Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ

ವಯೋ ನಿವೃತ್ತಿ : ಶಿಕ್ಷಕ ಮಹೇಶಪ್ಪನವರಿಗೆ ಬೀಳ್ಕೊಡುಗೆ

ಮಲೇಬೆನ್ನೂರು : ಪಟ್ಟಣದ ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಶಪ್ಪ ಅವರು ವಯೋ ನಿವೃತ್ತಿ ಹೊಂದಿದ ಕಾರಣ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಮತ್ತು ಎಸ್‌ಡಿಎಂಸಿ ಹಾಗೂ ಶಾಲಾ ಶಿಕ್ಷಕ ವೃಂದದವರು ಸೇರಿ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

ಹರಿಹರದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಸ್ಮರಣೋತ್ಸವ

ಹರಿಹರ : ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 193ನೇ ಪುಣ್ಯ ಸ್ಮರಣೋತ್ಸವವನ್ನು ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ, ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.

ಎಆರ್‌ಜಿ ಕಾಲೇಜಿನಲ್ಲಿ ಬಜೆಟ್ ಅಧಿವೇಶನ ನೇರ ಪ್ರಸಾರದ ವೀಕ್ಷಣೆ

ಬಾಪೂಜಿ ವಿದ್ಯಾಸಂಸ್ಥೆಯ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಿಂದ ಕಾಲೇಜಿನಲ್ಲಿ ನೇರ ಪ್ರಸಾರದಲ್ಲಿ ಕೇಂದ್ರ ಬಜೆಟ್ ಅಧಿವೇಶನವನ್ನು ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ವೀಕ್ಷಿಸಿದರು. 

ಕೆಟಿಜೆ ನಗರ ಠಾಣೆ ಅಂಗಳ ಹಸಿರೀಕರಣ

ಸ್ಥಳೀಯ ಕೆಟಿಜಿ ನಗರ ಪೊಲೀಸ್ ಠಾಣೆ ಆವರಣದಲ್ಲಿ ಹಸಿರೀಕರಣದ ನಿಟ್ಟಿನಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಹಾಗೂ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಪ್ರಭು ಡಿ. ಕೆಳಗಿನಮನಿ ಹಾಗೂ ಸಿಬ್ಬಂದಿಗಳು ಪರಿಸರ ಪ್ರೇಮ ಮೆರೆದರು.

ಕಣವಿ ಆರೋಗ್ಯ ವಿಚಾರಿಸಿದ ಶರಣರು

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ಇಂದು ಭೇಟಿ ನೀಡಿದ್ದ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ, ನಾಡೋಜ ಡಾ. ಚನ್ನವೀರ ಕಣವಿ ಆರೋಗ್ಯವನ್ನು ವಿಚಾರಿಸಿದರಲ್ಲದೆ, ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.

ಬ್ರಾಹ್ಮಣ ಸಂಘದಿಂದ ನಾಡಿಗೇರ, ಉಮೇಶ ವಿಶ್ವರೂಪಗೆ ಅಭಿನಂದನೆ

ರಾಣೇಬೆನ್ನೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ನಗರದ ಗುರುರಾಜ ನಾಡಿಗೇರ ಹಾಗೂ ಉಮೇಶ ವಿಶ್ವರೂಪ ಇವರುಗಳಿಗೆ ನಗರದ ಕೋಟೆ ಪ್ರದೇಶದ ಶಂಕರ ಮಠದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು.

ದೈಹಿಕ ಶಿಕ್ಷಕ ರವಿಕುಮಾರ್ ನಿವೃತ್ತಿ

ನಗರದ ಮಾರುತಿ ಶಾಲೆಯ ದೈಹಿಕ ಶಿಕ್ಷಕ ರವಿಕುಮಾರ್ ಅವರು ನಿವೃತ್ತಿ ಹೊಂದಿದ್ದು, ನಗರದಲ್ಲಿ ಬಾಲ್ ಬ್ಯಾಟ್ ಮಿಂಟನ್ ಆಟವನ್ನು ಬೆಳಿಸಿ, ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಆಟ ಆಡುತ್ತಿರುವ ಕುಮಾರಸ್ವಾಮಿ, ಮಧುಸೂದನ್, ಹರೀಶ್ ರೆಡ್ಡಿ, ಶಶಿಕುಮಾರ್ ಇನ್ನಿತರೇ ಆಟಗಾರರನ್ನು ಬೆಳಿಸಿದ ಕೀರ್ತಿ ರವಿಕುಮಾರ್ ಸಲ್ಲುತ್ತದೆ. 

ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಕುಂಬಳೂರಿನ ಪೂಜಾ ಪ್ರಥಮ ರ್ಯಾಂಕ್

ಮಲೇಬೆನ್ನೂರು : ಕುಂಬ ಳೂರು ಗ್ರಾಮದ ಎಂ.ಎಸ್.ಪೂಜಾ ಅವರು ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಮೊದಲ ರಾಂಕ್ ಪಡೆದಿದ್ದಾರೆ. ಪೂಜಾ ಅವರು, ಕುಂಬಳೂರಿನ ಹಿರಿಯರಾದ ಮಾಗಾನಹಳ್ಳಿ ಹಾಲಪ್ಪನವರ ಮೊಮ್ಮ ಗಳು ಹಾಗೂ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಉಮಾದೇವಿ ಎಂ.ಹೆಚ್. ಶಿವರಾಮಚಂದ್ರಪ್ಪ ದಂಪತಿ ಪುತ್ರಿ. 

ಭರಮಸಾಗರದ ಪಾಷಾ ಆಯ್ಕೆ

ಭರಮಸಾಗರ : ರಾಜ್ಯ ಕಾಂಗ್ರೆಸ್ ಕಿಸಾನ್ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಭರಮಸಾಗರದ ದಿ|| ಹಯಾತ್ ಸಾಬ್‌ರ ಮಗ ಗ್ರಾ.ಪಂ. ಮಾಜಿ ಅಧ್ಯಕ್ಷ ಶಮೀಮ್ ಪಾಷಾ ಅವರ ನಿವಾಸಕ್ಕೆ ಮಾಜಿ ಸಚಿವ ಹೆಚ್. ಆಂಜನೇಯ ಭೇಟಿ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬಷೀರ್ ಸಾಬ್ ಇತರರು ಇದ್ದರು.

ಜಿಎಂಐಟಿ : ಹಲವು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ  ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ನಡೆದ ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿ ಯ ಹಲವು ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ

ಜಗಳೂರು : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಜಗಳೂರು ತಾಲ್ಲೂಕಿನ ಬಿಳಿಚೋಡು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿಗಳಿಗೆ, ಬಿಳಿಚೋಡು ಶೆಟ್ರು ಕಲಿವೀರಪ್ಪ ಮತ್ತು ಚನ್ನಬಸಮ್ಮ ಮನೋಲಿ  ಟ್ರಸ್ಟ್ ಹಾಗು ದಾವಣಗೆರೆ ರೋಟರಿ ಕ್ಲಬ್ ವತಿಯಿಂದ ನೀಡಲಾದ  ವಿದ್ಯಾಸೇತು ಪುಸ್ತಕಗಳನ್ನು ವಿತರಿಸಲಾಯಿತು.

error: Content is protected !!