ಅತ್ತಿಗೆರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಬಸವರಾಜ್
ಅತ್ತಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಿ.ಎಂ. ಬಸವರಾಜ್ ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ.
ಅತ್ತಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಿ.ಎಂ. ಬಸವರಾಜ್ ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ : ಕರ್ನಾಟಕ ರಕ್ಷಣಾ ವೇದಿಕೆಯ ವಿಜಯ ನಗರ ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಎಚ್. ಬಾಲಾಜಿ ನೇಮಕಗೊಂಡಿದ್ದಾರೆ ಎಂದು ವಿಜಯ ನಗರ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ತಿಳಿಸಿದ್ದಾರೆ.
ರಾಣೇಬೆನ್ನೂರು : ರಾಜ್ಯ ಪತ್ರಿಕಾ ವಿತರಕರ ಕ್ಷೇಮಾ ಭಿವೃದ್ಧಿ ಸಂಘದ ಸಹ ಕಾರ್ಯದರ್ಶಿಯಾಗಿ ರಾಣೇಬೆನ್ನೂರಿನ ಕನ್ನಡ ಪ್ರಭ ಏಜೆಂಟ್ ಪರಶುರಾಮ ಕಾಳೇರ ಅವರು ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊನ್ನಾಳಿ : ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಉಪಾಧ್ಯಕ್ಷರಾಗಿ ಹರಳಹಳ್ಳಿಯ ಎ.ಹೆಚ್.ಚಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊನ್ನಾಳಿ : ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿದರಗಡ್ಡೆ ಬಿ.ಹೆಚ್. ಜಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೌಲಾನಾ ಮೊಹಮ್ಮದ್ ಹನೀಫ್ ರಜಾ ಖಾದ್ರಿ ಅಕಾಡೆಮಿಯ ಅಧ್ಯಕ್ಷರಾಗಿ ಜೆ. ಅಮಾನುಲ್ಲಾ ಖಾನ್, ಕಾರ್ಯಾಧ್ಯಕ್ಷರಾಗಿ ಕೆ. ಜಮೀಲ್ ಹುಸೇನ್, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಬಾಷಾ, ಕೋಶಾಧಿಕಾರಿಯಾಗಿ ಎಸ್.ಎಂ. ರಶೀದ್ ಹುಸೇನ್ ಆಯ್ಕೆಯಾಗಿದ್ದಾರೆ.
ನಗರದ 20ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಘಟಕವನ್ನು ಪುನರ್ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಅಲೆಕ್ಸಾಂಡರ್ (ಜಾನ್,) ಅಧ್ಯಕ್ಷರಾಗಿ ರಾಘವೇಂದ್ರ ಡಿ, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ವಿ, ರಾಜು ಕೆ, ಜಗನ್ ಎನ್, ಮಾರುತಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಅಣಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೆಳ್ಳೆಕಟ್ಟೆ ಎಂ.ಆರ್. ಸಂತೋಷ್ ಹಾಗೂ ಉಪಾಧ್ಯಕ್ಷರಾಗಿ ಅಣಜಿಯ ಆರ್.ಹೆಚ್. ಪ್ರಕಾಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹೊನ್ನಾಳಿ : ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಎಂ. ಮಧು ಶಿವಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಶ್ರೀ ಅಂಬಾಭವಾನಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಹಿರಿಯ ಲೆಕ್ಕಪರಿಶೋಧಕ ಎ.ಕಿರಣ್ಕುಮಾರ್, ಉಪಾಧ್ಯಕ್ಷರಾಗಿ ಭರಣಿ ರೆಸ್ಟೋರೆಂಟ್ ಮಾಲೀಕ ಜಿ.ಎಂ.ಪರಶುರಾಮ್ ರಾವ್ ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲಾ ಕುರುಬರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಕುರುಬ ಸಮಾಜದ ಹಿರಿಯ ಮುಖಂಡ ಕೊಕ್ಕನೂರು ದ್ಯಾಮಣ್ಣ ಆಯ್ಕೆಯಾಗಿದ್ದಾರೆ.
ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾಗಿ ನಗರದ ಆವರಗೆರೆ ಹೆಚ್.ಜಿ. ಉಮೇಶ್ ಆಯ್ಕೆಯಾಗಿದ್ದಾರೆ.