Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ

ಹರಪನಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಗೆ ಆಯ್ಕೆ

ಹರಪನಹಳ್ಳಿ : ಕರ್ನಾಟಕ ರಕ್ಷಣಾ ವೇದಿಕೆಯ ವಿಜಯ ನಗರ ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಎಚ್. ಬಾಲಾಜಿ ನೇಮಕಗೊಂಡಿದ್ದಾರೆ ಎಂದು ವಿಜಯ ನಗರ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ತಿಳಿಸಿದ್ದಾರೆ.

ಪತ್ರಿಕಾ ವಿತರಕರ ಸಂಘಕ್ಕೆ ಕಾಳೇರ ಆಯ್ಕೆ

ರಾಣೇಬೆನ್ನೂರು : ರಾಜ್ಯ ಪತ್ರಿಕಾ ವಿತರಕರ ಕ್ಷೇಮಾ ಭಿವೃದ್ಧಿ ಸಂಘದ ಸಹ ಕಾರ್ಯದರ್ಶಿಯಾಗಿ ರಾಣೇಬೆನ್ನೂರಿನ ಕನ್ನಡ ಪ್ರಭ ಏಜೆಂಟ್ ಪರಶುರಾಮ ಕಾಳೇರ ಅವರು ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಉಪಾಧ್ಯಕ್ಷರಾಗಿ ಹರಳಹಳ್ಳಿ ಚಂದ್ರಪ್ಪ

ಹೊನ್ನಾಳಿ : ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್  ಉಪಾಧ್ಯಕ್ಷರಾಗಿ ಹರಳಹಳ್ಳಿಯ  ಎ.ಹೆಚ್.ಚಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಖಾದ್ರಿ ಅಕಾಡೆಮಿಗೆ ಅಮಾನುಲ್ಲಾ ಅಧ್ಯಕ್ಷ

ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೌಲಾನಾ ಮೊಹಮ್ಮದ್‌ ಹನೀಫ್ ರಜಾ ಖಾದ್ರಿ ಅಕಾಡೆಮಿಯ ಅಧ್ಯಕ್ಷರಾಗಿ ಜೆ. ಅಮಾನುಲ್ಲಾ ಖಾನ್‌, ಕಾರ್ಯಾಧ್ಯಕ್ಷರಾಗಿ ಕೆ. ಜಮೀಲ್‌ ಹುಸೇನ್‌, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್‌ ಬಾಷಾ, ಕೋಶಾಧಿಕಾರಿಯಾಗಿ ಎಸ್‌.ಎಂ. ರಶೀದ್‌ ಹುಸೇನ್‌ ಆಯ್ಕೆಯಾಗಿದ್ದಾರೆ.

20ನೇ ವಾರ್ಡ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

ನಗರದ 20ನೇ ವಾರ್ಡಿನ  ಕಾಂಗ್ರೆಸ್ ಪಕ್ಷದ ಘಟಕವನ್ನು ಪುನರ್‌ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಅಲೆಕ್ಸಾಂಡರ್ (ಜಾನ್,) ಅಧ್ಯಕ್ಷರಾಗಿ ರಾಘವೇಂದ್ರ ಡಿ, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ವಿ, ರಾಜು ಕೆ, ಜಗನ್ ಎನ್, ಮಾರುತಿ ಆಯ್ಕೆಯಾಗಿದ್ದಾರೆ.

ಅಣಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂತೋಷ್‌

ತಾಲ್ಲೂಕಿನ ಅಣಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೆಳ್ಳೆಕಟ್ಟೆ ಎಂ.ಆರ್. ಸಂತೋಷ್ ಹಾಗೂ ಉಪಾಧ್ಯಕ್ಷರಾಗಿ ಅಣಜಿಯ ಆರ್.ಹೆಚ್. ಪ್ರಕಾಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಅಂಬಾಭವಾನಿ ಬ್ಯಾಂಕ್‌ಗೆ ಎ. ಕಿರಣ್‌ಕುಮಾರ್‌ ಅಧ್ಯಕ್ಷ

ನಗರದ ಶ್ರೀ ಅಂಬಾಭವಾನಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಹಿರಿಯ ಲೆಕ್ಕಪರಿಶೋಧಕ ಎ.ಕಿರಣ್‌ಕುಮಾರ್, ಉಪಾಧ್ಯಕ್ಷರಾಗಿ ಭರಣಿ ರೆಸ್ಟೋರೆಂಟ್ ಮಾಲೀಕ ಜಿ.ಎಂ.ಪರಶುರಾಮ್‌ ರಾವ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕುರುಬರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಕೊಕ್ಕನೂರು ದ್ಯಾಮಣ್ಣ

ದಾವಣಗೆರೆ ಜಿಲ್ಲಾ ಕುರುಬರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಕುರುಬ ಸಮಾಜದ ಹಿರಿಯ ಮುಖಂಡ ಕೊಕ್ಕನೂರು ದ್ಯಾಮಣ್ಣ ಆಯ್ಕೆಯಾಗಿದ್ದಾರೆ.

ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾಗಿ ಆವರಗೆರೆ ಉಮೇಶ್

ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾಗಿ ನಗರದ ಆವರಗೆರೆ ಹೆಚ್‌.ಜಿ‌. ಉಮೇಶ್ ಆಯ್ಕೆಯಾಗಿದ್ದಾರೆ‌.

error: Content is protected !!