Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ಬಿ. ಸಂಗಮೇಶ್ವರಗೌಡರು

ಸ್ಥಳೀಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಶಿವ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ಮಾಗನೂರು ಸಂಗಮೇಶ್ವರ ಗೌಡ್ರು ಅಧ್ಯಕ್ಷರಾಗಿ ಮತ್ತು ಹಾಲಿ ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರೀತಿ, ಭಕ್ತಿ, ಗೌರವಗಳಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯ

ಮಲೇಬೆನ್ನೂರು : ಪರಸ್ಪರ ಪ್ರೀತಿ, ಭಕ್ತಿ, ಗೌರವದಿಂದ ಮಾತ್ರ ಶಾಂತಿ, ಸಾಮರಸ್ಯದ ಬದುಕು ಸಾಧ್ಯವಾಗುತ್ತದೆ. ಅಂತಹ ಪ್ರೀತಿ, ಭಕ್ತಿ, ಗೌರವಗಳನ್ನು ನಮಗೆ ಮಠ-ಮಂದಿರಗಳು ಮೊದಲಿನಿಂದಲೂ ಕಲಿಸುತ್ತಾ ಬಂದಿವೆ

ಐದು ವರ್ಷಕ್ಕೊಮ್ಮೆ ನಡೆಯುವ ಹೋತನಹಳ್ಳಿ ಗ್ರಾಮದೇವಿ ಜಾತ್ರೆ

ಐದು ಮಂಗಳವಾರ ದಿನಪೂರ್ತಿ ಗ್ರಾಮ ತೊರೆದು ಹೊರವಲಯದ ಹೊಲ-ಗದ್ದೆಗಳಲ್ಲಿದ್ದು, ಸಂಜೆ ಮನೆಗೆ ತೆರಳುವ ಪದ್ದತಿ ಜಿಲ್ಲೆಯ ಶಿಗ್ಗಾಂವ್‌ ತಾಲ್ಲೂಕು  ಹೋತನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದು, ನಿನ್ನೆ ಆಚರಣೆಗೊಂಡ  ಈ ಗ್ರಾಮ ತೊರೆಯುವ ಪದ್ಧತಿ  ಜ.28 ರವರೆಗೆ  ಒಟ್ಟು ಐದು ವಾರ ನಡೆಯುವುದು.

ಇಂದು `ಶಿಕ್ಷಣ ಅದಾಲತ್-ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ’ ಅಭಿಯಾನ ಮುಂದುವರಿಕೆ

ಸ್ವಾಭಿಮಾನಿ ಬಳಗದ ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಇಂದು ನ್ಯಾಮತಿ-ಹೊನ್ನಾಳಿ ತಾಲ್ಲೂಕುಗಳ ಹತ್ತು ಸರ್ಕಾರಿ ಶಾಲೆಗಳಲ್ಲಿ ಮುಂದುವರಿಯಲಿದೆ.

ನಗರದ ಬಾಪೂಜಿ ದೈಹಿಕ ಶಿಕ್ಷಣ ವಿದ್ಯಾಲಯದ ಸಾಧನೆ

ಅಂತರ್ ವಿಶ್ವ ವಿದ್ಯಾಲಯ ಖೋ ಖೋ  ಪಂದ್ಯಾವಳಿಯಲ್ಲಿ ನಗರದ ಬಾಪೂಜಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ರಾಜು, ಆಕಾಶ್, ಲಕ್ಷ್ಮಣ್, ನೇಸರ್, ಕ್ರೀಡಾಪಟುಗಳು ದಾವಣಗೆರೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಕ್ಕೆ ಅರ್ಹತೆ ಪಡೆದಿದ್ದಾರೆ.

ಕನಕ ಜಯಂತಿಗೆ ಸಿಎಂ ಹಂದರಗಂಬ ಪೂಜೆ, ಸ್ಥಳ ಪರಿಶೀಲನೆ

ಕುರುಬ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ 537ನೇ ಶ್ರೀ ಕನಕದಾಸರ ಜಯಂತ್ಯೋತ್ಸವ ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ 5 ರಂದು ನಡೆಯಲಿರುವ ಕಾರ್ಯಕ್ರಮದ ಅಂಗವಾಗಿ ಹಂದರಗಂಬ ಪೂಜೆ ಹಾಗೂ ಸ್ಥಳ ಪರೀಶಿಲನೆಯನ್ನು ಗುರುವಾರ ಕುರುಬ ಸಮಾಜದ ಮುಖಂಡರು ಮಾಡಿದರು.  

ಮಹಿಳಾ ಸೇವಾ ಸಮಾಜದ ವಾರ್ಷಿಕೋತ್ಸವ

ಮಹಿಳಾ ಸಮಾಜದ ವಾರ್ಷಿಕೋತ್ಸವವು ಈಚೆಗೆ ನಡೆಯಿತು. ಶ್ರೀಮತಿ ಕೆ.ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹರಿಹರ ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಮುಂದೂಡಿಕೆ

ಹರಿಹರ : ನಗರಸಭೆ ಸಭಾಂಗಣದಲ್ಲಿ ಇಂದು ನಿಗದಿ ಆಗಿದ್ದ ಬಜೆಟ್ ಪೂರ್ವಭಾವಿ ಪ್ರಥಮ ಸಭೆಯನ್ನು  ಸಾರ್ವಜನಿಕರಿಗೆ ಮಾಹಿತಿ ಕೊರತೆ ಕಾರಣದಿಂದ   ಮುಂದೂಡಿರುವುದಾಗಿ  ನಗರಸಭೆ ಅಧ್ಯಕ್ಷೆ ಕವಿತಾ ತಿಳಿಸಿದರು.

ಹರಪನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳ ವಿತರಣೆ

ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮರು ಸಿಂಚನ ವಿದ್ಯಾರ್ಥಿ ಅಭ್ಯಾಸ ಪುಸ್ತಕಗಳನ್ನು 5, 6 ಮತ್ತು 7ನೇ ತರಗತಿಗಳಿಗೆ ವಿತರಿಸಲಾಯಿತು.

ಬನ್ನಿಕೋಡು ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಜಯದೇವಪ್ಪ ಆಯ್ಕೆ

ಹರಿಹರ : ನಗರದ ಹೊರ ವಲಯದ ಬನ್ನಿಕೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಹೆಚ್. ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಎಸ್. ಜಯದೇವಪ್ಪ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     

ರಾಜ್ಯ ಮಟ್ಟದ ಯುವಜನೋತ್ಸವ ನಗರದಲ್ಲಿ ಇಂದು ಬೃಹತ್ ಜಾಥಾ

ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಇದೇ ದಿನಾಂಕ 5 ಮತ್ತು 6 ರಂದು ನಗರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳು ನಡೆಯಲಿದ್ದು, ಇದರ ಅಂಗವಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ನಾಳೆ ದಿನಾಂಕ 3 ರಂದು ಯುವ ಸಮೂಹದಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಡಿಪ್ಲೋಮಾ ಇನ್ ಜೋತಿಷ್ಯದಲ್ಲಿ ದಾವಣಗೆರೆಯ ಶಾರದಾ ರಾಜ್ಯಕ್ಕೆ ಪ್ರಥಮ

ಕರ್ನಾಟಕ ಸಂಸ್ಕೃತ ವಿಶ್ವವಿ ದ್ಯಾಲಯ ಆಯೋಜಿಸಿದ್ದ ಡಿಪ್ಲೋಮಾ ಇನ್ ಜೋತಿಷ್ಯದಲ್ಲಿ ದಾವಣಗೆರೆ ಶ್ರೀ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ವಿದ್ಯಾರ್ಥಿ ಶಾರದಾ ಡಿ.ಆರ್. 448 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

error: Content is protected !!