Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ

ಮಹೇಶ್ ಗೌಡ ಅವರಿಗೆ `ಕಿಶೋರ್’ ಪ್ರಶಸ್ತಿ

ಹರಿಹರ : ನಗರದ ಗಾಂಧಿ ಮೈದಾನದಲ್ಲಿ  ರಾಜ್ಯ ಕುಸ್ತಿ ಜೀರ್ಣೋದ್ಧಾರ ಸಮಿತಿಯಿಂದ ನಡೆ ಯುತ್ತಿರುವ ಹೊನಲು ಬೆಳಕಿನ ಕುಸ್ತಿ ಪಂದ್ಯದಲ್ಲಿ ಹರಿಹರ ಕಿಶೋರ್ ಪ್ರಶಸ್ತಿಯನ್ನು ಮಹೇಶ್ ಗೌಡ ಅವರಿಗೆ ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಬಹುಮಾನ ವಿತರಣೆ ಮಾಡಿದರು. 

ವೀರಶೈವ ಮಹಾಸಭಾದ ಉಮೇಶ್ ಪಾಟೀಲ್ ಅವರಿಗೆ ಸನ್ಮಾನ

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಕೈಗಾರಿಕೆ ಮತ್ತು  ವಾಣಿಜ್ಯ  ಸಮಿತಿಯ ರಾಜ್ಯ ಅಧ್ಯಕ್ಷ ಉಮೇಶ್ ಪಾಟೀಲ್‍ ಅವರಿಗೆ ದೂಡಾ ಅಧ್ಯಕ್ಷ ಹಾಗೂ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.

ಚಂಪಾ ನಿಧನಕ್ಕೆ ಹೆಚ್‌ಬಿಎಂ ಸಂತಾಪ

ಸಾಹಿತಿ ಪ್ರೊ. ಚಂದ್ರ ಶೇಖರ ಪಾಟೀಲ ಅವರ ನಿಧನಕ್ಕೆ ನಗರದ ಹಿರಿಯ ವ್ಯಂಗ್ಯ ಚಿತ್ರ ಕಾರ  ಹೆಚ್.ಬಿ. ಮಂಜು ನಾಥ್  ಸಂತಾಪ ವ್ಯಕ್ತಪಡಿಸಿದ್ದಾರೆ.

ಮಲೇಬೆನ್ನೂರಿನಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌

ಮಲೇಬೆನ್ನೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡುವ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಜಿಪಿಜಿಎಂ ಶಾಲೆಯಲ್ಲಿ ರಾವತ್‌ಗೆ ಶ್ರದ್ಧಾಂಜಲಿ

ಆವರಗೆರೆಯ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ  ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಸಾವಿಗೀಡಾದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್‍ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸರ್ ಎಂ.ವಿ.ಕಾಲೇಜಿನಲ್ಲಿ ಲಸಿಕೆ

ನಗರದ ಸರ್ ಎಂ.ವಿ.ಕಾಲೇಜಿನಲ್ಲಿ ಕೋವಿಡ್ ಲಸಿಕೆಯನ್ನು ಕಾಲೇಜಿನ ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಕಾಲೇಜಿನ ಕಾರ್ಯದರ್ಶಿ ಎಸ್.ಜೆ.ಶ್ರೀಧರ್ ತಿಳಿಸಿದ್ದಾರೆ.

ರಾಮೇಶ್ವರ : ಪೌಷ್ಟಿಕ ಕೈತೋಟದ ತರಬೇತಿ

ನ್ಯಾಮತಿ : ದಾವಣಗೆರೆಯ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಸಾಪುರದ ಸರ್ಕಾರಿ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ

ಇಲ್ಲಿನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಾಗಾರ ನಡೆಯಿತು.

ಅನುದಾನಕ್ಕೆ ಸಿಎಂ ಬಳಿ ರಾಮಪ್ಪ ಮನವಿ

ಹರಿಹರ : ಶಾಸಕ ಎಸ್. ರಾಮಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ, ಹರಿಹರ ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಲು ವಿನಂತಿಸಿಕೊಂಡಿದ್ದಾರೆ.

ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ

ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ನಳಿನ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕೃಷ್ಣೋಜಿರಾವ್ ಸಾವಂತ್, ಗೋಪಾಲರಾವ್ ಸಾವಂತ್, ಹನುಮಂತರಾವ್ ಸುರ್ವೆ, ಗಣೇಶರಾವ್, ಚೇತನಾಬಾಯಿ, ವಿಜಯ ಪಿಸಾಳೆ ಭಾಗವಹಿಸಿದ್ದರು.

ಎಆರ್‌ಜಿ ಪಿಯು ಕಾಲೇಜಿನಲ್ಲಿ ಲಸಿಕೆ

ನಗರದ ಎಆರ್‌ಜಿ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಯ  ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್‌ ಲಸಿಕೆ ಹಾಕುವ ಕಾರ್ಯಕ್ರಮ ಇಂದು ನಡೆಯಿತು.

ತೆರೆದಿರುವ ಒಳಚರಂಡಿ ಬಾಯಿಯನ್ನು ಮುಚ್ಚಿ, ದುರಸ್ತಿಗೊಳಿಸುವಂತೆ ಒತ್ತಾಯ

ಹರಪನಹಳ್ಳಿ : ಪಟ್ಟಣದ ತೋಟಗಾರಿಕೆ ಇಲಾ ಖೆಯ ಹತ್ತಿರ ಇರುವ ಅರಸಿಕೇರಿ – ಕೊಟ್ಟೂರು ಬೈಪಾಸ್ ರಸ್ತೆ ಬಳಿ ಇರುವ ಒಳಚರಂಡಿ ಯನ್ನು ರಸ್ತೆ ಪಕ್ಕದಲ್ಲಿ ಈ ಹಿಂದೆ ನಿರ್ಮಾಣ ಮಾಡಲಾಗಿದೆ.

error: Content is protected !!