Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ಸಿಲಿಂಡರ್ ಸ್ಫೋಟ: ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ

ಇಲ್ಲಿನ ರಾಮನಗರದ ಎಸ್‍ಒಜಿ ಕಾಲೋನಿ ಮನೆಯಲ್ಲಿ ಮಂಗಳವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಠ್ಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯ ಸೇರಿಸಲು ಮನವಿ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಕಾಡೆಮಿಕ್‌ ಸಮಿತಿಯು ಬಿ.ಕಾಂ ಪದವಿಯ ಪಠ್ಯಕ್ರಮದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯ ಸೇರಿಸಬೇಕು ಎಂದು ವಿವಿಯ ಕುಲಪತಿಗಳಿಗೆ, ಪ್ರದೇಶ ಕಾಂಗ್ರೆಸ್‌ ಸಮಿತಿಯ ಶಿಕ್ಷಕರು ಹಾಗೂ ಪದವೀಧರ ಘಟಕದ ಮಾಜಿ ರಾಜ್ಯಾಧ್ಯಕ್ಷ ಡಾ.ಆರ್‌.ಎಂ ಕುಬೇರಪ್ಪ ಒತ್ತಾಯಿಸಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ರಕ್ತದಾನ ಶಿಬಿರ

ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಪ್ರಯುಕ್ತ ಚಾರ್ಟರ್ಡ್ ಅಕೌಂಟೆಂಟ್ಸ್ ಭವದಲ್ಲಿ ರಕ್ತದಾನ ಶಿಬಿರ ನಡೆಯಿತು.

ರೋಟರಿ, ಇನ್ನರ್‌ವ್ಹೀಲ್ ಸಂಸ್ಥೆಯಿಂದ ವೈದ್ಯರ ದಿನಾಚರಣೆ, ವೈದ್ಯಕೀಯ ಶಿಬಿರ

ರೋಟರಿ ಮತ್ತು ಇನ್ನರ್‌ವ್ಹೀಲ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ವೈದ್ಯರ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಪೆನ್‌ ವಿತರಣೆ

ಮಲೇಬೆನ್ನೂರು : ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗ ಳೂರಿನ ಕೆಡಿಪಿ ಫೌಂಡೇಶನ್ ವತಿಯಿಂದ ಸಂಸ್ಥೆಯ ತಿಪ್ಪೇಶ್, ಶಶಿಕುಮಾರ್, ರಮೇಶ್ ಅವರುಗಳು ನೋಟ್ ಬುಕ್ ಮತ್ತು ಪೆನ್ನು ವಿತರಣೆ ಮಾಡಿದರು.

ಗುಂಪುಗಾರಿಕೆ-ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಉಚ್ಛಾಟನೆಗೆ ವಿಜಯೇಂದ್ರ ಮುಂದಾಗಲಿ

ಹೊನ್ನಾಳಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ ಬಣದಿಂದ ಲೋಕಸಭಾ ಚುನಾವಣಾ ಸೋಲಿನ ಆತ್ಮಾವಲೋಕನದ ಬಗ್ಗೆ ಸಭೆ ನಡೆಯಿತು.

ಕೇಳುಗರ ಮನಗೆದ್ದ `ಸಿನಿ ಹನಿ’ ಗಾನ

ನಗರದ ಕುವೆಂಪು ಕನ್ನಡ ಭವನದಲ್ಲಿ ಸ್ವರತಂತ್ರ ಗಾಯಕರ ತಂಡದ  ವತಿಯಿಂದ `ನೂರೊಂದು ನೆನಪು ಹಾಡಾಗಿ ಬಂತು…….’ ಶೀರ್ಷಿಕೆಯಡಿ ಏರ್ಪಡಿಸಿದ್ದ `ಸಿನಿಹನಿ’ ಕಾರ್ಯಕ್ರಮ ಕೇಳುಗರ ಮನಗೆದ್ದಿತು.

ಹೊಳೆಸಿರಿಗೆರೆ : ಮಲೇರಿಯಾ ವಿರೋಧಿ ಮಾಸಾಚರಣೆ

ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶ್ರೀ ಮಾಗೋಡ ಹಾಲಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ  ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ಚೇತನ್ ಉದ್ಘಾಟಿಸಿದರು. 

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದಿಂದ ಶಸ್ತ್ರಚಿಕಿತ್ಸೆಗೆ ಧನಸಹಾಯ

ಜಿಲ್ಲಾ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಅನಾರೋಗ್ಯದಿಂದ ಬಳುತ್ತಿರುವ ಶ್ರೀಮತಿ ಅಕ್ಷತಾ ಮತ್ತು  ಮಲ್ಲೇಶ್ ಕಡೇಮನಿ ಅವರುಗಳಿಗೆ ಶಸ್ತ್ರಚಿಕಿತ್ಸೆಗೆ ಧನಸಹಾಯ ಮಾಡಲಾಯಿತು.

ಸಿಲಿಂಡರ್ ಸ್ಫೋಟ : ಮೇಯರ್ ಭೇಟಿ

ಸ್ಥಳೀಯ ರಾಮನಗರದ ಎಸ್‍ಒಜಿ ಕಾಲೋನಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ ಮನೆಗೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಗಡಿಗುಡಾಳ್  ಮಂಜುನಾಥ್, ಪಾಮೇನಹಳ್ಳಿ ನಾಗರಾಜ್ ಭೇಟಿ‌ ನೀಡಿದ್ದರು. 

ವೈದ್ಯ ಸಮೂಹಕ್ಕೆ ನಾಗರಿಕ ಸಮಾಜ ಋಣಿ

ಗುಣಪಡಿಸುವ ಕೈಗಳ, ಕಾಳಜಿಯುಳ್ಳ ಹೃದಯಗಳ ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ವೈದ್ಯ ಸಮೂಹಕ್ಕೆ ಸಮಾಜ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ನುಡಿದರು. 

ಪಾಲಿಕೆ ನಿವೃತ್ತ ನೌಕರರಿಗೆ ಸನ್ಮಾನ

ಮಹಾನಗರ ಪಾಲಿಕೆಯಲ್ಲಿ ನೌಕರರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೊನ್ನೆ ನಿವೃತ್ತರಾಗಿರುವ ಹುಲುಗಮ್ಮ ಸೋಮಲಾಪುರ, ಸರೋಜಮ್ಮ ರಂಗಪ್ಪ, ಬಸವರಾಜ ಅವರನ್ನು ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸನ್ಮಾನಿಸಲಾಯಿತು.

error: Content is protected !!