ರಾಜ್ಯ ವೀರಶೈವ ಪಂಚಮಸಾಲಿ ಸಮಾಜಕ್ಕೆ ನೇಮಕ
ಹೊನ್ನಾಳಿ : ವೀರಶೈವ ಪಂಚಮ ಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರನ್ನಾಗಿ ಹೊನ್ನಾಳಿ ಪಟ್ಟಣಶೆಟ್ಟಿ ಪರ ಮೇಶ್ ನೇಮಕಗೊಂಡಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಅವರು ತಿಳಿಸಿದ್ದಾರೆ.
ಹೊನ್ನಾಳಿ : ವೀರಶೈವ ಪಂಚಮ ಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರನ್ನಾಗಿ ಹೊನ್ನಾಳಿ ಪಟ್ಟಣಶೆಟ್ಟಿ ಪರ ಮೇಶ್ ನೇಮಕಗೊಂಡಿದ್ದಾರೆ ಎಂದು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಅವರು ತಿಳಿಸಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಸ್ವಯಂ ಸೇವಕರಾದ ಕುಮಾರಿ ಶ್ವೇತಾ ನಂದಿಹಳ್ಳಿ ಇವರು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಹಾಗೂ ಕುಮಾರ ಸುನಿಲ್ ಘಟರೆಡ್ಡಿ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಯೂತ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ.
ಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ವಿ.ಎಸ್. ವೀರಭದ್ರಪ್ಪ, ಉಪಾಧ್ಯಕ್ಷರಾಗಿ ಜಯಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.
ದಾವಣಗೆರೆ ವರದಿಗಾರರ ಕೂಟದ ನೂತನ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ವರದಿಗಾರರ ಕೂಟ ದಲ್ಲಿ ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾಗಿ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿಯಾಗಿ ಮಧು ನಾಗರಾಜ್ ಕುಂದುವಾಡ ಅವಿರೋಧ ಆಯ್ಕೆ ಯಾಗಿದ್ದಾರೆ.
ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಗೋವಿನಹಾಳ್ ಗ್ರಾಮದ ಶ್ರೀಮತಿ ಜಯಮ್ಮ ಕೋಂ ಎ.ಪಿ.ರಂಗಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಿಯಾಣ ರಾಜ್ಯದ ಚಂಡಿಘಡದಲ್ಲಿ ಇದೇ ದಿನಾಂಕ 5 ರಿಂದ 8 ರವರೆಗೆ ಅಖಿಲ ಭಾರತ ನಾಗರಿಕ ಸೇವಾ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಗೆ ನಗರದ ದಾವಣಗೆರೆ ನ್ಯಾಯಾಂಗ ಇಲಾಖೆಯ ಭೂಲಕ್ಷ್ಮಿ 59 ಕೆ.ಜಿ. ವಿಭಾಗ, ಟಿ.ಬಿ.ಸುರೇಶ್ 76 ಕೆ.ಜಿ. ವಿಭಾಗ ಹಾಗೂ ಇ.ಎಸ್.ಐ. ಆಸ್ಪತ್ರೆಯ ಶುಶ್ರೂಷಕಿ ಪಿ.ಎಂ. ಕವಿತ 57 ಕೆ.ಜಿ. ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುವರು .
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ದಾವಣಗೆರೆ ಜಿಲ್ಲಾ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಹರಪನಹಳ್ಳಿ : ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ತಾಲ್ಲೂಕಿನ ಬಿಜೆಪಿ ಮುಖಂಡ ಕೆ. ರಾಘವೇಂದ್ರ ಶೆಟ್ಟಿ ಅವರು ನಾಮ ನಿರ್ದೇಶಕ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾ ಗೌರವಾಧ್ಯಕ್ಷರಾಗಿ ಶ್ರೀಮತಿ ಅಮೀರ ಬಾನು ಅವರನ್ನು ಆಯ್ಕೆ ಮಾಡಲಾಯಿತು.
ಅಂಗಡಿ ಮಾಲೀಕ ಟೀ ಕುಡಿಯಲು ತೆರಳಿದ್ದಾಗ ಅಪರಿಚಿತ ವ್ಯಕ್ತಿ 10 ಸಾವಿರ ಕಳ್ಳತನ ಮಾಡಿಕೊಂಡು ಹೋದ ಘಟನೆ ನಗರದ ಹದಡಿ ರಸ್ತೆಯಲ್ಲಿರುವ ಟೈಲ್ಸ್ ಅಂಗಡಿಯಲ್ಲಿ ಹಾಡಹಗಲೇ ನಡೆದಿದೆ.
ನಗರದ ಇಂಡಿಯನ್ ಡೆಂಟಲ್ ಅಸೋಸಿಯೇಷನ್ನಿನ ಸಾಮಾನ್ಯ ವಾರ್ಷಿಕ ಸಭೆ ಮೊನ್ನೆ ನಡೆದ ಸಂದರ್ಭದಲ್ಲಿ ಅಸೋಸಿಯೇಷನ್ನಿನ ಅಧ್ಯಕ್ಷರಾಗಿ ಡಾ|| ಎಂ.ಎನ್. ಹೊಂಬೇಶ್, ಕಾರ್ಯದರ್ಶಿಯಾಗಿ ಡಾ|| ಬಿ.ಜಿ. ಪ್ರಸನ್ನ, ಖಜಾಂಚಿಯಾಗಿ ಡಾ|| ಬಿ. ಪ್ರವೀಣ್ ಆಯ್ಕೆಯಾಗಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಪಂ ಅಧ್ಯಕ್ಷೆಯಾಗಿ ಡಿ.ಕೆ. ಅನಿತಾ ಕರಿಬಸಪ್ಪ, ಉಪಾಧ್ಯಕ್ಷೆಯಾಗಿ ರೇಣುಕಮ್ಮ ಚಿಕ್ಕಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಜಿ.ಪಂ. ಮಾಜಿ ಸದಸ್ಯ ಎಂ.ಆರ್. ಮಹೇಶ್ ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಅಭಿನಂದಿಸಿದರು.