Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು

ನಗರದಲ್ಲಿ ಜೈನ ದಿಗಂಬರ ಮುನಿಗಳಿಗೆ ಭಕ್ತಿಯ ಸ್ವಾಗತ

ಶ್ರೀ ವಿಶುದ್ಧ ಸಾಗರ ಮಹಾರಾಜರು ಸೇರಿ ದಂತೆ 15ಕ್ಕೂ ಅಧಿಕ ದಿಗಂಬರ ಜೈನ ಮುನಿಗಳನ್ನು ದಾವಣಗೆರೆ ಜೈನ ಸಮುದಾಯದ ಮುಖಂಡರು ಭಾನುವಾರ ಸಂಜೆ ಅರಳಿಮರ ವೃತ್ತದ ಬಳಿ ಶ್ರದ್ಧಾ ಭಕ್ತಿಯಿಂದ ಭರಮಾಡಿಕೊಂಡರು.

ಹೆಚ್ಚಾಗುತ್ತಿರುವ ನಾಯಿ ಕಡಿತ

`281′ ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಯಿ ಕಡಿತದಿಂದ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಇದು. ಇದಲ್ಲದೇ  ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೂ ಇರಬಹುದು.

ತೇರು..

ಹರಪನಹಳ್ಳಿ ಪಟ್ಟಣದ ಹಳೆಬಸ್ ನಿಲ್ದಾಣದ ಸಾರಿ ಬಯಲಿನಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಂಜೆ ಅಪಾರ ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು. 

ಅಜಾಗರೂಕ ಚಾಲನೆ, ಅನುಚಿತ ವರ್ತನೆ

ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸುವ ಮೂಲಕ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದ್ದಾರೆ.

ಜನತಾವಾಣಿ ಕಚೇರಿಯಲ್ಲಿ `ಎಜು ಏಷಿಯಾ’ ವಿದ್ಯಾರ್ಥಿಗಳು

ಪತ್ರಿಕೆಗೆ `ಜನತಾವಾಣಿ’ ಎಂದು ಹೆಸರಿಟ್ಟ ಕಾರಣವೇನು? ಹಲವಾರು ಪತ್ರಿಕೆಗಳ ನಡುವೆಯೂ `ಜನತಾವಾಣಿ’ ಹೆಚ್ಚು ಜನಪ್ರಿಯವಾಗಲು ಕಾರಣವೇನು? ಪತ್ರಿಕೆಯಲ್ಲಿ ಬರುವ ಅಷ್ಟೆಲ್ಲಾ ವರದಿಗಳನ್ನು ಹೇಗೆ ಸಂಗ್ರಹಿಸುತ್ತೀರಿ?

ವೃತ್ತಿ ರಂಗಭೂಮಿ ದಿನ ಆಚರಿಸಲು ಒತ್ತಾಯ

ಸರ್ಕಾರವು ನವೆಂಬರ್‌ 14ರಂದು ವೃತ್ತಿ ರಂಗಭೂಮಿ ದಿನ ಆಚರಿಸಲು ಮುಂದಾಗಬೇಕು ಎಂದು ವೃತ್ತಿ ರಂಗ ಭೂಮಿಯ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಸರ್ಕಾರಕ್ಕೆ ಒತ್ತಾಯಿಸಿದರು.

ಗೋಪುರ, ನಾಡನ್ನು ಸುಭೀಕ್ಷಗೊಳಿಸುವಂತಹ ಅಭಿವೃದ್ಧಿಯ ಸಂಕೇತ

ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಶ್ರೀ ಸಾಕ್ಷಿ ವರಸಿದ್ದಿ ವಿನಾಯಕ ಸ್ವಾಮಿ ನೆಲೆ ನಿಂತು 34 ವರ್ಷಗಳಾಗಿವೆ. 34ನೇ ವರ್ಷದ ಸ್ವಾಮಿಯ ಸಂಕಲ್ಪ ಮತ್ತು ಇಚ್ಛೆಯ ಮೇರೆಗೆ ಇಂದು ಗೋಪುರಕ್ಕೆ ಪುನಃ ಕಳಸ ಸ್ಥಾಪನಾ ಅಂಗವಾಗಿ ಪೂಜಾ ಕಾರ್ಯಗಳು, ರುದ್ರಾಭಿಷೇಕ, ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ

ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ

ರಾಷ್ಟ್ರದ ಸ್ವಾತಂತ್ರ್ಯ ಕ್ಕಾಗಿ ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಬಿರ್ಸಾ ಮುಂಡಾ ಅವರಾಗಿದ್ದು ಕೇಂದ್ರ ಸರ್ಕಾರ ಬುಡಕಟ್ಟು ಜನರ ಅಭಿವೃದ್ದಿಗಾಗಿ ಅನುಷ್ಟಾನ ಮಾಡುತ್ತಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಜನರ ಅಭಿವೃದ್ದಿ ಮಾಡಲು ಕ್ರಮವಹಿಸಲಾಗುತ್ತದೆ

`ಬಿಲ್ಡ್‌ಮ್ಯಾಟ್’ ಕಟ್ಟಡ ಸಾಮಗ್ರಿಗಳ ವಸ್ತುಪ್ರದರ್ಶನಕ್ಕೆ ಎಸ್ಸೆಸ್ ಚಾಲನೆ

`ಬಿಲ್ಡ್ ಮ್ಯಾಟ್- ಎಕ್ಸ್‌ಪೋ’ ಕಟ್ಟಡ ಸಾಮಗ್ರಿಗಳ ಇಂಟೀರಿಯರ್, ಎಕ್ಸ್‌ಟೀರಿಯರ್ ಗೃಹಾಲಂಕಾರ ಮತ್ತು ಫರ್ನಿಚರ್ಸ್ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.

ಸಹಕಾರಿ ನಿಬಂಧನೆಗಳನ್ನು ಸರಳೀಕರಿಸಬೇಕಿದೆ

ಕೇಂದ್ರ ಸರ್ಕಾರ ನಿಬಂಧನೆಗಳನ್ನು ಸರಳೀಕರಿಸಿದರೆ ಪ್ರತಿ ಗ್ರಾಮ ಅಥವಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಹಕಾರ ಸಂಘ ಸ್ಥಾಪಿಸುವ ಸರ್ಕಾರದ ಉದ್ದೇಶ ಈಡೇರಲಿದೆ ಎಂದು  ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಹೇಳಿದರು.

ಆರೋಗ್ಯದ ಕಾಳಜಿಗಾಗಿ ರಕ್ತ ತಪಾಸಣೆ ಮಾಡಿಸಿ

ಆರೋಗ್ಯದ ಹಿತ ದೃಷ್ಟಿಯಿಂದ 35 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ರಕ್ತ ತಪಾಸಣೆಗೆ ಒಳಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಸಲಹೆ ನೀಡಿದರು.

‘ಮೊಬೈಲ್ ಬಿಟ್ಟು, ಬಾಲ್ಯ ಸಂಭ್ರಮಿಸುವ ಕಡೆ ಗಮನ ಕೊಡಿ’

ಮಲೇಬೆನ್ನೂರು : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂಬ ಮಾತು ಪೋಷಕರಿಂದಲೇ ಕೇಳಿ ಬರುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಅಷ್ಟು ಸೂಕ್ತವಲ್ಲ.

error: Content is protected !!