Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ

ಉಪಾಧ್ಯಕ್ಷರಾಗಿ ಬಿ.ಎಸ್. ಚಂದ್ರಪ್ಪ

ಆಕಸ್ಮಿಕವಾಗಿ ತೆರವಾದ ಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಎಸ್. ಚಂದ್ರಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹರಪನಹಳ್ಳಿ : ಕ್ರೀಡೆಯಲ್ಲಿ ಅಮರೇಶ್ ಗುತ್ತೇದಾರ ರಾಜ್ಯ ಮಟ್ಟಕ್ಕೆ ಆಯ್ಕೆ

ಹರಪನಹಳ್ಳಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಳ್ಳಾರಿ ಹಾಗೂ ಕರ್ನಾಟಕ ರಾಜ್ಶ ಸರ್ಕಾರಿ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಅಮರೇಶ ಗುತ್ತೇದಾರ ಭಾಗವಹಿಸಿ, ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಸಿರಿಗೆರೆ : 88ರ ವೃದ್ಧೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಸಿರಿಗೆರೆ : ಚಿಕ್ಕ ಎಮ್ಮಿಗನೂರು ಗ್ರಾಮದ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ 88 ವರ್ಷದ ದಾಕ್ಷಾಯಣಮ್ಮ ಆಯ್ಕೆಯಾಗಿದ್ದಾರೆ.

22ನೇ ವಾರ್ಡ್ ಯಲ್ಲಮ್ಮ ನಗರಕ್ಕೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದ ಮೇಯರ್

ಮಹಾನಗರ ವ್ಯಾಪ್ತಿಯ 22ನೇ ವಾರ್ಡ್ ಯಲ್ಲಮ್ಮ ನಗರದಲ್ಲಿ ಇದೇ ದಿನಾಂಕ 15ರ ಸೋಮವಾರ ಶ್ರೀ ಸಿದ್ಧಿ ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ಮಹಾನಗರ ಪಾಲಿಕೆಯಿಂದ `ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಜಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. 

ಜೆಡಿಎಸ್ ವೀಕ್ಷಕರ ಆಯ್ಕೆ

ಜೆಡಿಎಸ್ ಜಿಲ್ಲಾ ವೀಕ್ಷಕರಾಗಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆ. ಅಮಾನುಲ್ಲಾ ಖಾನ್, ಹೊದಿಗೆರೆ ರಮೇಶ್ ನೇಮಕಗೊಂಡಿದ್ದಾರೆ.

ಮಲೇಬೆನ್ನೂರು ಪುರಸಭೆ ಸಿಓ ಆಗಿ ಉದಯಕುಮಾರ್

ಮಲೇಬೆನ್ನೂರು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮುಂದಿನ ಆದೇಶದವರೆಗೆ ಪುರಸಭೆ ಮುಖ್ಯಾಧಿಕಾರಿಯನ್ನಾಗಿ ಹರಿಹರ ನಗರಸಭೆ ಪೌರಾಯುಕ್ತ ಉದಯಕುಮಾರ್ ಬಿ. ತಳವಾರ ಮತ್ತು ಇಂಜಿನಿಯರನ್ನಾಗಿ ದಾವಣಗೆರೆ ಮಹಾನಗರ ಪಾಲಿಕೆ ಕಿರಿಯ ಅಭಿಯಂತರ ಮನೋಜ್ ಅವರನ್ನು ನಿಯೋಜನೆ ಮಾಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ಚಳ್ಳಕೆರೆ : ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ.

ಹಾಲಿವಾಣ ಗ್ರಾ.ಪಂ. ಅಧ್ಯಕ್ಷರಾಗಿ ರಂಗನಾಥ್, ಉಪಾಧ್ಯಕ್ಷರಾಗಿ ಅಂಜಿತಾ ಸಂತೋಷ್‌ಕುಮಾರ್

ಮಲೇಬೆನ್ನೂರು : ಹಾಲಿವಾಣ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕೊಮಾರನಹಳ್ಳಿಯ ಐ.ಪಿ. ರಂಗನಾಥ್ ಮತ್ತು ಉಪಾಧ್ಯಕ್ಷರಾಗಿ ಹಾಲಿವಾಣದ ಶ್ರೀಮತಿ ಅಂಜಿತಾ ಸಂತೋಷ್‌ಕುಮಾರ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

error: Content is protected !!