ಶಾಖೆ ಆರಂಭಿಸಲು ಆಗ್ರಹ

ಹರಿಹರ : ನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) 2ನೇ ಶಾಖೆ ಆರಂಭಿಸಲು ಆಗ್ರಹಿಸಿ, ಬ್ಯಾಂಕ್ ಗ್ರಾಹಕರ ಹಿತ ರಕ್ಷಣಾ ಸಮಿತಿಯಿಂದ ಶುಕ್ರವಾರ ತಹಶೀಲ್ದಾರ್ ಗುರುಬಸವರಾಜ್ ಇವರಿಗೆ ಮನವಿ ನೀಡಲಾಯಿತು.

error: Content is protected !!